ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಅನ್ನು ಕಗ್ಗತ್ತಲ ಕೋಣೆಯಾಗಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಮುಖಂಡ ಡೆರೆಕ್ ಒಬ್ರಿಯಾನ್ ಮಂಗಳವಾರ ಆರೋಪಿಸಿದರು.

‘ಲೋಕಸಭೆಯ ಉಪಸಭಾಪತಿಯನ್ನು ನೇಮಕ ಮಾಡದಿರುವುದು ಇದೇ ಮೊದಲು ಮತ್ತು ಮೋದಿ ಅವರು ಸದನದಲ್ಲಿ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಿಲ್ಲ’ ಎಂದರು.

‘17ನೇ ಲೋಕಸಭೆಗೆ ವಿದಾಯ ಹೇಳಲಾಗುತ್ತಿದೆ. ಈ ಅವಧಿಯು ಹಲವು ಸಂಶಯಾಸ್ಪದ ನಡೆಗಳಿಗೆ ಸಾಕ್ಷಿಯಾಗಿದೆ’ ಎಂದು ಟೀಕಿಸಿದರು.

ಸದನವನ್ನು ಕೋಮು ನಿಂದನೆಗೆ ಬಳಸಲು ಸಂಸದರೊಬ್ಬರಿಗೆ ಅನುಮತಿ ನೀಡಲಾಗಿತ್ತು. ಸಂಸತ್ನೊಳಗೆ ಇದೇ ಮೊದಲ ಬಾರಿ ಭದ್ರತಾ ಲೋಪವಾಗಿತ್ತು. ಸಾಗರ್ ಶರ್ಮಾ ಮತ್ತು ಡಿ.ಮನೋರಂಜನ್ ಎಂಬುವವರು ಸಂದರ್ಶಕರ ಗ್ಯಾಲರಿಯಿಂದ ಸದನದೊಳಗೆ ಜಿಗಿದು ಘೋಷಣೆಗಳನ್ನು ಕೂಗುತ್ತಾ ‘ಸ್ಮೋಕ್ ಕ್ಯಾನ್’ ಹಾರಿಸಿ ದಾಂದಲೆ ಎಬ್ಬಿಸಿದ್ದರು ಎಂದು ಹೇಳಿದರು.

ವಿರೋಧ ಪಕ್ಷಗಳ ಸಂಸದರ ಸುಮಾರು 300 ಪ್ರಶ್ನೆಗಳನ್ನು ಅಳಿಸಲಾಗಿತ್ತು ಎಂದೂ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.