ವಿಜಯಪುರ: ಗುಡುಗಿ,ಸಿಡಿಲಿನೊಂದಿಗೆ ಶನಿವಾರ ಸಂಜೆ ಜಿಲ್ಲೆಯ ವಿವಿಧಡೆ ಉತ್ತಮ ಮಳೆಯಾಗಿದೆ.

ವಿಜಯಪುರ ತಾಲ್ಲೂಕಿನ ಗುಣಕಿ ಗ್ರಾಮದ ರೈತ ನಾನಾಗೌಡ ಮಲ್ಲಪ್ಪ ಬಿರಾದಾರ ಅವರ ಎತ್ತುಗಳಿಗೆ ಶನಿವಾರ ಸಂಜೆ ಸಿಡಲು ಬಡಿದು, ಸಾವಿಗೀಡಾಗಿವೆ.

ವಿಜಯಪುರ ತಾಲ್ಲೂಕಿನ ಕನ್ನೂರು, ಮಖಣಾಪೂರ, ತಿಡಗುಂದಿ ಭಾಗದಲ್ಲಿ ಅರ್ಧ ಗಂಟೆಗೂ ಹೆಚ್ಚು ಹೊತ್ತು ಮಳೆಯಾಗಿದೆ.

ಜಿಲ್ಲೆಯಲ್ಲಿ ವಾರದಿಂದ ಈಚೆಗೆ 40 ಡಿಗ್ರಿ ಸೆಲ್ಸಿಯಸ್ಗೂ ಅಧಿಕ ಉಷ್ಣಾಂಶ ದಾಖಲಾಗಿದ್ದು, ವಾತಾವರಣ ಕಾದ ಕಾವಲಿಯಂತಾಗಿದೆ. ಜನ, ಜಾನುವಾರು, ಪಕ್ಷಿಗಳು ಬಿಸಿಲಿನ ಬೇಗೆಯಿಂದ ತತ್ತರಿಸಿಹೋಗಿವೆ. ಈ ನಡುವೆ ಅಲ್ಲಲ್ಲಿ ಮಳೆಯಾಗಿರುವುದು ವಾತಾವರಣವನ್ನು ತಂಪಾಗಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.