1. ನಾನು ಪ್ರಥಮ ಬಿಎಸ್ಸಿ(ಪಿಎಂಸಿಎಸ್) ವ್ಯಾಸಂಗ ಮಾಡುತ್ತಿದ್ದೇನೆ. ಮುಂದೆ ವೃತ್ತಿಪರ ಹ್ಯಾಕರ್ ಆಗಬೇಕೆಂದು ಆಸೆ. ಇದನ್ನು ಎಲ್ಲಿ ಮಾಡಬೇಕು? ಕನ್ನಡ, ಆಂಗ್ಲ ಭಾಷೆಯ ಪುಸ್ತಕಗಳು ಎಲ್ಲಿ ದೊರೆಯುತ್ತವೆ. ಇದರಲ್ಲಿ ಉದ್ಯೋಗಾವಕಾಶಗಳೇನು?

–ಜಗದೀಶ ಬಿ. ಎಸ್., ಊರು ಬೇಡ

ನೀವು ಖಂಡಿತ ಔಟ್ ಆಫ್ ಬಾಕ್ಸ್ ಆಲೋಚನೆ ಮಾಡಿದ್ದೀರ. ಎಥಿಕಲ್ ಹ್ಯಾಕಿಂಗ್‌ನಲ್ಲಿ ತರಬೇತಿ ಪಡೆದವರನ್ನು ಉದ್ಯೋಗಗಳಿಗೆ ಆಯ್ಕೆ ಮಾಡುತ್ತಿದ್ದಾರೆ. ನಾಸ್‌ಕಾಮ್ ರಿಪೊರ್ಟ್ (NASSCOM) ಪ್ರಕಾರ, ಭಾರತ ದೇಶಕ್ಕೂ 4 ಲಕ್ಷ, ತರಬೇತಿ ಹೊಂದಿದ ಜನರ ಅಗತ್ಯವಿದೆ.

ಈ ಕ್ಷೇತ್ರದಲ್ಲಿ ತರಬೇತಿ ಹೊಂದಿದವರು ಕೇವಲ 22,000 ವಿದ್ಯಾರ್ಥಿಗಳು!!? 2017ರಲ್ಲಿ 1,59,700 ಸೈಬರ್ ಇನ್ಸಿಡೆನ್ಸ್ ನಡೆದು 450 ಬಿಲಿಯನ್ ನಷ್ಟ ಪ್ರಪಂಚದಲ್ಲಿ ಆಯಿತು. ಆದ್ದರಿಂದ ಎಥಿಕಲ್ ಹ್ಯಾಕಿಂಗ್‌ನಲ್ಲಿ ತರಬೇತಿ ಹೊಂದಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಕ್ಕೆ ಕೊರತೆಯೇ ಇಲ್ಲ.

ಎಥಿಕಲ್ ಹ್ಯಾಕಿಂಗ್ ಅಂದರೇನು? ಯಾವ ಕ್ಷೇತ್ರದಲ್ಲಿ ಆದರೂ ಸಂಗ್ರಹಿಸಿದ ವಿಷಯ (Data) ದೊಡ್ಡ ಆಸ್ತಿ. ಅದನ್ನು ದುರುಪಯೋಗ ಪಡೆದುಕೊಳ್ಳುವುದು ತಪ್ಪು. ಒಳ್ಳೆಯ ಉಪಯೋಗಕ್ಕಾಗಿ ಆ ಸಂಗ್ರಹಿಸಿದ ಡೇಟಾ ಎಥಿಕಲ್ ಆಗಿ ಪಡೆಯುವುದೇ ಎಥಿಕಲ್ ಹ್ಯಾಕರ್‌ಗಳ ಕೆಲಸ.

ಎಥಿಕಲ್ ಹ್ಯಾಕರ್ಸ್, ಇ ಕಾಮರ್ಸ್, ಇ ಬ್ಯಾಂಕಿಂಗ್, ಪೈನಾನ್ಷಿಯಲ್ ಸರ್ವೀಸ್, ಟೆಲಿಕಾಂ, ಐಟಿ, ಐಟಿ ಯನೇಬಲ್ಡ್ ಸರ್ವೀಸಸ್ ಇವರುಗಳಿಗೆ ಅತ್ಯಂತ ಬೇಡಿಕೆ ಇದೆ.

