ಮುಂಬೈ: ದೇಶದಲ್ಲಿ ಕೋವಿಡ್ 19 ಪ್ರಕರಣಗಳು ಏರಿಕೆಯಾಗುತ್ತಿರುವ ಕಾರಣ ಬಾಲಿವುಡ್ ನಟಿ ಕಂಗನಾ ರನೌತ್ ನಟನೆಯ ಬಹು ನಿರೀಕ್ಷೆಯ ‘ತಲೈವಿ’ ಚಿತ್ರದ ಬಿಡುಗಡೆಯನ್ನು ಚಿತ್ರದ ನಿರ್ಮಾಪಕರು ಮುಂದೂಡಿದ್ದಾರೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ನಟಿ ದಿವಂಗತ ಜೆ.ಜಯಲಲಿತಾ ಅವರ ಜೀವನಚರಿತ್ರೆ ಆಧರಿಸಿ ಬಹುಭಾಷೆಗಳಲ್ಲಿ ನಿರ್ಮಿಸಿರುವ ಈ ಚಿತ್ರವನ್ನು ಏ.23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು.

‘ಜನರ ಸುರಕ್ಷತೆಯೇ ನಮ್ಮ ಆದ್ಯತೆ. ಹಾಗಾಗಿ ಚಿತ್ರದ ಬಿಡುಗಡೆ ಮುಂದೂಡಲು ಚಿತ್ರತಂಡ ನಿರ್ಧರಿಸಿದೆ’ ಎಂದು ಚಿತ್ರ ನಿರ್ಮಾಣ ಸಂಸ್ಥೆ ಜೀ ಸ್ಟುಡಿಯೋಸ್ ಟ್ವಿಟ್ ಮಾಡಿದೆ.

ಈ ಚಿತ್ರವನ್ನು ತೆಲುಗು, ತಮಿಳು, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ನಿರ್ಮಿಸಿರುವುದರಿಂದ ಎಲ್ಲ ಭಾಷೆಗಳಲ್ಲೂ ಏಕ ಕಾಲಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ. ಚಿತ್ರ ಬಿಡುಗಡೆಗೆ ಸಿದ್ಧವಿದ್ದರೂ ಕೋವಿಡ್ 19 ಹರಡದಂತೆ ಮುನ್ನೆಚ್ಚರಿಕೆ ವಹಿಸಲು, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ಚಿತ್ರ ಬಿಡುಗಡೆ ಮುಂದೂಡಲಾಗುತ್ತಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಹೇಳಿದೆ.

ಕೆ.ವಿ. ವಿಜಯೇಂದ್ರ ಪ್ರಸಾದ್ ರಚನೆ, ವಿಜಯ್ ನಿರ್ದೇಶನದ ‘ತಲೈವಿ’ ಚಿತ್ರದಲ್ಲಿ ಕಂಗನಾ ರನೌತ್ ಜಯಲಲಿತಾ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಅರವಿಂದ್ ಸ್ವಾಮಿ, ಮಧೂ ಪ್ರಕಾಶ್ ರಾಜ್, ಜಿಶ್ಶು ಸೇನ್‌ಗುಪ್ತಾ, ಭಾಗ್ಯಶ್ರೀ, ಪೂರ್ಣಾ ತಾರಾಗಣದಲ್ಲಿದ್ದಾರೆ.

ಏಪ್ರಿಲ್ 30ರಂದು ಬಿಡುಗಡೆಯಾಗಬೇಕಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ‘ಸೂರ್ಯವಂಶಿ’ ಚಿತ್ರವನ್ನು ನಿರ್ಮಾಪಕರು ಕೋವಿಡ್ 19 ಪ್ರಕರಣಗಳ ಉಲ್ಬಣದಿಂದಾಗಿ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.