ನಯನತಾರಾ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿ. ತಮಿಳು, ತೆಲುಗಿನ ಹಲವು ಬಿಗ್ ಬಜೆಟ್ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ತಮಿಳಿನ ‘ಅಣ್ಣಾತೆ’ ಚಿತ್ರದಲ್ಲಿ ‘ಸೂಪರ್ ಸ್ಟಾರ್’ ರಜನಿಕಾಂತ್ಗೆ ಅವರೇ ನಾಯಕಿ.

ಕೋವಿಡ್–19 ಪರಿಣಾಮ ಬಾಲಿವುಡ್ ಸೇರಿದಂತೆ ಎಲ್ಲಾ ಭಾಷೆಯ ಚಿತ್ರರಂಗದ ನಟ, ನಟಿಯರ ದುಬಾರಿ ಸಂಭಾವನೆಗೆ ಕತ್ತರಿ ಪ್ರಯೋಗವಾಗಿದೆ. ಕೆಲವು ಸ್ಟಾರ್ ನಟರು ಸಂಭಾವನೆಯ ಮೊತ್ತವನ್ನು ಕಡಿಮೆ ಮಾಡಿಕೊಂಡಿದ್ದಾರೆ. ಆದರೆ, ಸಂಭಾವನೆ ವಿಚಾರದಲ್ಲಿ ನಯನತಾರಾ ಮಾತ್ರ ರಾಜಿ ಮಾಡಿಕೊಳ್ಳಲು ಸಿದ್ಧಳಿಲ್ಲ.

ಹಿಂದಿಯಲ್ಲಿ ಆಯುಷ್ಮಾನ್ ಖುರಾನ ನಟಿಸಿದ್ದ ‘ಅಂಧಾದುನ್’ ಚಿತ್ರ ತೆಲುಗಿಗೆ ರಿಮೇಕ್ ಆಗುತ್ತಿದೆ. ‘ಭೀಷ್ಮ’ ಚಿತ್ರದ ಖ್ಯಾತಿಯ ನಟ ನಿತಿನ್ ಇದರಲ್ಲಿ ನಟಿಸುತ್ತಿದ್ದಾರೆ. ‘ಅಂಧಾದುನ್’ನಲ್ಲಿ ನಟಿಸಿದ್ದ ಟಬು ಅವರನ್ನೇ ರಿಮೇಕ್ನಲ್ಲೂ ನಟಿಸುವಂತೆ ಚಿತ್ರತಂಡ ಕೋರಿತ್ತಂತೆ. ಆದರೆ, ಆಕೆ ದುಬಾರಿ ಸಂಭಾವನೆ ಕೇಳಿದರಂತೆ. ಮತ್ತೊಂದೆಡೆ ನಟಿ ಇಲಿಯಾನ ಡಿಕ್ರೂಸ್ ಕೂಡ ಈ ಪಾತ್ರದಲ್ಲಿ ನಟಿಸಲು ತಿರಸ್ಕರಿಸಿದ್ದಾರೆ ಎಂಬ ಸುದ್ದಿಯಿದೆ.

‘ಅಂಧಾದುನ್’ನಲ್ಲಿ ಟಬು ಬೋಲ್ಡ್ ಆದ ಪಾತ್ರದಲ್ಲಿ ನಟಿಸಿದ್ದರು. ರಿಮೇಕ್ನಲ್ಲಿ ಆ ಪಾತ್ರದಲ್ಲಿ ನಟಿಸಲು ನಯನತಾರಾ ಅವರೇ ಸೂಕ್ತ. ಆಕೆ ಮಾತ್ರವೇ ಪಾತ್ರಕ್ಕೆ ನ್ಯಾಯ ಒದಗಿಸಲಿದ್ದಾರೆ ಎಂಬುದು ತಂಡದ ನಿರ್ಧಾರ. ಹಾಗಾಗಿಯೇ, ಅವರನ್ನು ಚಿತ್ರದಲ್ಲಿ ನಟಿಸುವಂತೆ ಕೋರಿದೆ. ಆದರೆ, ಆಕೆ ಕೇಳಿರುವ ಸಂಭಾವನೆಗೆ ನಿರ್ಮಾಪಕರು ತಬ್ಬಿಬ್ಬುಗೊಂಡಿದ್ದಾರೆ.

ಸ್ಟಾರ್ ನಟರ ಜೊತೆಗೆ ನಟಿಸಲು ನಯನತಾರಾ ಪಡೆಯುವ ಸಂಭಾವನೆ ಮೊತ್ತ ₹ 2 ಕೋಟಿ. ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಲು ₹ 4 ಕೋಟಿ ಸಂಭಾವನೆ ಪಡೆಯುತ್ತಾರೆ. ‘ಅಂಧಾದುನ್’ ರಿಮೇಕ್ನಲ್ಲಿ ನಟಿಸಲು ಆಕೆ ₹ 4 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ ಎಂಬುದು ಟಾಲಿವುಡ್ ಅಂಗಳದ ಸುದ್ದಿ. ಹಾಗಾಗಿ, ಚಿತ್ರತಂಡಕ್ಕೆ ತಲೆನೋವು ತಂದಿದೆ. ಅಂದಹಾಗೆ ಇದಕ್ಕೆ ಮೆರ್ಲಪಾಕ ಗಾಂಧಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.