ಕಕ್ಕೇರಾ: ಕೃಷ್ಣ ನದಿ ನೀರು ಆವರಿಸಿರು ವುದರಿಂದ ನಿರ್ಮಾಣವಾಗಿರುವ ನಡುಗಡ್ಡೆ ನೀಲಕಂಠರಾಯನಗಡ್ಡಿ ಪ್ರತಿ ಮಳೆಗಾಲದಲ್ಲೂ ಸುದ್ದಿಗೆ ಬರುತ್ತದೆ. ಕಕ್ಕೇರಾ ಪುರಸಭೆ ವ್ಯಾಪ್ತಿಯಲ್ಲಿ ಬರುವ ನೀಲಕಂಠರಾಯನಗಡ್ಡಿ ಜನರು ಪ್ರವಾಹ ಬಂದರೆ ಈಜಾಡಿ ನಡುಗಡ್ಡಿಯ ದಡ ಸೇರುತ್ತಿತ್ತಾರೆ. ಇಂಥ ಚಿಕ್ಕ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡುತ್ತಿದ್ದು ಸಮಸ್ಯೆಗಳ ಪರಿಹಾರದ ನಿರೀಕ್ಷೆಯಲ್ಲಿ ಜನರಿದ್ದಾರೆ.

ಸದ್ಯ ಇಲ್ಲೊಂದು ಕಿರು ಸೇತುವೆ ಮಾತ್ರ ಇದೆ. ಇನ್ನೂ ಹಲವು ಸಮಸ್ಯೆಗಳಿದ್ದು ಜನರಿನ್ನೂ ಗುಡಿಸಲು ಮನೆಗಳಲ್ಲೇ ವಾಸಿಸುತ್ತಿದ್ದಾರೆ.
₹1.62 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಮಿನಿ ಸೇತುವೆಯಲ್ಲಿ ಬೈಕ್ಗಳು ಮಾತ್ರ ಸಂಚರಿಸುವಂತಿದೆ. ಆಟೋ, ಸೇರಿದಂತೆ ಸ್ವಲ್ಪ ದೊಡ್ಡ ವಾಹನಗಳು ಸಂಚರಿಸುವಂತೆ ಮಾಡಬೇಕು. ನಮಗೆ ಇನ್ನೂ ಗುಡಿಸಲುಗಳೇ ಆಸರೆಯಾಗಿದ್ದು, ಶುದ್ಧ ಕುಡಿಯುವ ನೀರು, ಸಿ.ಸಿ ರಸ್ತೆ ಸೇರಿದಂತೆ ಮೂಲ ಸೌಕರ್ಯ ಒದಗಿಸ ಬೇಕು ಎನ್ನುವುದು ಸ್ಥಳೀಯರ ಆಗ್ರಹ.

‘ನಾವು ಮಾತ್ರ ನಡುಗಡ್ಡಿ ಬಿಟ್ಟು ಹೋಗುವುದಿಲ್ಲ, ಜಮೀನು, ಜಾನುವಾರಗಳನ್ನು ಬಿಟ್ಟಿರಲು ಹೇಗೆ ಸಾಧ್ಯ’ ಎಂದು ಸ್ಥಳೀಯ ಲಕ್ಷ್ಮಣ, ಅಮರಪ್ಪ ಗಡ್ಡಿ, ಸೋಮಣ್ಣ ಪ್ರಜಾವಾಣಿಗೆ ತಿಳಿಸಿದರು.

ನಡುಗಡ್ಡಿಯಲ್ಲಿ ಒಟ್ಟು 230 ಎಕರೆ ಜಮೀನಿದ್ದು, 214 ಎಕರೆ ಸಾಗುವಳಿ ಮಾಡುತ್ತಿದ್ದು, ಒಟ್ಟು ಜನಸಂಖ್ಯೆ 324. 176 ಪುರುಷರು, 148 ಮಹಿಳೆಯರು ಇದ್ದಾರೆ. ಒಟ್ಟು 843 ಕುರಿ, ಆಡು, ಕೋಳಿ ಸೇರಿದಂತೆ ಜಾನುವಾರುಗಳಿವೆ ಎಂದು ಕಂದಾಯ ಗ್ರಾಮಲೆಕ್ಕಾಧಿಕಾರಿ ಬಸವರಾಜ ಶೆಟ್ಟಿ ತಿಳಿಸಿದ್ದಾರೆ.

ನಡುಗಡ್ಡಿಯಲ್ಲಿ ಒಂದೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು ಒಟ್ಟು 32 ಮಕ್ಕಳಿದ್ದಾರೆ. ಕುಸಿಯುವ ಹಂತದಲ್ಲಿದ್ದ ಶಾಲೆಯನ್ನು ದುರಸ್ತಿಗೊಳಿಸಿದ್ದು ನೂತನ ಶಾಲಾ ಕಟ್ಟಡವಾಗಬೇಕೆಂದು ಶಿಕ್ಷಣಪ್ರೇಮಿಗಳ ಆಗ್ರಹಿಸಿದ್ದಾರೆ.

ಪ್ರವಾಹ ಬಂದಾಗ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿತ್ತು ಪ್ರಸುತ ತೊಂದರೆಯಿಲ್ಲ ಎಂದು ಶಿಕ್ಷಕ ಮುಖ್ಯ ಶಿಕ್ಷಕ ಬಸನಗೌಡ ಪಾಟೀಲ
ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.