ಸ್ಯಾಂಡಲ್ವುಡ್ನ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅವರ ಈ ವರ್ಷದ ಮೊದಲ ಸಿನಿಮಾ ರಿಲೀಸ್ಗೆ ಮುಹೂರ್ತ ನಿಗದಿಯಾಗಿದೆ. ‘ಘೋಸ್ಟ್’ ಸಿನಿಮಾ 2023ರ ಅ.19ರಂದು ಬಿಡುಗಡೆಯಾಗಲಿದೆ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲೇ ಚಿತ್ರತಂಡವು ‘ಬಂಪರ್’ ಸುದ್ದಿ ನೀಡಿದೆ.

ಶ್ರೀನಿ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದ ಥಿಯೇಟ್ರಿಕಲ್, ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕುಗಳು ಪೆನ್ ಸ್ಟುಡಿಯೊ ಸಂಸ್ಥೆಗೆ ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಸಿನಿಮಾ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಆಗಲಿದೆ. ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್. ಈ ಚಿತ್ರವನ್ನು ನಿರ್ಮಿಸಿದ್ದಾರೆ. ‘ಆರ್ಆರ್ಆರ್’, ‘ಜವಾನ್’ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ವಿತರಣೆ ಮಾಡಿರುವ ಪೆನ್ ಸ್ಟುಡಿಯೊ ಸಂಸ್ಥೆ ಈಗ ‘ಘೋಸ್ಟ್’ ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದೆ. ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳನ್ನು ಹೊರತು ಪಡಿಸಿ ಮಿಕ್ಕ ಭಾಷೆಗಳಲ್ಲಿ ‘ಘೋಸ್ಟ್’ ಚಿತ್ರವನ್ನು ಪೆನ್ ಸ್ಟುಡಿಯೊ ಬಿಡುಗಡೆ ಮಾಡುತ್ತಿರುವುದಾಗಿ ನಿರ್ಮಾಪಕ ಸಂದೇಶ್ ತಿಳಿಸಿದ್ದಾರೆ.

ಅಕ್ಟೋಬರ್ ಮೊದಲವಾರ ಚಿತ್ರದ ಪ್ರಚಾರಕ್ಕಾಗಿ ಶಿವರಾಜ್ ಕುಮಾರ್ ಅವರು ಮುಂಬೈ, ದೆಹಲಿ ಮುಂತಾದ ಕಡೆ ತೆರಳುತ್ತಿದ್ದಾರೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ. ಚಿತ್ರದ ‘ಒಜಿಎಂ’ ಶುಕ್ರವಾರ(ಸೆ.22) ಬಿಡುಗಡೆಯಾಗಿದ್ದು, ನಾಲ್ಕು ಭಾಷೆಗಳಲ್ಲಿ ಒಂದೇ ಹಾಡು ಇರಲಿದೆ ಎಂದಿದ್ದಾರೆ ಶ್ರೀನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.