ಬಾಲಿವುಡ್ ಕನಸಿನ ಕನ್ಯೆ ನಟಿ ಹೇಮಾಮಾಲಿನಿ ಅವರ 72ನೇ ಹುಟ್ಟುಹಬ್ಬ ಇಂದು (ಅ.16). ಹೇಮಾಮಾಲಿನಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.#HemaMalini ಹ್ಯಾಪಿ ಬರ್ತ್ಡೇ ಹೇಮಾಮಾಲಿನಿ, ಡ್ರೀಮ್ ಗರ್ಲ್, ಹ್ಯಾಪಿ ಬರ್ತ್ಡೇ ಡ್ರೀಮ್ಗರ್ಲ್ ಹ್ಯಾಷ್ ಟ್ಯಾಗ್ಗಳು ಶುಕ್ರವಾರ ಬೆಳಿಗ್ಗೆಯಿಂದ ಟ್ವಿಟರ್ನಲ್ಲಿ ಟ್ರೆಂಡ್ ಆಗಿವೆ.

ಅವರ ಅಭಿನಯದ ಮೊದಲ ಚಿತ್ರ ಸಪ್ನೋಕಾ ಸೌದಾಗರ್ನ ಫೋಟೋಗಳು ಹಾಗೂ ಇತರ ಚಿತ್ರಗಳ ವಿಡಿಯೋಗಳು, ಸಂದರ್ಶನದ ತುಣುಕುಗಳನ್ನು ಅಭಿಮಾನಿಗಳು ಟ್ವಿಟರ್ ಹಾಗೂ ಫೇಸ್ಬುಕ್ನಲ್ಲಿ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ಬಾಲಿವುಡ್ನ ಪ್ರಮುಖರು, ಬಿಜೆಪಿ ಮುಖಂಡರು, ಚಿತ್ರ ನಿರ್ಮಾಣ ಕಂಪನಿಗಳು, ಪ್ರಮುಖ ಮನೋರಂಜನಾ ಚಾನಲ್ಗಳು ಹೇಮಾ ಮಾಲಿನಿ ಅವರಿಗೆ ಶುಭಕೋರಿದವರಲ್ಲಿ ಸೇರಿದ್ದಾರೆ.

ಶುಭಾಶಯದ ಹೆಸರಿನಲ್ಲಿ ವ್ಯಂಗ್ಯವಾಡಿದವರೂ ಇದ್ದಾರೆ. ಹೆಲಿಕಾಪ್ಟರ್ನಲ್ಲಿ ಬಂದಿಳಿದು ಬೆಳೆ ಕೊಯಿಲು ಮಾಡುವ ಫೋಟೋ ಜೋಡಿಸಿರುವ ರಿಷಿಕೇಶ್ ಕುಮಾರ್ ಎಂಬುವವರು ‘ಹ್ಯಾಪಿ ಬರ್ತ್ಡೇ ಡೋಂಗಿ ಸಂಸದ್’ ಎಂದು ಜರಿದಿದ್ದಾರೆ. ‘ಬದುಕಿನಲ್ಲಿ ಇಷ್ಟೊಂದು ಬಡವರಾಗುವುದೂ ಇದೆಯೇ’ ಎಂದು ಚಿತ್ರದ ಮೇಲೆ ಬರೆದಿದ್ದಾರೆ.

ಹಾಲುಬಿಳಿ ಬಣ್ಣದ ಜರಿ ಅಂಚಿನ ಸೀರೆ ಉಟ್ಟುಕೊಂಡು ಗದ್ದೆ ಕೊಯಿಲು ಮಾಡುತ್ತಿರುವ ಹೇಮಾಮಾಲಿನಿ ಅವರ ಚಿತ್ರವನ್ನು ಟ್ಯಾಗ್ ಮಾಡಿರುವ ರಶೀದ್ ಖಾನ್ ಎಂಬುವವರು, ‘ಇಷ್ಟೊಂದು ಕೆಲಸ ಮಾಡುವ ಸಂಸದೆಯನ್ನು ನಾವು ಕಂಡೇ ಇರಲಿಲ್ಲ. ನಿಮಗೆ ಶುಭಾಶಯಗಳು. ಚುನಾವಣೆಯ ರೈತರೇ’ ಎಂದು ಕುಟುಕಿದ್ದಾರೆ.

ನೃತ್ಯ, ನಟನೆ, ನಿರ್ದೇಶನ, ಚಿತ್ರ ನಿರ್ಮಾಣದಲ್ಲಿ ಖ್ಯಾತಿ ಪಡೆದ ಹೇಮಾಮಾಲಿನಿ ಸಂಸದೆಯಾಗಿ ರಾಜಕಾರಣದಲ್ಲೂ ಸಕ್ರಿಯರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.