ನಾನು ಬಿ.ಕಾಂ. ಓದಿದ್ದು, ಕುವೆಂಪು ವಿಶ್ವವಿದ್ಯಾನಿಲಯದಿಂದ ಎಂ.ಕಾಂ. ಕರಸ್ಪಾಂಡೆನ್ಸ್ ಕೋರ್ಸ್ ಮಾಡುತ್ತಿದ್ದೇನೆ. ನಾನು ಎನ್.ಇ.ಟಿ. ಪರೀಕ್ಷೆಗೆ ಕೂರಬಹುದೇ ಅಥವಾ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇರಿಕೊಳ್ಳಬಹುದೇ?
–ಅನ್ಸಾರ್, ಹಿರಿಯೂರು

ಉತ್ತರ: ಎನ್.ಇ.ಟಿ. ಪರೀಕ್ಷೆಗೆ ಅರ್ಜಿ ಹಾಕುವ ವಿದ್ಯಾರ್ಥಿಗಳು ಕನಿಷ್ಠ ಪಕ್ಷ ಶೇ. 55 ಅಂಕಗಳನ್ನು ಮಾಸ್ಟರ್ಸ್ ಡಿಗ್ರಿ ಅಥವಾ ಅದಕ್ಕೆ ಸಮಾನವಾದ ಪರೀಕ್ಷೆಗಳಲ್ಲಿ (ಡಿಸ್ಟೆನ್ಸ್ ಎಜುಕೇಶನ್ ಆಗಿದ್ದರೂ ಪರವಾಗಿಲ್ಲ) ವಿಶ್ವವಿದ್ಯಾಲಯಗಳಲ್ಲಿ ಅಥವಾ ಯು.ಜಿ.ಸಿ ಯಿಂದ ಅಂಗೀಕೃತವಾದ ಸಂಸ್ಥೆಗಳಿಂದ ಪಡೆದಿರಬೇಕು. ಒ.ಬಿ.ಸಿ, /ಎಸ್.ಸಿ./ ಎಸ್.ಟಿ. ಮತ್ತು ಪಿ.ಡಬ್ಲ್ಯೂ.ಡಿ (ಅಂಗವಿಕಲರು) ವರ್ಗದ ಅರ್ಜಿದಾರರಿಗೆ ಶೇ. 50ರಷ್ಟು ಅಂಕ ಬಂದಿದ್ದರೆ ಸಾಕು.

ಕುವೆಂಪು ವಿಶ್ವವಿದ್ಯಾಲಯವು ಯು.ಜಿ.ಸಿ. ಯಿಂದ ಮಾನ್ಯತೆ ಪಡೆದಿರುವುದರಿಂದ ನೀವು ಮಾಸ್ಟರ್ಸ್ ಡಿಗ್ರಿ ಆದ ನಂತರದಲ್ಲಿ ಪರೀಕ್ಷೆಗೆ ಕೂರಬಹುದು. ನೀವು ಎನ್.ಇ.ಟಿ. ಇಂದ ಅರ್ಹತೆ ಪಡೆದ ಮೇಲೆ ಕಾಲೇಜು ಶಿಕ್ಷಕರಾಗಬಹುದು.

ನಾನು ಬಿ.ಎಸ್ಸಿ. (ಪಿಎಂಸಿ) ಮಾಡಿ ಬಿ.ಎಡ್.ನಲ್ಲಿ ಭೌತಶಾಸ್ತ್ರ ಮತ್ತು ಗಣಿತ ಓದಿದ್ದೇನೆ. ಟಿ.ಇ.ಟಿ. ಕೂಡ ಬರೆದಿದ್ದೇನೆ. ಫಲಿತಾಂಶ ನೀರಿಕ್ಷೆಯಲ್ಲಿರುವೆ. ನಾನು ಬಿ.ಎಸ್ಸಿ. ಕಂಪ್ಯೂಟರ್ ಸೈನ್ಸ್ ಆಗಿರುವುದರಿಂದ 6 – 8 ನೇ ತರಗತಿಯ ಶಿಕ್ಷಕರ ಹುದ್ದೆಗೆ (ಗಣಿತದ ಪೋಸ್ಟ್) ಹೋಗಬಹುದೇ?
–ಕಾವ್ಯ, ಊರು ಬೇಡ

ಉತ್ತರ: ಕಾವ್ಯರವರೇ, ಪದವೀಧರರಾದ ಮೇಲೆ ನೀವು ಸ್ಕೂಲುಗಳಲ್ಲಿ 12ನೇ ತರಗತಿವರೆಗೂ ಪಾಠ ಮಾಡಬಹುದು.

