‘ಆಶಿಕಿ 2’ ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ನೆಲೆಕಂಡುಕೊಂಡಿರುವ ಆದಿತ್ಯ ರಾಯ್ ಕಪೂರ್ ಈಗ ಹೊಸ ಪ್ರಯೋಗಗಳಿಗೆ ಮುಂದಾಗಿದ್ದಾರೆ.. ಅಲಿಯಾ ಭಟ್ ಅವರೊಂದಿಗೆ ‘ಸಡಕ್ 2’ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಬಿಡುವು ಮಾಡಿಕೊಂಡು ಇತ್ತೀಚೆಗೆ ಬೆಂಗಳೂರಿನಲ್ಲಿ ‘ಸ್ಕೋರ್’ ಕಾಂಡೊಮ್ ಉತ್ಪನ್ನಗಳನ್ನು ಅವರು ಬಿಡುಗಡೆ ಮಾಡಿದರು.

ನಗುತ್ತಲೇ ಆದಿತ್ಯ ವೇದಿಕೆ ಏರಿದರು. ಆಗ ಕಾರ್ಯಕ್ರಮದ ನಿರೂಪಕಿ ಅವರನ್ನು ಕಾಲೆಳೆದರು, ನೀವು ಬಿಡುಗಡೆ ಮಾಡಲಿರುವ ಉತ್ಪನ್ನ ನಿಮಗೆ ನಗು ತರಿಸಿತೇ ಎಂದರು. ಅದಕ್ಕೆ ಆದಿತ್ಯ, ‘ಖಂಡಿತಾ ಇಲ್ಲ ನಾವು ಬಳಸುವ ಉತ್ಪನ್ನದ ಬಗ್ಗೆ ಮಾತನಾಡಲು ನಮಗೇಕೆ ನಾಚಿಕೆ’ ಎಂದರು. ವೇದಿಕೆ ನಗೆಗಡಲಿನಲ್ಲಿ ಮುಳುಗಿತ್ತು.

ಒಂದು ಹೆಜ್ಜೆ ಮುಂದೆ ಹೋದ ನಿರೂಪಕಿ, ಈ ಉತ್ಪನ್ನದಲ್ಲಿ ಮಹಿಳೆಯನ್ನು ಆಕರ್ಷಿಸುವ ಸ್ಪ್ರೇ ಕೂಡ ಇದೆ. ಇದನ್ನು ಬಳಸಿ ನಿಮ್ಮನ್ನು ಆಕರ್ಷಿಸಲೇ ಎಂದು ಕೇಳಿದರು, ಒಂದು ಕ್ಷಣ ತಬ್ಬಿಬ್ಬಾದ ಆದಿತ್ಯ, ತಡಮಾಡಬೇಡಿ ಹಾಗಿದ್ದರೆ ಎಂದರು.

‘ಮುಂಬೈನಲ್ಲಿ ಇನ್ನೂ ಹೆಚ್ಚಿನ ಟ್ರಾಫಿಕ್ ಇದೆ. ಬೆಂಗಳೂರಿಗರು ಅದೃಷ್ಟವಂತರು' ಎಂದು ಆದಿತ್ಯ ಹೇಳಿದರು.

ಸಿನಿಮಾ ಬಗ್ಗೆ ಒಂದಿಷ್ಟು ಮಾತನಾಡಿದ ಅವರು, ‘ಮಹೇಶ್ ಭಟ್ ನಿರ್ದೇಶನದ ‘ಸಡಕ್ 2’ ಸಿನಿಮಾ ಬಗ್ಗೆ ಎಲ್ಲರಿಗೂ ಹೆಚ್ಚಿನ ನಿರೀಕ್ಷೆ ಇದೆ. ಅಲಿಯಾ ಭಟ್ ಜೊತೆ ಕೆಲಸ ಮಾಡಲು ಖುಷಿಯಾಗುತ್ತದೆ. ಆನ್‌ಸ್ಕ್ರೀನ್‌ನಲ್ಲಿ ಅವರು ನನಗೆ ಬೆಸ್ಟ್ ಜೋಡಿ. ಸಿನಿಮಾದ ಒಂದಷ್ಟು ಭಾಗಗಳ ಶೂಟಿಂಗ್ ಮುಗಿದಿದೆ. ಇದು ಅತ್ಯುತ್ತಮ ಅವಕಾಶ’ ಎಂದರು.

‘ಕಲಂಕ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡಿದ್ದ ಬಗ್ಗೆ ಎದುರಾದ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದರು. ‘ಹೌದು ಈ ಸಿನಿಮಾ ಹೆಚ್ಚು ಸದ್ದು ಮಾಡಲಿಲ್ಲ. ಆದರೆ ಒಳ್ಳೆಯ ಸಂದೇಶ ಇದೆ. ಮುಂದೆ ಇನ್ನೂ ಹೆಚ್ಚು ಶ್ರಮಪಟ್ಟು ಕೆಲಸ ಮಾಡಬೇಕಿದೆ’ ಎಂದರು.

ಅಭಿಮಾನಿಗಳ ಬಗ್ಗೆ ಮಾತಾಡಿದ ಆದಿತ್ಯ, ‘ನನಗೆ ಕ್ರೇಜಿ ಫ್ಯಾನ್ಸ್ ಇದ್ದಾರೆ. ಫೇಸ್‌ಬುಕ್, ಟ್ವಿಟರ್ ಎಲ್ಲಾ ಕಡೆ ಪ್ರೀತಿಯ ಸಂದೇಶಗಳನ್ನು ಕಳಿಸುತ್ತಾರೆ. ನಾನು ಅವರಿಗೆ ನೋವಾಗುವಂತೆ ಯಾವತ್ತೂ ಮಾತಾಡಿಲ್ಲ. ಎಲ್ಲರನ್ನೂ ಗೌರವಿಸುತ್ತೇನೆ’ ಎಂದರು.

ಮುಂದಿನ ಯೋಜನೆಗಳ ಬಗ್ಗೆ ಪ್ರಶ್ನೆ ಎದುರಾದಾಗ, ‘ಇನ್ನೇನಿದೆ ಮುಂದೆ, ಹೊಸ ಉತ್ಪನ್ನ ಕೈ ಸೇರಿದೆ. ಬಳಕೆ ಮಾಡೋದಷ್ಟೇ ಬಾಕಿ. ನನಗೂ ಕುತೂಹಲ ಇದೆ, ಇದರಿಂದ ಎಷ್ಟು ಹುಡುಗಿಯರನ್ನು ಆಕರ್ಷಿಸಬಹುದು ನೋಡೋಣ’ ಎಂದು ಕಿಚಾಯಿಸಿದರು.

‘ಸದ್ಯಕ್ಕೆ ಮಲಂಗ್ ಸಿನಿಮಾಕ್ಕೆ ಸಹಿ ಹಾಕಿದ್ದೇನೆ. ‘ಆಶಿಕಿ 2’ ಚಿತ್ರದ ನಿರ್ದೇಶಕ ಮೋಹಿತ್ ಸೂರಿ ಅವರೇ ಈ ಸಿನಿಮಾ ನಿರ್ದೇಶಿಸಲಿದ್ದಾರೆ. ಹಾಗಾಗಿ ಭರವಸೆ ಹೆಚ್ಚಿದೆ. ದಿಶಾ ಪಟಾನಿ ಜೊತೆ ಕೆಲಸ ಮಾಡಲಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.