ಯಾದಗಿರಿ: ‘ಆಪರೇಷನ್ ಕಮಲಕ್ಕಾಗಿ ಬಿ.ಎಸ್.ಯಡಿಯೂರಪ್ಪ ಅವರು ನನಗೆ ಹಣದ ಆಮಿಷವೊಡ್ಡಿದ ಪ್ರಕರಣ ಮುಂದುವರಿಸುವಂತೆಬಿಜೆಪಿಯ ಅಗ್ರಗಣ್ಯ ನಾಯಕರೊಬ್ಬರು ಹೇಳಿದ್ದಾರೆ. ನನ್ನ ಜೊತೆ ಫೋನ್ನಲ್ಲಿ ಸಂಭಾಷಣೆ ನಡೆಸಿರುವ ಈ ನಾಯಕರು, ಯಡಿಯೂರಪ್ಪಗೆಖೆಡ್ಡಾ ತೋಡುತ್ತಿದ್ದಾರೆ’ ಎಂದು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರ ಪುತ್ರ, ಜೆಡಿಎಸ್ ರಾಜ್ಯ ಯುವ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಹೇಳಿದರು.

ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿ ಮಂಡಳಿಯ ಮುಖ್ಯಮಂತ್ರಿ ವಿವೇಚನಾ ನಿಧಿಯಿಂದ ಕ್ಷೇತ್ರಕ್ಕೆ ಹಂಚಿಕೆ ಮಾಡಿದ್ದ ಅನುದಾನವನ್ನು ಯಡಿಯೂರಪ್ಪ ವಾಪಸ್ ಪಡೆದಿದ್ದಕ್ಕೆ ಗುರುಮಠಕಲ್ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ನನ್ನ ಮುಖಾಂತರ ಬಿಜೆಪಿಯವರು ಯಡಿಯೂರಪ್ಪರಿಗೆ ಖೆಡ್ಡಾ ತೋಡಿದ್ದಾರೆ. ಇನ್ನೆರಡು ದಿನದಲ್ಲಿ ನಮ್ಮ ನಾಯಕರನ್ನು ಭೇಟಿಯಾಗಿ ಆ ಪ್ರಕರಣದ ಬಗ್ಗೆ ಚರ್ಚಿಸುವೆ.ಯಡಿಯೂರಪ್ಪಅವರಿಗೆ ಒಂದು ಗತಿ ಕಾಣಿಸುವೆ’ ಎಂದರು.

‘ಯಡಿಯೂರಪ್ಪ ಹತಾಶರಾಗಿದ್ದು, ಅವರ ಅಧಿಕಾರ ಅವಧಿ ಐದಾರು ತಿಂಗಳು ಮಾತ್ರ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.