ನಟ ರಿಷಬ್ ಶೆಟ್ಟಿ ನಿರ್ಮಾಣ ಮಾಡುತ್ತಿರುವ ‘ಲಾಫಿಂಗ್ ಬುದ್ಧ’ ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಜೂನ್‌ನಲ್ಲಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ.

ರಿಷಬ್ ಶೆಟ್ಟಿ ಫಿಲಂಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಭರತ್ ರಾಜ್ ಎಂ. ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದು, ತೇಜು ಬೆಳವಾಡಿ, ಸುಂದರ್ ರಾಜ್ ಸೇರಿ ಇನ್ನೂ ಹಲವು ಕಲಾವಿದರಿದ್ದಾರೆ. ಭದ್ರಾವತಿ, ಜೋಗ, ಸಾಗರ, ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಸಲಾಗಿದ್ದು, ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

ಚಿತ್ರಕ್ಕೆ 30 ಕೆ.ಜಿ. ತೂಕ ಏರಿಕೆ!

‘ಈ ಚಿತ್ರ ‘ಹೀರೋ’ ಚಿತ್ರಕ್ಕೂ ಮೊದಲೇ ಬರಬೇಕಿತ್ತು. ‘ಲಾಫಿಂಗ್ ಬುದ್ಧ’ ದೊಡ್ಡ ಪ್ರಾಜೆಕ್ಟ್. ಕೋವಿಡ್ ಲಾಕ್‌ಡೌನ್ ಕಾರಣದಿಂದ ಈ ಪ್ರಾಜೆಕ್ಟ್ ಸ್ಥಗಿತಗೊಂಡಿತ್ತು. ಆ ಸಂದರ್ಭದಲ್ಲಿ ಸಣ್ಣದೊಂದು ಪ್ರಾಜೆಕ್ಟ್ ಯೋಜನೆ ಹಾಕಿಕೊಂಡೆವು. ಅದೇ ‘ಹೀರೋ’. ಈ ಸಿನಿಮಾ ಬಳಿಕ ನಾನು ತೂಕ ಕಳೆದುಕೊಂಡಿದ್ದೆ. ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಳ್ಳಬೇಕಿದ್ದ ಕಾರಣ ಮತ್ತೆ ‘ಲಾಫಿಂಗ್ ಬುದ್ಧ’ ಮುಂದೂಡಲ್ಪಟ್ಟಿತ್ತು. ಸಿನಿಮಾದಲ್ಲಿ ನಾನು ದಪ್ಪ ಇರುವ ಪೊಲೀಸ್ ಪಾತ್ರ ಮಾಡುತ್ತಿದ್ದೇನೆ. ಮೊದಲಿಗೆ ಸಿಂಥೆಟಿಕ್ ವಸ್ತುಗಳನ್ನು ಬಳಸಿ ಹೊಟ್ಟೆ ದಪ್ಪ ಮಾಡುವ ಕುರಿತು ತಂಡ ಯೋಚಿಸಿತು. ಆದರೆ ಪಾತ್ರದಲ್ಲಿ ನೈಜತೆ ಕಾಣಬೇಕು ಎನ್ನುವ ಉದ್ದೇಶದಿಂದ ಈ ಸಿನಿಮಾಗಾಗಿ ನಾನು 30 ಕೆ.ಜಿ. ತೂಕ ಏರಿಸಿಕೊಂಡೆ. ಸಿಕ್ಕಿದ್ದೆಲ್ಲ ತಿನ್ನುವ ಅವಕಾಶ ಆವಾಗ ಲಭಿಸಿತ್ತು’ ಎಂದು ಅನುಭವ ಹಂಚಿಕೊಂಡರು ಪ್ರಮೋದ್.

ರಕ್ಷಿತ್–ಪ್ರಮೋದ್ ಸ್ಪರ್ಧೆ!

‘ಲಾಫಿಂಗ್ ಬುದ್ಧ’ ಬಳಿಕ ನಾನು ಹಾಗೂ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಬಳಿಕ ನಾನು ಹಾಗೂ ರಕ್ಷಿತ್ ತೂಕ ಇಳಿಸಿಕೊಳ್ಳುವ ಸವಾಲು ತೆಗೆದುಕೊಂಡಿದ್ದೇವೆ. ನಾನು 20 ಕೆ.ಜಿ. ಇಳಿಸಿಕೊಂಡಿದ್ದೇನೆ. ಇನ್ನೂ 10 ಕೆ.ಜಿ. ಇಳಿಸಿಕೊಳ್ಳಬೇಕು. ‘ಉಳಿದವರು ಕಂಡಂತೆ’ ಸಿನಿಮಾದಲ್ಲಿ ಕಾಣಿಸಿಕೊಂಡಂತೆ ನಾನು ಕಾಣಿಸಿಕೊಳ್ಳಬೇಕಿದೆ. ‘ರಿಚರ್ಡ್ ಆ್ಯಂಟನಿ’ ಸಿನಿಮಾದಲ್ಲೂ ನಾನು ನಟಿಸುತ್ತಿದ್ದೇನೆ. ಇತ್ತೀಚೆಗೆ ರಕ್ಷಿತ್ ನನ್ನನ್ನು ನೋಡಿ ಇಷ್ಟು ಬೇಗ ತೂಕ ಇಳಿಸಿಕೊಂಡಿದ್ದೀಯಾ ಎಂದು ಕೇಳಿದ’ ಎಂದರು ಪ್ರಮೋದ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.