ಯಾದಗಿರಿ: ಜಿಲ್ಲೆಯ ಎರಡು ನದಿಗಳಿಗೆ ಒಳಹರಿವು ಹೆಚ್ಚಿದ್ದು, ನದಿಗಳಿಗೆ ನೀರು ಹರಿಸಲಾಗುತ್ತಿದೆ.

ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಶುಕ್ರವಾರ 1.70 ಲಕ್ಷ ಕ್ಯುಸೆಕ್ ನೀರು ಒಳಹರಿವಿದ್ದರೆ, 1.65 ಲಕ್ಷ ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ.

ಗುರುವಾರ ಸಂಜೆಯಿಂದ ಒಳಹರಿವು ಹೆಚ್ಚಿದ್ದರಿಂದ ಹೊರಹರಿವನ್ನು ಹಂತ ಹಂತವಾಗಿ ಹೆಚ್ಚಿಸಲಾಗಿದೆ. ಸಂಜೆ 6 ಗಂಟೆಗೆ 1.18 ಲಕ್ಷ ಕ್ಯುಸೆಕ್ ಹೊರಹರಿವಿತ್ತು. ಸಂಜೆ 7.30 ಕ್ಕೆ 1.35 ಲಕ್ಷ ಕ್ಯುಸೆಕ್ ಗೆ ಏರಿಕೆಯಾಗಿದೆ. ರಾತ್ರಿ 10:30 ವರೆಗೆ 1.58 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿಸಲಾಗಿದೆ. ರಾತ್ರಿ 11:30 ಕ್ಕೆ 1.78 ಲಕ್ಷ ಕ್ಯುಸೆಕ್ ಗೆ ಏರಿಕೆಯಾಗಿತ್ತು. ಶುಕ್ರವಾರ ಬೆಳಿಗ್ಗೆ 8 ಗಂಟೆಗೆ 1.70 ಲಕ್ಷ ಕ್ಯುಸೆಕ್ ಇಳಹರಿವಿದ್ದರೆ, 1.65 ಲಕ್ಷ ಕ್ಯುಸೆಕ್ ಹೊರ ಹರಿವಿತ್ತು.

ಇನ್ನೂ ಯಾದಗಿರಿ ನಗರ ಹೊರವಲಯದ ಭೀಮಾ ನದಿಗೆ ನೀರನ್ನು ಹರಿಸಲಾಗುತ್ತಿದೆ.

ಯಾದಗಿರಿ-ಗುರುಸಣಗಿ ಬ್ರಿಜ್ ಕಂ ಬ್ಯಾರೇಜ್ ಗೆ 43,000 ಸಾವಿರ ಕ್ಯುಸೆಕ್ ಒಳ ಹರಿವಿದ್ದರೆ, 24 ಹೈಡ್ರಾಲಿಕ್ ಗೇಟುಗಳಲ್ಲಿ 14 ಗೇಟು ತೆಗೆದು ಭೀಮಾ ನದಿಗೆ ನೀರು ಹರಿಸಲಾಗುತ್ತಿದೆ.

ಮಳೆ ಬಿಡುವು

ಗುರುವಾರ ರಾತ್ರಿಯಿಂದ ಮಳೆ ಬಿಡುವು ನೀಡಿದ್ದು, ಶುಕ್ರವಾರ ಮೋಡ ಕವಿದ ವಾತಾವರಣ ಇತ್ತು.

ಜಲಾಶಯದ ಮಟ್ಟ

ನಾರಾಯಣಪುರ ಜಲಾಶಯದ ಮಟ್ಟ (ಜುಲೈ 28)

ಜಲಾಶಯ; ಗರಿಷ್ಠ ಮಟ್ಟ ಶುಕ್ರವಾರದ ಮಟ್ಟ; ಒಳಹರಿವು (ಕ್ಯುಸೆಕ್ಗಳಲ್ಲಿ); ಹೊರಹರಿವು

ನಾರಾಯಣಪುರ; 492.25 ಮೀ; 490.72 ಮೀ; 1,70,000 ;1,65,595

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.