‘ಜಡ್ಜ್ಮೆಂಟಲ್ ಕ್ಯಾ ಹೈ’ ಚಿತ್ರದ ಬಿಡುಗಡೆ ಬೆನ್ನಲ್ಲೇ ತಮ್ಮ ಮುಂದಿನ ಚಿತ್ರ ಸಿದ್ಧತೆಯಲ್ಲಿ ಕಂಗನಾ ತೊಡಗಿದ್ದಾರೆ. ಜಯಲಲಿತಾ ಜೀವನಾಧಾರಿತ ಚಿತ್ರದಲ್ಲಿ ಕಂಗನಾ, ಜಯಲಲಿತಾ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅದಕ್ಕಾಗಿ ತಮಿಳು ಭಾಷೆಯನ್ನು ಕಲಿಯುತ್ತಿದ್ದಾರಂತೆ.

ನಿರ್ದೇಶಕರು ಹಾಗೂ ತಂಡ ಚಿತ್ರದ ಆರಂಭದ ಕೆಲಸದಲ್ಲಿ ತೊಡಗಿದೆ. ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಈ ಚಿತ್ರದ ಚಿತ್ರೀಕರಣವನ್ನು ಆರಂಭಿಸಲು ಈ ಚಿತ್ರದ ನಿರ್ದೇಶಕ ಎ.ಎಲ್ ವಿಜಯ್ ಯೋಜನೆ ಹಾಕಿಕೊಂಡಿದ್ದಾರೆ. ಇದು ಮೂರು ಭಾಷೆಗಳಲ್ಲಿ ತಯಾರಾಗಲಿದ್ದು, ಹಿಂದಿಯಲ್ಲಿ ‘ಜಯ’ ಎಂದು ತೆಲುಗು ಹಾಗೂ ತಮಿಳಿನಲ್ಲಿ ‘ತಲೈವಿ’ ಎಂದು ಬಿಡುಗಡೆಯಾಗಲಿದೆ.

ಈ ಚಿತ್ರದ ಮೊದಲ ಭಾಗದ ಚಿತ್ರೀಕರಣವು ಮೈಸೂರಿನಲ್ಲಿ ನಡೆಯಲಿದ್ದು, ಬಳಿಕ ಚೆನ್ನೈ ಹಾಗೂ ಮುಂಬೈನಲ್ಲಿ ನಡೆಯಲಿದೆ.ಈ ಚಿತ್ರದಲ್ಲಿ ಸ್ಟೆಲ್ಲಾ ಮೇರಿಸ್ ಕಾಲೇಜಿನಲ್ಲಿ ಜಯಲಲಿತಾ ಅವರ ಕಾಲೇಜು ಜೀವನದಿಂದ ರಾಜಕೀಯ ಪ್ರವೇಶಕ್ಕಾಗಿ ಸಿನಿಮಾರಂಗದಿಂದ ದೂರವಾದ ತನಕದ ಕತೆಯನ್ನು ಹೊಂದಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.