ನಾನು ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. (ಇಂಡಸ್ಟ್ರಿಯಲ್ ಎಂಜಿನಿಯರಿಂಗ್) ಕೊನೆಯ ಸೆಮಿಸ್ಟರ್ ಓದುತ್ತಿದ್ದೇನೆ. 8/10 ಸಿಜಿಪಿಎ ಪಡೆದಿದ್ದು ಪಿಯುಸಿ (ಪಿಸಿಎಂಇ) ಹಾಗೂ 10ನೇ ತರಗತಿ (ಐಸಿಎಸ್ಇ)ಯಲ್ಲಿ ಕ್ರಮವಾಗಿ ಶೇ. 85 ಮತ್ತು ಶೇ. 84 ಅಂಕಗಳನ್ನು ಪಡೆದಿದ್ದೇನೆ. ಮುಂದೆ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಓದನ್ನು ಮುಂದುವರಿಸಲು ಇಚ್ಛಿಸಿದ್ದು, ಸಿಎಟಿ, ಜಿಎಂಎಟಿ ಮೊದಲಾದ ಪ್ರವೇಶ ಪರೀಕ್ಷೆಗೆ ಕೂರಲಿದ್ದೇನೆ. ಆದರೆ ಬಿ.ಇ. ಮುಗಿದ ನಂತರ ಒಂದೆರಡು ವರ್ಷಗಳ ಕಾಲ ಉದ್ಯೋಗ ಮಾಡಿ ನಂತರ ಎಂಬಿಎ ಓದಬೇಕೆ ಅಥವಾ ತಕ್ಷಣವೇ ಎಂಬಿಎಗೆ ಹೋಗಬೇಕೆ ಎಂಬ ಗೊಂದಲದಲ್ಲಿ ಇದ್ದೇನೆ. ಭಾರತದಲ್ಲಿ ಓದಿದರೆ ಒಳ್ಳೆಯದೇ ಅಥವಾ ವಿದೇಶದಲ್ಲೇ? ಜೊತೆಗೆ ಎಂಬಿಎ, ಎಂಇಎಂ, ಎಂಐಎಂ ಮಧ್ಯೆ ಇರುವ ವ್ಯತ್ಯಾಸ ತಿಳಿಸಿ. ಹಾಗೆಯೇ ಒಳ್ಳೆಯ ಎಂಬಿಎ ಕಾಲೇಜು ಮತ್ತು ಹಣಕಾಸಿನ ನೆರವಿನ ಕುರಿತೂ ತಿಳಿಸಿ.
–ವೈ.ಆರ್.ಸಾತ್ವಿಕ್

ಉತ್ತರ: ಸಾತ್ವಿಕ್ ಅವರೆ ನಿಮ್ಮಂತಹ ಎಂಜಿನಿಯರಿಂಗ್ ಪದವಿಯಲ್ಲಿ ವಿದ್ಯಾಭ್ಯಾಸ ಮುಂದುವರೆಸುವವರು ಮತ್ತು ಮ್ಯಾನೇಜ್ಮೆಂಟ್ನಲ್ಲಿ ಆಸಕ್ತಿ ಹೊಂದಿರುವವರು ಹಲವಾರು ಮಂದಿ ಗೊಂದಲದಲ್ಲಿದ್ದಾರೆ. ಈ ಕೆಳಕಂಡ ಸೂಕ್ತ ಸಲಹೆಗಳು ನಿಮಗೆ ಸಹಾಯವಾಗಬಹುದು.

ಮೊದಲನೆಯದಾಗಿ ನೀವು ಎಂ.ಬಿ.ಎ. ಗ್ರ್ಯಾಜುಯೆಟ್ಗಳನ್ನೂ ಸಂಪರ್ಕಿಸಿ ಇನ್ನು ಹೆಚ್ಚು ವಿವರಗಳು ಮತ್ತು ಫೈನಾನ್ಸ್, ಮಾರ್ಕೆಟಿಂಗ್, ಎಚ್ಆರ್ ಇತ್ಯಾದಿ ವಿಭಾಗಗಳಲ್ಲಿ ಯಾವುದರಲ್ಲಿ ಉನ್ನತ ಶಿಕ್ಷಣ ಪಡೆದರೆ ನಿಮ್ಮ ಮುಂದಿನ ವೃತ್ತಿಯಲ್ಲಿ ಸಹಾಯವಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

