ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾತ್ರಕ್ಕಾಗಿ 6 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾಗಿ ಬಾಲಿವುಡ್ ನಟಿ ಕಂಗನಾ ರನೋಟ್ ಹೇಳಿದ್ದಾರೆ. ತೂಕ ಹೆಚ್ಚಿಸಿಕೊಳ್ಳಲು ಹಾರ್ಮೋನ್ ಮಾತ್ರೆಗಳನ್ನು ತೆಗೆದುಕೊಂಡಿದ್ದೆ ಎಂದು ‘ಮಿಡ್ ಡೇ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಕಂಗನಾ ರನೋಟ್ ತಿಳಿಸಿದ್ದಾರೆ.

‘ತಲೈವಿ ಪಾತ್ರದಲ್ಲಿ ನಾನು ಸ್ಥೂಲಕಾಯ ಹೊಂದುವುದು ಅನಿವಾರ್ಯವಾಗಿತ್ತು. ವಿಶೇಷವಾಗಿ, ಹೊಟ್ಟೆ ಮತ್ತು ತೊಡೆಗಳು ದಪ್ಪವಾಗಬೇಕಿತ್ತು. ನಾನು ಎತ್ತರವಾಗಿದ್ದೆ, ನನ್ನ ಮುಖ ದುಂಡಗಿಲ್ಲ. ಹೀಗಾಗಿ, ವಿಭಿನ್ನವಾಗಿ ಕಾಣಿಸಲು ಹಾರ್ಮೋನ್ ಮಾತ್ರೆಗಳಿಗೆ ಮೊರೆ ಹೋಗಬೇಕಾಯಿತು. ಅದರ ಜೊತೆಗೆ ತೂಕ ಹೆಚ್ಚಿಸಿಕೊಳ್ಳಲು ನಾನು ಅಧಿಕ ಆಹಾರ ತಿನ್ನಲು ಆರಂಭಿಸಿದೆ’ ಎಂದಿದ್ದಾರೆ.

‘ನಟರು ತಮ್ಮ ಉಡುಪು ಮತ್ತು ಹಾವಭಾವದ ಮೂಲಕ ಬೇರೆ ವ್ಯಕ್ತಿಗಳ ಪಾತ್ರ ತುಂಬಿಸುವುದು ಸಹಜ. ಆದರೆ, ದೈಹಿಕ ರೂಪಾಂತರ ಹೊಂದುವುದು ಅಷ್ಟೊಂದು ಸರಳ ಕೆಲಸವಲ್ಲ. ನಿರ್ದೇಶಕ ವಿಜಯ್‌ಗೆ ನಾನು ಆದಷ್ಟು ಜಯಲಲಿತಾ ಅವರನ್ನು ಹೋಲುವುದು ಬೇಕಿತ್ತು. ಜಯಲಲಿತಾ ಅವರೇ ಹಲವು ಬಾರಿ ತಮ್ಮ ಬದುಕಿನಲ್ಲಿ ದಪ್ಪ–ಸಣ್ಣ ಆಗಿದ್ದರು’ ಎಂದು ಕಂಗನಾ ಹೇಳಿದ್ದಾರೆ.

‘ಜಯಲಲತಾ ಅವರು ಭರತನಾಟ್ಯ ನೃತ್ಯಗಾರ್ತಿಯಾಗಿದ್ದರು. ಆಗ ಜಯಲಲಿತಾ ಸ್ಥೂಲಕಾಯ ಹೊಂದಿರಲಿಲ್ಲ. ಅವರು ರಾಜಕೀಯ ಸೇರಿದ ನಂತರ ಅಫಘಾತಕ್ಕೀಡಾದರು. ಆ ಸಮಯದಲ್ಲಿ ಅವರಿಗೆ ಸ್ಟೀರಾಯ್ಡ್‌ಗಳನ್ನು ಚುಚ್ಚಲಾಗುತ್ತಿತ್ತು. ಆ ಕಾರಣ ಅವರ ದೇಹದ ತೂಕ ಹೆಚ್ಚಾಯಿತು’ ಎಂದಿದ್ದಾರೆ.

ತಲೈವಿ ಚಿತ್ರವು ಜಯಲಲಿತಾ ಅವರ ಸಿನೆಮಾ ವೃತ್ತಿ, ರಾಜಕೀಯ ಜೀವನ ಮತ್ತು ಏರಿಳಿತಗಳ ದಾಖಲೆಗಳನ್ನು ಹೊಂದಿದೆ. ಚಿತ್ರವನ್ನು ಎ.ಎಲ್.ವಿಜಯ್ ನಿರ್ದೇಶನ ಮಾಡಿದ್ದಾರೆ. ವಿಷ್ಣು ಇಂದೂರಿ ಹಾಗೂ ಶೈಲೇಶ್ ಸಿಂಗ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜಯಲಲಿತಾ ಬದುಕಿನ ಮಹತ್ವದ ವ್ಯಕ್ತಿಯಾದ ಎಂ.ಜಿ.ಆರ್ ಪಾತ್ರದಲ್ಲಿ ‘ಬಾಂಬೆ’ ಚಿತ್ರ ಖ್ಯಾತಿಯ ಅರವಿಂದ್ ಸ್ವಾಮಿ ಕಾಣಿಸಿಕೊಂಡಿದ್ದಾರೆ.

2020ರ ಜೂನ್ 26ರಂದು ತಮಿಳು, ತೆಲಗು ಮತ್ತು ಹಿಂದಿ ಸೇರಿದಂತೆ ಮೂರೂ ಭಾಷೆಗಳಲ್ಲಿ ತಲೈವಿ ಚಿತ್ರವು ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.