ಚಿಕ್ಕಬಳ್ಳಾಪುರ: ಕಾಂಗ್ರೆಸ್ ಅಭ್ಯರ್ಥಿಗೆ(ವೀರಪ್ಪ ಮೊಯಿಲಿ) ಮತ ಹಾಕುವಂತೆ ಮತದಾರರಿಗೆ ನಗರಸಭೆ ಸದಸ್ಯ ಮಂಜುನಾಥಾಚಾರಿ ಅವರು ಹಣ ಹಂಚುತ್ತಿದ್ದ ವಿಡಿಯೊ ವೈರಲ್ ಆಗಿದ್ದು, ಚುನಾವಣಾಧಿಕಾರಿಗಳು ಮಂಜುನಾಥಾಚಾರಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯ ಆವರಣದಲ್ಲಿನ ಪೊಲೀಸ್ ವಸತಿ ಗೃಹಗಳ ಹಿಂಭಾಗದಲ್ಲಿರುವ ತಮ್ಮ ಕಚೇರಿಯಲ್ಲಿ ಮಂಜುನಾಥಾಚಾರಿ ಅವರು ರಾಜಾರೋಷವಾಗಿ ಮತದಾರರಿಗೆ ತಲಾ ₹200 ರಿಂದ ₹300 ಹಣ ಹಂಚುತ್ತಿದ್ದರು. ಇದು ಬೆಳಕಿಗೆ ಬರುತ್ತಿದ್ದಂತೆ ಕ್ಷಿಪ್ರ ಸಂಚಾರಿ ತಂಡದ ಅಧಿಕಾರಿ ಸಂಜೀವಪ್ಪ ಅವರು ಜಿಲ್ಲಾ ಚುನಾವಣಾಧಿಕಾರಿ ಅವರ ನಿರ್ದೇಶನದ ಮೆರೆಗೆ ದೂರು ದಾಖಲಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಮಂಜುನಾಥಾಚಾರಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.