ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘777 ಚಾರ್ಲಿ’ ವಿಶ್ವದಾದ್ಯಂತ ಜೂನ್ 10ಕ್ಕೆ ಬಿಡುಗಡೆಯಾಗಿದ್ದು ಸಿನಿ ಪ್ರಿಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಬಿಡುಗಡೆಯಾಗಿ ನಾಲ್ಕು ದಿನಕ್ಕೆ ಈ ಸಿನಿಮಾ ಗಮನಾರ್ಹ ಗಳಿಕೆಯನ್ನು ಬಾಕ್ಸ್ ಆಫೀಸ್ನಲ್ಲಿ ಕಂಡಿದೆ. ಚಿತ್ರದ ಈವರೆಗಿನ ಗಳಿಕೆ ಒಟ್ಟಾರೆ ₹20 ಕೋಟಿ ದಾಟಿದೆ ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಗಳಿಕೆ ಬಗ್ಗೆ ಚಿತ್ರತಂಡ ಇದುವರೆಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

‘777 ಚಾರ್ಲಿ’ ಕರ್ನಾಟಕದಲ್ಲಿ ಅತಿ ಹೆಚ್ಚು ಅಂದರೆ ₹15 ಕೋಟಿ ಕಲೆಕ್ಷನ್ಮಾಡಿದೆ. ತೆಲಂಗಾಣ ಹಾಗೂ ಆಂಧ್ರಪ್ರದೇಶದಿಂದ ಸುಮಾರು ಒಂದೂವರೆ ಕೋಟಿ ರುಪಾಯಿ, ಮಲೆಯಾಳಂನಿಂದ ₹90 ಲಕ್ಷ ಹಾಗೂ ತಮಿಳಿನಿಂದ 45 ಲಕ್ಷ ಬಾಚಿದೆ. ಅಲ್ಲದೇ ಪ್ರಿಮಿಯರ್ ಪ್ರದರ್ಶನದಿಂದಲೂ ಬರೋಬ್ಬರಿ ₹1 ಕೋಟಿ ಗಳಿಸಿದೆ ಎಂದು ಹೇಳಲಾಗುತ್ತಿದೆ.

ರಕ್ಷಿತ್ ಶೆಟ್ಟಿ ಸಿನಿಮಾ ಜೀವನದಲ್ಲಿ ಈ ಚಿತ್ರ ಅತಿ ಹೆಚ್ಚು ಬಾಕ್ಸ ಆಫೀಸ್ ಗಳಿಕೆ ಕಾಣಬಹುದು ಎಂದೂ ಸಿನಿಮಾ ವಿಶ್ಲೇಷಕರು ಹೇಳುತ್ತಿದ್ದಾರೆ.

‘777 ಚಾರ್ಲಿ’ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ದೊರಕಿದೆ. ಸಂಗೀತಾ ಶೃಂಗೇರಿ ಚಿತ್ರದ ನಾಯಕಿ. ಚಿತ್ರದಲ್ಲಿ ನಟ, ನಿರ್ದೇಶಕ ರಾಜ್ ಬಿ.ಶೆಟ್ಟಿ, ಡ್ಯಾನಿಶ್ ಸೇಠ್ ತಾರಾಗಣದಲ್ಲಿದ್ದಾರೆ. ಜಿ.ಎಸ್.ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ಈ ಚಿತ್ರದ ನಿರ್ಮಾಪಕ.

ವಿಡಿಯೊ ಸ್ಟೋರಿ: ಚಾರ್ಲಿ–ಶಾರ್ವರಿ ತುಂಟಾಟ; ಬಾಲನಟಿ ಶಾರ್ವರಿಯೊಂದಿಗೆ ಸಂದರ್ಶನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.