ಎಂಜಿನಿಯರಿಂಗ್ ಮುಗಿದ ತಕ್ಷಣದಲ್ಲಿಯೇ ನೀವು ಎಂ.ಬಿ.ಎ. ಮಾಡಬಹುದಾದರೂ, ಒಂದೆರಡು ವರ್ಷಗಳು ಉದ್ಯೋಗ ಮಾಡಿ ನಂತರದಲ್ಲಿ ನಿಮಗೆ ಎಂ.ಬಿ.ಎ. ಡಿಗ್ರಿ ಮಾಡುವುದು ಅವಶ್ಯಕತೆ ಇದೆಯಾ ಎಂದು ವಿಚಾರ ಮಾಡಿ. ಅದರಲ್ಲೂ ಯಾವ ಕ್ಷೇತ್ರದಲ್ಲಿ ಸ್ಪೆಷಲೈಸೇಶನ್ ಮಾಡಬಹುದು ಎಂದು ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುತ್ತದೆ.

ಅಲ್ಲದೆ ಒಂದೆರಡು ವರ್ಷಗಳು ಕೆಲಸ ಮಾಡಿದರೆ ಎಂ.ಬಿ.ಎ. ಕೋರ್ಸ್ನಲ್ಲಿ ನಿಮಗೆ ಮಾಡುವ ಪಾಠಗಳ ಬಗ್ಗೆ ಇನ್ನೂ ಹೆಚ್ಚಿನ ಆಸಕ್ತಿ ಉಂಟಾಗುತ್ತದೆ. ಇನ್ನೊಂದು ವಿಷಯದ ಬಗ್ಗೆ ಗಮನಿಸಬೇಕಾಗಿದದ್ದು ಏನೆಂದರೆ ನೀವು ಕೆಲಸಕ್ಕೆ ಸೇರಿದ ಮೇಲೆ ನಿಮಗೆ ಇವುಗಳ ಬಗ್ಗೆ ಗಮನ ಕೊಡುವುದಕ್ಕೆ ಸಮಯ ಇರುತ್ತದೆಯೋ ಇಲ್ಲವೊ.

ನೀವು ಭಾರತ ದೇಶದಲ್ಲಿಯೇ ಉದ್ಯೋಗ ಮಾಡುವ ನಿರ್ಧಾರ ಮಾಡಿದ್ದರೆ ಇಲ್ಲಿಯೇ ಎಂ.ಬಿ.ಎ. ಮಾಡುವುದು ಒಳ್ಳೆಯದು. ವಿದೇಶದಲ್ಲಿ ಉದ್ಯೋಗಾವಕಾಶಕ್ಕೆ ನಿಮ್ಮಲ್ಲಿ ಆಸಕ್ತಿ ಇದ್ದರೆ ವಿದೇಶದಲ್ಲಿಯೇ ಎಂ.ಬಿ.ಎ. ಪದವಿ ಪಡೆಯುವುದು ಸೂಕ್ತ.

ನೀವು ಎಲ್ಲಿಂದ ಎಂ.ಬಿ.ಎ. ಪದವಿಯನ್ನು ಪಡೆದರೂ ಆಯಾ ಶಿಕ್ಷಣ ಸಂಸ್ಥೆಯ ಗುಣಮಟ್ಟವನ್ನು ಪರಿಗಣಿಸಿ ಹಾಗೂ ಆಯಾ ಕಾಲೇಜುಗಳಲ್ಲಿ ಜಾಬ್ ಪ್ಲೇಸ್ಮೆಂಟ್ ಅನುಕೂಲತೆಗಳನ್ನು ಖಾತರಿ ಮಾಡಿಕೊಳ್ಳಿ. ಇನ್ನೊಂದು ಮುಖ್ಯವಾದ ವಿಷಯ - ನೀವು ವಿದೇಶದಲ್ಲಿ ಎಂ.ಬಿ.ಎ. ಮಾಡಿ ಅಲ್ಲಿ ಉದ್ಯೋಗಾವಕಾಶಗಳು ಇಲ್ಲದಿದ್ದರೆ, ನಿಮಗೆ ನಿಮ್ಮ ದೇಶದಲ್ಲಿ ಸೂಕ್ತವಾದ ಉದ್ಯೋಗ ಪಡೆಯಲು ಕಷ್ಟವಾಗಬಹುದು. ವಿದೇಶದಲ್ಲಿ ವ್ಯಾಸಂಗ ಮಾಡುವುದು ತುಂಬಾ ದುಬಾರಿಯಾಗಿರುತ್ತದೆ. ಹಾಗಾಗಿ ಪ್ಲೇಸ್ಮೆಂಟ್ ಸಪೋರ್ಟ್ ಬಹಳ ಮುಖ್ಯ.

