ಬಾಲಿವುಡ್ನಲ್ಲಿ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಅಭಿನಯದ ‘ರಾಮಾಯಣ’ಚಿತ್ರ ತೆರೆಗೆ ಬರಲು ಸಿದ್ಧವಾಗಿರುವನಡುವೆಯೇ ದೀಪಿಕಾ ಪಡುಕೋಣೆ ಮತ್ತೊಂದು ಹಿಂದೂ ಪುರಾಣಕಥನವಾದ ‘ಮಹಾಭಾರತ’ದಲ್ಲಿಯೂ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ.

ಮಹಾಭಾರತದಲ್ಲಿ ದೀಪಿಕಾದ್ರೌಪದಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಇವರು ನಟಿಸುವುದಷ್ಟೇ ಅಲ್ಲ, ಈ ಚಿತ್ರಕ್ಕೆ ಬಂಡವಾಳವನ್ನೂ ಹೂಡಲಿದ್ದಾರೆ.

ದ್ರೌಪದಿ ದೃಷ್ಟಿಕೋನದಲ್ಲಿ ಮಹಾಭಾರತವನ್ನು ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಇದನ್ನು ನಿರ್ಮಾಪಕ ಮಧು ಮಂಟೆನಾ ಬಿಗ್ ಬಜೆಟ್ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ‘ಬಾಜಿರಾವ್ ಮಸ್ತಾನಿ’, ‘ಪದ್ಮಾವತ್’ ಚಿತ್ರಗಳಲ್ಲಿ ಐತಿಹಾಸಿಕ ಪಾತ್ರಗಳಲ್ಲಿ ನಟಿಸಿದ್ದ ದೀಪಿಕಾ ಇದೇ ಮೊದಲ ಬಾರಿಗೆ ‘ಮಹಾಭಾರತ’ದಂತಹ ಪೌರಾಣಿಕ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಎರಡು – ಮೂರು ಭಾಗಗಳಲ್ಲಿ ಮಾಡಲು ಚಿತ್ರತಂಡ ನಿರ್ಧರಿಸಿದೆ.

‘ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ದ್ರೌಪದಿ ಕುರಿತಾಗಿಯೇ ಚಿತ್ರಕತೆ ಇದೆ. ದ್ರೌಪದಿ ಪಾತ್ರ ಮಾಡಲು ತುಂಬ ಥ್ರಿಲ್ ಆಗಿದ್ದೇನೆ. ಇದು ನನ್ನ ಜೀವನದಲ್ಲಿ ನಿರ್ವಹಿಸುತ್ತಿರುವ ಅತಿ ದೊಡ್ಡ ಪಾತ್ರ. ಮಹಾಭಾರತದ ಬಗ್ಗೆ ಪುರುಷರ ದೃಷ್ಟಿಕೋನದಿಂದ ಈಗಾಗಲೇ ಅನೇಕ ಸಿನಿಮಾಗಳು ಇವೆ. ಆದರೆ ಈ ಸಿನಿಮಾದಲ್ಲಿ ದ್ರೌಪದಿ ದೃಷ್ಟಿಕೋನದಲ್ಲಿ ಕತೆಯನ್ನು ನಿರೂಪಿಸಲಾಗುತ್ತಿರುವುದರಿಂದ ಮಹತ್ವದ್ದಾಗಿದೆ’ ಎಂದು ದೀಪಿಕಾ ಹೇಳಿಕೊಂಡಿದ್ದಾರೆ.

ಮುಂದಿನ ದೀಪಾವಳಿಗೆ ಈ ಚಿತ್ರದ ಮೊದಲ ಭಾಗ ಬಿಡುಗಡೆಯಾಗಲಿದೆ ಎಂದು ಸುದ್ದಿಯಿದೆ. ಚಿತ್ರದ ಬೇರೆ ಪಾತ್ರವರ್ಗದ ಬಗ್ಗೆ ಮಾಹಿತಿ ಇನ್ನೂ ಹೊರಬಿದ್ದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.