ಇಂದು (ಜೂನ್ 10) ಭಾರತೀಯ ಬ್ಯಾಡ್ಮಿಂಟನ್ ಕ್ಷೇತ್ರದ ದಿಗ್ಗಜ ಪ್ರಕಾಶ್ ಪಡುಕೋಣೆ ಅವರ ಜನ್ಮದಿನ. ಅವರ ಪುತ್ರಿ ಖ್ಯಾತ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ, ತನ್ನ ಅಪ್ಪನಿಗೆ ಭಾವಪೂರಕ ಶುಭಾಶಯ ಕೋರಿದ್ದಾರೆ.

65ನೇ ವರ್ಷಕ್ಕೆ ಕಾಲಿಟ್ಟಿರುವ ಅಪ್ಪನಿಗೆ ಬಾಲ್ಯದಲ್ಲಿ ಅವರೊಂದಿಗೆ ತೆಗೆಸಿಕೊಂಡ ಮುದ್ದಾದ ಫೋಟೊಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳೂವ ಮೂಲಕ ಶುಭಾಶಯ ಕೋರಿದ್ದಾರೆ.

ಫೋಟೊದ ಜತೆಗೆ, ’ನೀವು ನನ್ನ ಆಫ್ಸ್ಕ್ರೀನ್ ಹೀರೊ‘ ಎಂದು ಬಣ್ಣಿಸಿರುವ ದೀಪಿಕಾ, ‘ನಿಜವಾದ ಚಾಂಪಿಯನ್ ಎನ್ನುವುದು ಒಬ್ಬರ ವೃತ್ತಿಪರ ಸಾಧನೆಯಷ್ಟೇ ಅಲ್ಲ, ಮಾನವೀಯ ವ್ಯಕ್ತಿಯಾಗಿರುವುದೂ ನಿಜವಾದ ಚಾಂಪಿಯನ್ ಎಂದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು‘ ಎಂದು ಅಡಿಬರಹ ಬರೆದಿದ್ದಾರೆ.

ದೀಪಿಕಾ ಅವರ ಈ ಪೋಸ್ಟ್ಗೆ ಅಭಿಮಾನಿಗಳು, ಫ್ಯಾನ್ ಪೇಜ್ಗಳಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಇದೇ ಪೋಸ್ಟ್ ಅನ್ನು ತಂಗಿ ಅನಿಶಾ ಪಡುಕೋಣೆ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ಪ್ರಕಾಶ್ ಪಡುಕೋಣೆ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಗೆದ್ದ ಮೊದಲ ಭಾರತೀಯ. ಈ ಹೆಗ್ಗಳಿಕೆ ಪಡೆದು ಕಳೆದ ಮಾರ್ಚ್ ತಿಂಗಳಿಗೆ 40 ವರ್ಷ ತುಂಬಿತ್ತು. ಆ ಸಂಭ್ರಮವನ್ನು ದೀಪಿಕಾ ಹಂಚಿಕೊಂಡಿದ್ದರು.

'ಪಪ್ಪಾ, ಬ್ಯಾಡ್ಮಿಂಟನ್ ಮತ್ತು ಭಾರತೀಯ ಕ್ರೀಡೆಗೆ ನೀವು ನೀಡಿರುವ ಕಾಣಿಕೆಯನ್ನು ಅಳತೆ ಮಾಡಲಾಗದ್ದು. ನಿಮ್ಮ ಬದ್ಧತೆ, ಶಿಸ್ತು, ಛಲ ಮತ್ತು ವರ್ಷಗಟ್ಟಲೆ ಕಠಿಣ ಪರಿಶ್ರಮದ ಮೂಲಕ ನಮಗೆಲ್ಲ ಸ್ಫೂರ್ತಿ ತುಂಬುತ್ತಿರುವುದಕ್ಕೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.