ಬೆಂಗಳೂರು: ‘ಮುಂದಿನ ಹಂತದ ಚುನಾವಣಾ ಪ್ರಚಾರದಲ್ಲಿ ಧನಾತ್ಮಕ ವಿಚಾರಗಳನ್ನು ಮಾತ್ರ ಪ್ರಸ್ತಾಪಿಸುತ್ತೇವೆ. ಯಾವುದೇ ಕಾರಣಕ್ಕೂ ನಕಾರಾತ್ಮಕ ವಿಷಯಗಳತ್ತ ಗಮನಕೊಡುವುದಿಲ್ಲ’ ಎಂದು ರಾಜ್ಯ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮತದಾರರೂ ನಕಾರಾತ್ಮಕ ವಿಷಯಗಳನ್ನು ಬಯಸುವುದಿಲ್ಲ. ನಮಗಾಗಿ ಏನು ಮಾಡಿದ್ದೀರಿ ಮತ್ತು ಏನು ಮಾಡುತ್ತೀರಿ ಎಂಬುದಷ್ಟನ್ನೇ ಬಯಸುತ್ತಾರೆ. ಹೀಗಾಗಿ ನಾವೂ ಕೂಡ ಅದೇ ವಿಷಯಗಳನ್ನು ಪ್ರಸ್ತಾಪಿಸಲಿದ್ದೇವೆ’ ಎಂದರು.

‘ಜನರ ಕಷ್ಟಗಳನ್ನು ಬಗೆಹರಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಜಿ ಅವರು ದೊಡ್ಡ ಹೆಜ್ಜೆ ಇಟ್ಟರು. ಗಾಂಧೀಜಿ ಹೇಳಿದಂತೆ ಸ್ವಚ್ಛತೆಗೆ ಆದ್ಯತೆ ಕೊಡಲಾಯಿತು’ ಎಂದರು.

‘ಶೌಚಾಲಯ ಮತ್ತು ಉಜ್ವಲಾ ಯೋಜನೆ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ವರದಾನವಾಯಿತು. ಶೌಚಾಲಯ ನಿರ್ಮಾಣದ ವಿಚಾರದಲ್ಲಿ ಮೋದಿ ಕ್ರಾಂತಿಯನ್ನೇ ಮಾಡಿದರು. ಶೌಚಾಲಯ ನಿರ್ಮಾಣಕ್ಕಾಗಿ ಎಸ್‌ಸಿ–ಎಸ್‌ಟಿ, ಹಿಂದುಳಿದ ಸಮುದಾಯಕ್ಕಾಗಿ ಹೆಚ್ಚಿನ ಆದ್ಯತೆ ನೀಡಿದರು. 11 ಕೋಟಿ ಶೌಚಾಲಯಗಳ ನಿರ್ಮಾಣ ಮಾಡುವ ಮೂಲಕ ಈ ಸಮುದಾಯ ಘನತೆಯಿಂದ ಜೀವನ ನಡೆಸುವ ವ್ಯವಸ್ಥೆ ಮಾಡಿದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.