ನೀವು ಈ ವೃತ್ತಿಯಲ್ಲಿ ಇರಲು ಬಯಸಿರುವುದರಿಂದ ನಿಮಗೆ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್ಸ್ ಮತ್ತು ನೆಟ್‌ವರ್ಕ್ ಹಾರ್ಡ್‌ವೇರ್ ಜ್ಞಾನ ಬಹಳ ಮುಖ್ಯ. ಇನ್ಫಾರ್‌ಮೇಷನ್ ಸೆಕ್ಯೂರಿಟಿ ಕ್ಷೇತ್ರದ ಜ್ಞಾನ ಬೇಕೇ ಬೇಕು. ತಾಳ್ಮೆ, ಸೌಹಾರ್ದತೆ, ಸಂಶೋಧನಾ ಮನೋಭಾವ, ಹೊಸದನ್ನು ಕಲಿಯಲು ಮತ್ತು ತಿಳಿಯುವ ಹಂಬಲ ಮುಖ್ಯ.

ನೀವು ಬಿಎಸ್ಸಿಯನ್ನು ಮುಗಿಸಿ, ಇಲ್ಲಿ ನಿಮಗೆ ಕಲಿಸಿರುವ ಕಂಪ್ಯೂಟರ್ ವಿಷಯದ ಹೊರತು, ಹೆಚ್ವಿನ ಸಂಬಂಧಪಟ್ಟ ವಿಷಯವನ್ನು ಕಲಿಯಿರಿ.

ತರಬೇತಿ ಇನ್ಸ್‌ಟಿಟ್ಯೂಟ್‌ಗಳು ಬಹಳ ಇದೆ. ಇಲ್ಲಿ ಕೆಲವು ನಿಮಗಾಗಿ...

1. NIIT

Building no. 3/5, 1st floor, 100ft Road, Indira Nagar

Bengaluru - 560038

2. Management Academy for Digital Economy in India, Bengaluru

Approved by Govt. of Karnataka

www.medinindiaacademy.com

3. Ethical Hacking Training Institute Of Bangalore

# 1034/A, 3rd Floor, 26th main, 4th Block Jayanagar

Bengaluru - 56004

4.Texical Cyber Security / Ethical hacking course Training in Bengaluru

#2957/25, Navarang Circle, Mahakavi Kuvempu Road, 2nd Stage Rajajinagar, Bengaluru - 560010

5. APTECH Computer Education

#534, B - Block, AECS Layout, Kundanahalli, Bengaluru - 560037

ಮತ್ತು ಇನ್ನೂ ಅನೇಕ....

ಕನ್ನಡ ಮತ್ತು ಆಂಗ್ಲಭಾಷೆಯ ಪುಸ್ತಕಗಳು ಹೆಸರಾಂತ ಪ್ರಕಾಶನದ ಅಂಗಡಿಗಳಲ್ಲಿ ದೊರೆಯುತ್ತದೆ.

ಈ ಕೋರ್ಸ್ ಮಾಡಿದ ನಂತರ ‘ಇಸಿ ಕೌನ್ಸಿಲ್ ಆಫ್ ಇಂಡಿಯಾ’ ಇವರಿಂದ ಸರ್ಟಿಫಿಕೇಟ್ ಪಡೆಯಬೇಕು.

ಹೆಚ್ಚಿನ ವಿವರಗಳಿಗೆ www.ecconcil.org/indica ಉದ್ಯೋಗಾವಕಾಶಗಳು, ಸರ್ಕಾರ, ರಾಜ್ಯ ಮಟ್ಟದಲ್ಲೂ, ಐಟಿ ಕಂಪನಿಗಳಲ್ಲಿ, ಐಟಿ ಎನೇಬಲ್ದ್ ಬ್ಯಾಂಕ್‌ಗಳು, ನೆಟ್ ವರ್ಕಿಂಗ್ ಕಂಪೆನಿಗಳಲ್ಲಿ, ಇನ್ನೂ ಅನೇಕ ಕ್ಷೇತ್ರಗಳಲ್ಲಿ.