ಎಂ.ಬಿ.ಎ./ ಎಂ.ಐ.ಎ./ಎಂ.ಇ.ಎಂ.ನಲ್ಲಿರುವ ವ್ಯತ್ಯಾಸಗಳೆಂದರೆ :

ಎಂ.ಬಿ.ಎ.: ಈ ಪದವಿ ಸಾಮಾನ್ಯ ವ್ಯಾಪಾರ ವ್ಯವಹಾರಗಳಿಗೆ ಸೂಕ್ತವಾಗಿದೆ. ಇದೇನು ಟೆಕ್ನಿಕಲ್ ಪ್ರೋಗ್ರಾಂ ಅಲ್ಲ ಮತ್ತು ಇದರಿಂದ ಸಾಮಾನ್ಯ ಆಡಳಿತ ವ್ಯವಹಾರಗಳಿಗೆ ಸಾಕಷ್ಟು ಇಂಡಸ್ಟ್ರಿಗಳಲ್ಲಿ ಉದ್ಯೋಗಾವಕಾಶಗಳಿರುತ್ತವೆ.

ಎಂ.ಇ.ಎಂ.: ಈ ಕೋರ್ಸ್ನಲ್ಲಿ ತಾಂತ್ರಿಕ ಮತ್ತು ಆಡಳಿತ ವ್ಯವಹಾರಗಳೆರಡೂ ಇರುವುದರಿಂದ ಎಂಜಿನಿಯರಿಂಗ್ ಸೆಕ್ಟರ್ನಲ್ಲಿ ಮ್ಯಾನೇಜ್ಮೆಂಟ್ ಉದ್ಯೋಗಾವಕಾಶವನ್ನು ಪಡೆಯಲು ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಸೂಕ್ತವಾದದ್ದು.

ಎಂ.ಐ.ಎಂ: ಇದು ವಿಶೇಷವಾಗಿ ವಿದೇಶಗಳಲ್ಲಿ ಲಭ್ಯವಿರುವ ಕೋರ್ಸ್. ವಿದ್ಯಾರ್ಥಿಗಳಿಗೆ ಕೆಲಸ ಮಾಡಿ ಅನುಭವವಿಲ್ಲದಿದ್ದರೂ ಇದರಿಂದ ಮ್ಯಾನೇಜ್ಮೆಂಟ್ ವಲಯದಲ್ಲಿ ಕೆಲಸ ಮಾಡಲು ಒಂದು ಪೀಠಿಕೆಯನ್ನು ಹಾಕಿದಂತಿರುತ್ತದೆ.

ನಿಮಗೆ ಕೊನೆಯದಾಗಿ ಒಂದು ಸಲಹೆ ಕೊಡುವುದಾದರೆ ನೀವು ಎಂ.ಬಿ.ಎ. ಮಾತ್ರ ಮುಗಿಸುವುದರಿಂದ ನಿಮ್ಮ ಅರ್ಹತೆಗಳು, ಅವಕಾಶಗಳೇನೂ ಸುಧಾರಿಸುವುದಿಲ್ಲ. ನೀವು ಆಯ್ಕೆ ಮಾಡಿಕೊಂಡಿರುವ ವಿಷಯದಲ್ಲಿ ವಿಶೇಷ ಆಸಕ್ತಿಯನ್ನು ಇಟ್ಟುಕೊಂಡು ಸೂಕ್ತವಾದ ಕಾಲೇಜಿನಲ್ಲಿ ಪ್ಲೇಸ್ಮೆಂಟ್ ಅವಕಾಶಗಳನ್ನು ಹೊಂದಿರುವುದರಲ್ಲಿ ವಿದ್ಯಾಭ್ಯಾಸ ಮಾಡಬೇಕು.

