ಬೆಂಗಳೂರು: ಕೇಂದ್ರ ಗೃಹ ಇಲಾಖೆ ಅಡಿ ಕಾರ್ಯನಿರ್ವಹಿಸುವ ದೇಶದ ಅತಿದೊಡ್ಡ ಅರೆಸೇನಾಪಡೆಯಾದ ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ (ಸಿಆರ್‌ಪಿಎಫ್) ಭಾರಿ ನೇಮಕಾತಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಸಿಆರ್‌ಪಿಎಫ್ ಕಾನ್‌ಸ್ಟೆಬಲ್ ಜನರಲ್ ಡ್ಯೂಟಿ 1,29,929 ಹುದ್ದೆಗಳನ್ನು ತುಂಬಿಕೊಳ್ಳುವ ಸಂಬಂಧ ಏಪ್ರಿಲ್ 6 ರಂದು ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.

ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ಇಷ್ಟು ಹುದ್ದೆಗಳನ್ನು ಸಿಆರ್‌ಪಿಎಫ್‌ನಲ್ಲಿ ತುಂಬಿಕೊಳ್ಳಲಾಗುತ್ತದೆ. ಇದರಲ್ಲಿ 1,25,262 ಹುದ್ದೆಗಳು ಪುರುಷ ಅಭ್ಯರ್ಥಿಗಳಿಗೆ ಹಾಗೂ 4,667 ಹುದ್ದೆಗಳು ಮಹಿಳೆಯರಿಗೆ ಎಂದು ಹೇಳಲಾಗಿದೆ.

ಎಸ್‌ಎಸ್‌ಎಲ್‌ಸಿ ಅಥವಾ ಅದಕ್ಕೆ ಸಮಾನವಾದ ಶೈಕ್ಷಣಿಕ ವಿದ್ಯಾಹರ್ತೆಯನ್ನು ಹೊಂದಿರುವ ಭಾರತೀಯ ನಾಗರಿಕನಾಗಿರುವ 18 ರಿಂದ 23 ವರ್ಷ ವಯಸ್ಸಿನ ಯುವಕ–ಯುವತಿಯರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ವಿಶೇಷವೆಂದರೆ ಈ ಹುದ್ದೆಗಳಲ್ಲಿ ಅಗ್ನಿವೀರರಾಗಿ ಸೇವೆ ಸಲ್ಲಿಸಿ ಬರುವವರಿಗೆ ಶೇ 10 ರಷ್ಟು ಹುದ್ದೆಗಳು ಮೀಸಲಿವೆ.

ಈ ಹುದ್ದೆಗಳಿಗಾಗಿ ಸಿಆರ್‌ಪಿಎಫ್ ಹಂತ ಹಂತವಾಗಿ ಅಧಿಸೂಚನೆ ಹೊರಡಿಸಿ ನೇಮಕಾತಿಯನ್ನು ಮಾಡಿಕೊಳ್ಳಲಿದೆ. ಹಾಗಾಗಿ ಸಿಆರ್‌ಪಿಎಫ್ ಸೇರಬೇಕು ಎಂದು ಬಯಸುವ ಅಭ್ಯರ್ಥಿಗಳು ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳುವುದು ಸೂಕ್ತ. ನೇಮಕಾತಿ ಅಧಿಸೂಚನೆಗಳಿಗಾಗಿ ಆಗಾಗ crpf.gov.in ವೆಬ್‌ಸೈಟ್ ಪರಿಶೀಲಿಸಬೇಕು.

ನಾಳೆಯಿಂದ ಅಧಿಕೃತ ಚುನಾವಣಾ ಪ್ರಕ್ರಿಯೆಗಳು ಆರಂಭ: ನಾಮಪತ್ರ ಸಲ್ಲಿಕೆ ಶುರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.