2.ನಾನು ದ್ವಿತೀಯ ಬಿಎಸ್ಸಿ (ಬಯೋಟೆಕ್ನಾಲಜಿ ಕೆಮಿಸ್ಟ್ರಿ, ಜುವಾಲಜಿ) ಪದವಿ ಓದುತ್ತಿದ್ದೇನೆ. ನನಗೆ ಬಯೋಟೆಕ್ನಾಲಜಿ, ಜುವಾಲಜಿ ತುಂಬ ಇಷ್ಟವಾದ ವಿಷಯಗಳು. ಮುಂದೆ ಈ ವಿಷಯಕ್ಕೆ ಸಂಬಂಧಿಸಿ ಎಂಎಸ್ಸಿ ಮಾಡಲು ಬಯಸುತ್ತೇನೆ.ಬಯೋ ಇನ್ಫರ್‌ಮ್ಯಾಟಿಕ್ ವೈಲ್ ಲೈಫ್ ಕನ್ಸರ್‌ವೇಷನ್, ಇಮ್ಯುನಾಲಜಿ, ಬಯೋಮೆಡಿಸನ್, ಅಗ್ರಿಕಲ್ಚರ್ ಬಯೋಟೆಕ್ನಾಲಜಿ – ಹೀಗೆ ಅನೇಕ ವಿಷಯಗಳಿವೆ. ಅವುಗಳಲ್ಲಿ ಸಂಶೋಧನೆ ಹಾಗೂ ಉದ್ಯೋಗದ ದೃಷ್ಟಿಯಿಂದ ಯಾವುದು ಉತ್ತಮ? ಈ ವಿಷಯಗಳಿರುವ ಕಾಲೇಜುಗಳು ಬೆಂಗಳೂರಿನಲ್ಲಿ ಯಾವುದಿದೆ? ಅಲ್ಲದೆ, ಐಐಟಿ, ಜಎಎಂ, ಜೆಎನ್‌ಯು ಹೊರತುಪಡಿಸಿ, ಬಿಎಸ್ಸಿ ಮುಗಿದ ಮೇಲೆ ಬರೆಯಬಹುದಾದ ಸ್ಪರ್ಧಾತ್ಮಕ ಶೈಕ್ಷಣಿಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿ.

ಶ್ರೀನಿವಾಸ್, ಮಂಗಳೂರು

ನಿಮ್ಮ ಮುಂದಾಲೋಚನೆಯು ಮೆಚ್ಚುವಂಥದ್ದು. ಆದರೆ ಪ್ಲಾನಿಂಗ್ ಬಹಳ ಮುಖ್ಯ. ನಿಮ್ಮ ಆಸಕ್ತಿ ಯಾವುದೆಂದು ಸ್ಪಷ್ಟಮಾಡಿಕೊಳ್ಳಿ. ಬಯೋಟೆಕ್ನಾಲಜಿ ಮತ್ತು ಜುವಾಲಜಿ –ಎರಡು ಭಿನ್ನವಾದ ಕ್ಷೇತ್ರದಲ್ಲಿನಿಮ್ಮ ಆಸಕ್ತಿ ಇದೆ. ಎರಡು ಕ್ಷೇತ್ರದಲ್ಲೂ ಶಿಕ್ಷಣಕ್ಕೂ ಉದ್ಯೋಗಕ್ಕೂ ಒಳ್ಳೆಯ ಅವಕಾಶಗಳಿವೆ. ನೀವು ಮೊದಲು ಯಾವ ಕ್ಷೇತ್ರವನ್ನು ಆರಿಸಿಕೊಳ್ಳುತ್ತೀರಿ – ಎನ್ನುವುದನ್ನು ನಿರ್ಧರಿಸಿ.