ಜನರಲ್ ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ. ಮಾಡುತ್ತಿದ್ದೇನೆ. ನನಗೆ ಶಿಕ್ಷಕನಾಗಲು ಇಷ್ಟವಿಲ್ಲ. ಮುಂದೇನು ಮಾಡಬಹುದು ಹಾಗೂ ವಿಶೇಷ ಕೌಶಲಗಳನ್ನು ಅಭಿವೃದ್ಧಿ ಮಾಡಿಕೊಳ್ಳಬೇಕೆ?
–ರಾಜನ್, ಶಿವಮೊಗ್ಗ

ಉತ್ತರ: ನೀವು ಎಂ.ಎಸ್ಸಿ ಕೆಮಿಸ್ಟ್ರಿ ಪದವೀಧರರಾಗಿರುವುದರಿಂದ ನಿಮಗೆ ಆರ್ & ಡಿ ಲ್ಯಾಬ್ಸ್, ಕೆಮಿಕಲ್ಸ್ ಮತ್ತು ಫರ್ಟಿಲೈಸರ್, ಪ್ಲಾಸ್ಟಿಕ್, ಫಾರ್ಮಾಸ್ಯೂಟಿಕಲ್ಸ್ , ಮೆಟಲರ್ಜಿ ಮುಂತಾದ ಇಂಡಸ್ಟ್ರೀಸ್ ಅಥವಾ ಬಯೋಕಾನ್ ತರಹದ ಲೈಫ್ ಸೈನ್ಸ್ನಂತಹ ಕಂಪನಿಗಳಲ್ಲಿ ಮತ್ತು ಸ್ಕೂಲ್ ಕಾಲೇಜುಗಳಲ್ಲಿ ಶಿಕ್ಷಕರಾಗಿ ಉದ್ಯೋಗಾವಕಾಶ ಇರುತ್ತದೆ. ಈ ಮೇಲ್ಕಂಡ ಕ್ಷೇತ್ರಗಳಲ್ಲಿ ಕೂಡ ವಿಧವಿಧವಾದ ಕ್ಷೇತ್ರಗಳಲ್ಲಿ ಉದಾಹರಣೆಗೆ : ಸಂಶೋಧನೆ, ತಯಾರಿಕೆ, ಗುಣಮಟ್ಟವನ್ನು ಕಾಪಾಡಿಕೊಳ್ಳುವ ಅಥವಾ ಮಾರಾಟ ವಿಭಾಗದಲ್ಲಿ ಉದ್ಯೋಗಾವಕಾಶಗಳಿರುತ್ತವೆ. ಹಾಗಾಗಿ ಮೊದಲು ನಿಮ್ಮ ಆಸಕ್ತಿ ಯಾವ ವಿಭಾಗದಲ್ಲಿ ಮತ್ತು ಯಾವ ಕ್ಷೇತ್ರದಲ್ಲಿ ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ. ತದನಂತರ ಸೂಕ್ತವಾದ ಕೋರ್ಸ್ ಅಥವಾ ಉದ್ಯೋಗಾವಕಾಶವನ್ನು ಆಯ್ಕೆ ಮಾಡಿ.

ನಿಮ್ಮ ಕೋರ್ಸಿನ ಉಳಿದ ಕಾಲಾವಕಾಶದಲ್ಲಿ ನೀವು ಈ ಮೇಲ್ಕಂಡ ಕ್ಷೇತ್ರದಲ್ಲಿ ಯಾವುದಾದರೂ ಒಂದು, ಎರಡನ್ನು ಆಯ್ಕೆ ಮಾಡಿಕೊಂಡು ಅದರ ಸಂಬಂಧಪಟ್ಟ ಕಂಪನಿಗಳಲ್ಲಿ ‘ಸಮ್ಮರ್ ಪ್ರಾಜೆಕ್ಟ್’ ಮಾಡಿದರೆ ಉಪಯೋಗವಾಗುತ್ತದೆ.

ಎಂ.ಎಸ್ಸಿ. ನಂತರ ಮಾಡುವ ಕೋರ್ಸಿನ ಒಂದು ಉದಾಹರಣೆಯಂದರೆ ನೀವು ಫಾರ್ಮಾ ವಿಷಯದಲ್ಲಿ ಎಂ.ಬಿ.ಎ. ಕೋರ್ಸ್ ಮಾಡಿದರೆ, ಸಾಕಷ್ಟು ಫಾರ್ಮಾಸ್ಯೂಟಿಕಲ್ ಕಂಪನಿಗಳಲ್ಲಿ ಸೇಲ್ಸ್ ಮತ್ತು ಮಾರ್ಕೆಟಿಂಗ್ ಉದ್ಯೋಗಾವಕಾಶಗಳು ಹೆಚ್ಚಾಗಿರುತ್ತವೆ.

ಅಷ್ಟಲ್ಲದೇ ನೀವು ಕ್ಲಿನಿಕಲ್ ರೀಸರ್ಚ್ ವಿಭಾಗದಲ್ಲಿ ಕೂಡ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.