ಬೆಂಗಳೂರು: ‘ರೈತರ ಸಮಸ್ಯೆಯನ್ನು ಬಗೆಹರಿಸುವುದು ಸರ್ಕಾರದ ಕರ್ತವ್ಯ. ಅವರು ಅದನ್ನು ಮಾಡುತ್ತಾರೆ. ಕೃಷಿ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದರೆ ಅದರ ಬಗ್ಗೆ ಮಾತನಾಡಬಹುದು. ಅದಕ್ಕಾಗಿ ಸರ್ಕಾರವಿದೆ, ಕೃಷಿ ಸಚಿವರಿದ್ದಾರೆ. ಅವರು ನಮಗಿಂತ ಹೆಚ್ಚು ತಿಳಿದವರು. ಸಂಬಂಧಪಟ್ಟವರು ಈ ಕುರಿತು ಗಮನಹರಿಸಬೇಕು. ಸಮಸ್ಯೆಗಳನ್ನು ಭಾರತದ ಚೌಕಟ್ಟಿನೊಳಗೆ ಬಗೆಹರಿಸಬೇಕು’ ಎಂದುರಾಷ್ಟ್ರವ್ಯಾಪಿ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ತಮ್ಮ ಅಭಿಪ್ರಾಯವನ್ನು ನಟ ಶಿವರಾಜ್‌ಕುಮಾರ್ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಸರ್ಕಾರವು ಎಲ್ಲದಕ್ಕೂ ಜವಾಬ್ದಾರಿಯುತ. ಸಿನಿಮಾ ನಟರು ರೈತರ ಪರವಾಗಿ ಮಾತನಾಡಿದರೆ ಏನಾಗುತ್ತದೆ? ಸಿನಿಮಾ ಇಂಡಸ್ಟ್ರಿಯೊಳಗಿನ ಸಮಸ್ಯೆಯನ್ನೇ ನಮಗೆ ಬಗೆಹರಿಸಿಕೊಳ್ಳಲು ಆಗುತ್ತಿಲ್ಲ. ನಾವು ಎಲ್ಲರಿಗೂ ಬೆಂಬಲ ನೀಡುತ್ತವೆ. ಪ್ರತಿ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಬೆಂಬಲ ನೀಡಿಯೇ ನೀಡುತ್ತಾನೆ. ಪ್ರತ್ಯೇಕವಾಗಿ ನಾನು ಇಂತಹ ಹೋರಾಟಕ್ಕೆ ಬೆಂಬಲ ನೀಡುತ್ತೇನೆ ಎಂದರೆ ಅದು ಕೇವಲ ತೋರಿಕೆಯಾಗಿ ಕಾಣುತ್ತದೆ. ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಬೆಂಬಲ ನೀಡುವುದು ಬೇರೆ. ನಮ್ಮ ಕೈಯಲ್ಲಿ ಇದ್ದಿದ್ದರೆ ಇಂದೇ ಬರೆದುಕೊಡುತ್ತಿದ್ದೆ. ಆದರೆ ನಮ್ಮ ಕೈಯಲ್ಲಿ ಏನೂ ಇಲ್ಲ. ಅದಕ್ಕಾಗಿ ಒಂದು ಸರ್ಕಾರವಿದೆ. ಭಾರತೀಯ ಚಿತ್ರರಂಗವೇ ಬೀದಿಗೆ ಬಂದು ಹೋರಾಟ ಮಾಡಿದರೆ ಈ ಸಮಸ್ಯೆ ಬಗೆಹರಿಯುತ್ತದೆ ಎಂದರೆ, ಈ ರೀತಿ ಹೋರಾಟಕ್ಕೆ ಅಭ್ಯಂತರವಿಲ್ಲ. ಆದರೆ, ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ರೈತರ ಹೋರಾಟದ ಕುರಿತು ಖ್ಯಾತನಾಮರಿಂದ ಪರ–ವಿರೋಧಗಳ ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ ಸಾಮಾಜಿಕ ಜಾಲತಾಣಗಳ ಬಳಕೆ ಅತಿಯಾಗುತ್ತಿದೆ. ಇದೊಂದು ರೀತಿ ಆಟವಾಗಿದೆ. ಬಳಕೆ ಕಡಿಮೆಯಾದರೆ ಎಲ್ಲವೂ ಸರಿಯಾಗುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.