2014ರಲ್ಲಿ ನಟ ಕೋಮಲ್ ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ‘ನಮೋ ಭೂತಾತ್ಮ’ ಸಿನಿಮಾವು ತೆರೆಕಂಡಿತ್ತು. ನೃತ್ಯ ನಿರ್ದೇಶಕ ಮುರಳಿ ಆ ಸಿನಿಮಾ ನಿರ್ದೆಶಿಸಿದ್ದರು. 9 ವರ್ಷಗಳ ಬಳಿಕ ‘ನಮೋ ಭೂತಾತ್ಮ 2’ ಇಂದು ತೆರೆ ಕಾಣುತ್ತಿದೆ. ನಾಯಕಿಯಾಗಿ ಲೇಖಾ ಚಂದ್ರ ನಟಿಸಿದ್ದಾರೆ.

ನಟಿ ರಾಗಿಣಿ ಅಭಿನಯದ ‘ಶೀಲ’ ಚಿತ್ರ ಕೂಡ ಇಂದು ಬಿಡುಗಡೆಗೊಳ್ಳುತ್ತಿದೆ. ಬಾಲು ನಾರಾಯಣ್ ನಿರ್ದೇಶನದ ಚಿತ್ರ ಹಿಂದಿನ ವಾರ ಮಲಯಾಳಂನಲ್ಲಿ ಬಿಡುಗಡೆಗೊಂಡಿತ್ತು.

ರವಿ ಸುಬ್ಬರಾವ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ‘ಈ ಪಟ್ಟಣಕ್ಕೆ ಏನಾಗಿದೆ?’ ಚಿತ್ರ ಎರಡು ಭಾಗಗಳಲ್ಲಿ ಬರಲಿದೆ. ಮೊದಲ ಭಾಗ ಇಂದು ತೆರೆಗೆ ಬರುತ್ತಿದೆ. ಅಂದಹಾಗೆ, ಈ ಚಿತ್ರಕ್ಕೆ ನಿರ್ದೇಶಕರೇ ನಾಯಕ ಕೂಡ. ರಾಧಿಕಾರಾಮ್ ನಾಯಕಿ. ರಿತೇಶ್ ಜೋಶಿ, ಶ್ರೀನಿಧಿ, ಸತೀಶ್ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅನಿಲ್ ಸಿ.ಜೆ. ಸಂಗೀತ, ನೆಲ್ಸನ್ ಮೆಂಡಿಸ್ ಸಂಕಲನ ಹಾಗೂ ವಿನೋದ್ ಮತ್ತು ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.