ಮಾಡಾಳ್ (ಚನ್ನಗಿರಿ): ಲಂಚ ಪ್ರಕರಣದ ಆರೋಪಿಯಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ, ಚನ್ನಗಿರಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಡಾಳ್ ಮಲ್ಲಿಕಾರ್ಜುನ್ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಭಾನುವಾರ ಘೋಷಿಸಿದ್ದಾರೆ.

‘ಕ್ಷೇತ್ರದ ಜನರ ಒತ್ತಾಯದ ಮೇರೆಗೆ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ’ ಎಂದು ಮಾಡಾಳ್ ಮಲ್ಲಿಕಾರ್ಜುನ್ ತಾಲ್ಲೂಕಿನ ಮಾಡಾಳ್ ಗ್ರಾಮದಲ್ಲಿ ತಿಳಿಸಿದ್ದಾರೆ.

‘ಕೆಲವರ ಪಿತೂರಿಯಿಂದಾಗಿ ನಮ್ಮ ಕುಟುಂಬ ಕಣ್ಣೀರು ಹಾಕುವಂತಾಯಿತು. ರಾಜಕೀಯವಾಗಿ ನಮ್ಮ ಕುಟುಂಬವನ್ನು ತುಳಿಯಲು ಹುನ್ನಾರ ನಡೆದಿದೆ. ವಯಸ್ಸಾಗಿರುವ ಕಾರಣ ಮಗನಿಗೆ ಟಿಕೆಟ್ ಕೊಡುವಂತೆ ತಂದೆಯವರು ಪಕ್ಷದ ವರಿಷ್ಠರನ್ನು ಕೋರಿದ್ದರು. ಆದರೆ, ಯಾವುದನ್ನೂ ಲೆಕ್ಕಿಸದೆ, ಜನರ ನಾಡಿಮಿಡಿತ ಗೊತ್ತಿಲ್ಲದಿರುವವರಿಗೆ ಟಿಕೆಟ್ ನೀಡಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.