ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಜನ್ಮದಿನ ಇಂದು (ಫೆ.24). ಜಯಲಲಿತಾ ಬದುಕು ಆಧರಿಸಿದ ಬಯೊಪಿಕ್‌ನಲ್ಲಿ ಚಿಕ್ಕ ವಯಸ್ಸಿನ‘ತಲೈವಿ’ಯಾಗಿ ಕಾಣಿಸಿಕೊಂಡಿರುವ ಕಂಗನಾ ರನೋಟ್‌ರ ಮತ್ತೊಂದು ಚಿತ್ರವನ್ನು ಜನ್ಮದಿನದ ಹಿನ್ನೆಲೆಯಲ್ಲಿ ಚಿತ್ರತಂಡ ಬಹಿರಂಗಗೊಳಿಸಿದೆ.

ಕಪ್ಪು–ಕೆಂಪು ಅಂಚಿನ ಬಿಳಿಸೀರೆ ಉಟ್ಟಿರುವ ಕಂಗನಾ ತಲೆಗೂದಲನ್ನು ಅಚ್ಚುಕಟ್ಟಾಗಿ ಬನ್ ಕಟ್ಟಿಕೊಂಡಿದ್ದಾರೆ. ಹಣೆಯ ಮೇಲೆ ಅಗಲ ಗುಂಡು ಬಿಂದಿಯ ಅಡಿಯಲ್ಲಿ ಕೆಂಪು ಅಡ್ಡಗೆರೆಯೂ ಇದೆ. ಕೆಳತುಟಿಯನ್ನು ಎಡಕ್ಕೆ ಓರೆಯಾಗಿಸಿ ಥೇಟ್ ಜಯಲಲಿತಾರಂತೆಯೇ ಮುಗುಳ್ನಗೆ ತುಳುಕಿಸಿದ್ದಾರೆ.

ಇದನ್ನೂ ಓದಿ:ಎಂಜಿಆರ್ ಆಗಿ ಪರಕಾಯ ಪ್ರವೇಶ ಮಾಡಿದ ಅರವಿಂದ ಸ್ವಾಮಿ

ಜೂನ್ 26ರಂದು ‘ತಲೈವಿ’ ತೆರೆಗೆ ಬರಲಿದೆ. ಸುಮಾರು 30ರ ಹರೆಯದ ಜಯಲಲಿತಾರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಂಗನಾ,ಜಯಲಲಿತಾ ರಾಜಕೀಯ ಪ್ರವೇಶಿಸಿದ ಅವಧಿಯನ್ನು ಕಟ್ಟಿಕೊಡಲಿದ್ದಾರೆ.

ಚಿತ್ರನಟಿ, ಖ್ಯಾತ ನರ್ತಕಿಯೂ ಆಗಿದ್ದ ಜಯಲಲಿತಾರ ವೈವಿಧ್ಯಮಯ, ಬಹುಮುಖಿ ಬದುಕು ಕಟ್ಟಿಕೊಡುವ ಬಯೋಪಿಕ್ ‘ತಲೈವಿ’. ಎ.ಎಲ್.ವಿಜಯ್ ನಿರ್ದೇಶನದ ಈ ಚಿತ್ರವು ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

‘ತಲೈವಿ’ಗಾಗಿ ತಮಿಳು ಕಲಿತ ಕಂಗನಾ, ಭರತನಾಟ್ಯಂ ತರಗತಿಗೂ ಸೇರಿಕೊಂಡಿದ್ದರು. ಜಯಲಲಿತಾರಂತೆ ಕಾಣಿಸಿಕೊಳ್ಳಲೆಂದು ಗಂಟೆಗಟ್ಟಲೆ ಮೇಕಪ್ ಸೆಷನ್‌ಗಳಲ್ಲಿ ಪಾಲ್ಗೊಂಡಿದ್ದರು.

ಬಾಹುಬಲಿ ಹಾಗೂಮಣಿಕರ್ಣಿಕಾಸಿನಿಮಾಗಳಿಗೆಕಥೆಬರೆದಿರುವವಿಜಯೇಂದರ್‌ಪ್ರಸಾದ್ ಈ ಸಿನಿಮಾಕ್ಕೂ ಕಥೆಬರೆದಿದ್ದಾರೆ. ವಿಷ್ಣುವರ್ದನ್‌ಇಂದೂರಿಮತ್ತು ಶೈಲೇಶ್ ಸಿಂಗ್ ತಲೈವಿ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.