ಖ್ಯಾತ ನಟ ಶ್ರೀಮುರುಳಿ ಹಾಗೂ ಆಶಿಕಾ ರಂಗನಾಥ್ ನಟನೆಯ ‘ಮದಗಜ’ ಸಿನಿಮಾದ ತೆಲುಗು ಟೀಸರ್ ಜನವರಿ 1ರ ಬೆಳಿಗ್ಗೆ 10ಗಂಟೆ 10 ನಿಮಿಷಕ್ಕೆ ಬಿಡುಗಡೆಯಾಗಲಿದೆ. ಮಹೇಶ್ ಕುಮಾರ್ ನಿರ್ದೇಶನ ಈ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ.

ಶ್ರೀಮುರುಳಿ ತೆಲುಗು ಟೀಸರ್ಗೆ ದನಿ ನೀಡಿದ್ದಾರೆ. ಈ ಚಿತ್ರದ ಕಥೆಯು ತೆಲುಗು ನೆಲಕ್ಕೆ ಹೊಂದುವಂತಿರುವ ಕಾರಣ ತೆಲುಗಿನಲ್ಲೂ ಬಿಡುಗಡೆ ಮಾಡಲು ನಿರ್ಧರಿಸಿದೆ ಚಿತ್ರತಂಡ. ಚಿತ್ರದ ಕನ್ನಡ ಟೀಸರ್ ಡಿಸೆಂಬರ್ 17ರ ಶ್ರೀಮುರುಳಿ ಹುಟ್ಟುಹಬ್ಬದಂದು ಬಿಡುಗಡೆಯಾಗಿತ್ತು. ಪವರ್ಫುಲ್ ಡೈಲಾಗ್ಗಳಿಂದ ಕೂಡಿದ್ದ ಟೀಸರ್ ವೀಕ್ಷಕರಿಗೆ ಇಷ್ಟವಾಗಿತ್ತು. ಇದರಲ್ಲಿ ಟಾಲಿವುಡ್ನ ಖ್ಯಾತ ನಟ ಜಗಪತಿ ಬಾಬು ಖಳನಾಯಕನಾಗಿ ನಟಿಸಿದ್ದಾರೆ. ದಕ್ಷಿಣದ ಖ್ಯಾತ ನಟಿ ದೇವಯಾನಿ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ.

ಲಾಕ್ಡೌನ್ಗೂ ಮೊದಲು ಶೂಟಿಂಗ್ಗಾಗಿ ವಾರಾಣಸಿಗೆ ತೆರಳಿತ್ತು ಚಿತ್ರತಂಡ. ಲಾಕ್ಡೌನ್ ಬಳಿಕ ಶೂಟಿಂಗ್ಗೆ ಅನುಮತಿ ಸಿಕ್ಕ ತಕ್ಷಣ ಮೈಸೂರು ಹಾಗೂ ಚಾಮರಾಜನಗರದಲ್ಲಿ ಶೂಟಿಂಗ್ ಮುಂದುವರೆಸಿತ್ತು. ಉಮಾಪತಿ ಶ್ರೀನಿವಾಸ ಗೌಡ ಈ ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಚೇತನ್ ಕುಮಾರ್ ಹಾಡುಗಳನ್ನು ಬರೆದಿದ್ದು, ರವಿ ಬಸ್ರೂರ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.