ಬಯೋಲಾಜಿಕಲ್ ಸೈನ್ಸ್ ಅಥವಾ ಬಯೋಟೆಕ್ನಾಲಜಿಯಲ್ಲಿ ಉನ್ನತ ವ್ಯಾಸಂಗ ಮಾಡ ಬಯಸುವವರು ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಸಂಶೋಧನೆಗೆ ಅರ್ಜಿಯನ್ನು ಸಲ್ಲಿಸಬಹುದು.

ಬಿಎಸ್ಸಿಯಲ್ಲಿ ಕನಿಷ್ಠ ಶೇ. 60 ಮಾರ್ಕ್ಸ್ ಬಂದಿರಬೇಕು. ಬಯೋಲಾಜಿಕಲ್ ಸೈನ್ಸ್/ ಬಯೋಟೆಕ್ನಾಲಜಿ ವಿದ್ಯಾರ್ಥಿಗಳಿಗೆ ಟೆಸ್ಟ್ ಮತ್ತು ಇಂಟರ್‌ವ್ಯೂನಲ್ಲಿ ನಿಮ್ಮ ಅರ್ಹತೆಯನ್ನು ನಿರ್ಧರಿಸಿ ಆಯ್ಕೆ ಮಾಡುತ್ತಾರೆ.

ಎಲ್ಲಾ ವಿವರಗಳು www.iisc.ac.in ನಿಂದ ಪಡೆಯಬಹುದು.

ಆಲ್ ಇಂಡಿಯಾ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ದೆಹಲಿ, ಇವರು ಎಂಎಸ್ಸಿ ಬಯೋಟೆಕ್ನಾಲಜಿ ಪ್ರವೇಶ ಪರೀಕ್ಷೆಗೆ ಮಾರ್ಚ್ ತಿಂಗಳ ಕೊನೆಯಲ್ಲಿ ನೋಟಿಫಿಕೇಷನ್ ನೀಡುತ್ತಾರೆ. ಈ ಕೋರ್ಸ್ ಮೆಡಿಕಲ್ ಸಂಬಂಧಿಸಿದ ಡಯಾಗ್ನೋಸಿಸ್, ಥೆರಪಿಯನ್ನು ಮಾಡ್ರನ್ ಬಯೋಟೆಕ್ನಲಾಜಿಕಲ್ ಟೂಲ್‌ಗಳನ್ನು ಬಳಸಿ ಮಾಡುವ ರೀತಿಯನ್ನು ಕಲಿಸುತ್ತದೆ.

www.aiims.org – ಇಲ್ಲಿಂದ ವಿವರವನ್ನು ಪಡೆಯಬಹುದು.

ಬಿರ್ಲಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (BITS) ಅಂಡ್ ಸೈನ್ಸ್, ಪಿನಾಲಿಯಲ್ಲಿ ಎಂಎಸ್ಸಿ (ಆನರ್ಸ್) ಇನ್ ಬಯಲಾಜಿಕಲ್ ಸೈನ್ಸ್ ಕೋರ್ಸ್ ಅನ್ನು ನಡೆಸುತ್ತಾರೆ.

ಈ ಕೋರ್ಸ್‌ನ್ನು 2ನೇ ಪಿಯು ನಂತರ ಸೇರಬಹುದು. www.bits-piliin.ac.inನಿಂದ ಹೆಚ್ಚಿನ ವಿವರಗಳನ್ನು ಪಡೆಯಬಹುದು.

ನೀವು ಆಲ್ ಇಂಡಿಯಾ ಪ್ರವೇಶ ಪರೀಕ್ಷೆಗಳಿಗೂ ಇಂಟಿಗ್ರೇಟೆಡ್ Msc-Phd ಪ್ರವೇಶಪರೀಕ್ಷೆಗಳಿಗೂ ವೆಬ್‌ಸೈಟ್ ಸಮೇತ ಎಲ್ಲಾ ವಿಷಯವನ್ನೂ ಸಂಗ್ರಹಿಸಿ.

ಎಂಬಿಎ ಇನ್ ಬಯೋಟೆಕ್ನಾಲಜಿ ಕೋರ್ಸ್ ಸಹ ಇದೆ. ಯೋಚಿಸಿ, ನಿರ್ಧರಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.