ಸಿಂದಗಿ (ವಿಜಯಪುರ):ತಾಲ್ಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ನಕಲಿ ವೈದ್ಯ ನಡೆಸುತ್ತಿದ್ದ ಖಾಸಗಿ ಕ್ಲಿನಿಕ್ ಮೇಲೆ ತಾಲ್ಲೂಕು ವೈದ್ಯಕೀಯ ತಂಡದ ಸದಸ್ಯರು ಸೋಮವಾರ ಸಂಜೆ ಹಠಾತ್ ದಾಳಿ ನಡೆಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ತಾಲ್ಲೂಕು ವೈದ್ಯಾಧಿಕಾರಿ ಡಾ.ರಾಮಕೃಷ್ಣ ಇಂಗಳೆ ನೇತೃತ್ವದಲ್ಲಿ ಐ.ಎಂ.ಎ ವೈದ್ಯಕೀಯ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಗಿರೀಶ ಕುಲಕರ್ಣಿ, ತಾಲ್ಲೂಕು ವೃತ್ತಿಪರ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ.ಸಂಗಮೇಶ ಪಾಟೀಲ ಗ್ರಾಮಕ್ಕೆ ತೆರಳಿ, ಹೊರ ರಾಜ್ಯದ ನಕಲಿ ವೈದ್ಯ ನಿಹಾರ ಬೈರಾಗಿ ಬಾರೋ ಎಂಬ ವ್ಯಕ್ತಿಯ ಕ್ಲಿನಿಕ್ ಮೇಲೆ ದಾಳಿ ನಡೆಸಿದ್ದಾರೆ.

ಈ ಸಂದರ್ಭ ನಕಲಿ ವೈದ್ಯ ಆಸ್ಪತ್ರೆಯಲ್ಲಿ ಇರಲಿಲ್ಲ. ಗ್ರಾಮದ ಗುಂಡಯ್ಯ ಕಾಯಕಮಠ, ಶಂಕರಲಿಂಗ ಡಂಗಿ, ಸಂಗಮೇಶ ಮಾಲಿಪಾಟೀಲ, ಶ್ರೀಧರ ಮಾಲಿಪಾಟೀಲ, ಪರಶುರಾಮ ಮಾವೂರ ಸಮ್ಮುಖದಲ್ಲಿ ಕ್ಲಿನಿಕ್ ಪ್ರವೇಶಿಸಿ ಅಲ್ಲಿದ್ದ ಅಲೋಪತಿಕ್ ಔಷಧಿ, ಸರ್ಟಿಫಿಕೆಟ್, ಚುಚ್ಚುಮದ್ದು ಸೇರಿದಂತೆ ಇನ್ನಿತರೆ ವೈದ್ಯಕೀಯ ಸಾಮಗ್ರಿಗಳನ್ನು ಜಪ್ತಿ ಮಾಡಿ ಆಸ್ಪತ್ರೆಗೆ ಬೀಗ ಹಾಕಿದ್ದಾರೆ. ಸಿಂದಗಿ ಪೊಲೀಸರು ನಕಲಿ ವೈದ್ಯನಿಗಾಗಿ ಶೋಧ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.