ಬೆಂಗಳೂರು: ಗುರುವಾರ ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡ ಕ್ರೈಂ ಪ್ಯಾಟ್ರೋಲ್ ಖ್ಯಾತಿಯ ಕಿರುತೆರೆ ನಟ ನಿತಿನ್ ಚೌಹಾಣ್ ಅವರು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

ಶುಕ್ರವಾರ ಅವರ ಅಂತ್ಯಕ್ರಿಯೆ ಮುಂಬೈನಲ್ಲಿ ನಡೆಯಿತು.

2008ರಿಂದ ಹಿಂದಿ ಕಿರುತೆರೆಯಲ್ಲಿ ಮಿಂಚುತ್ತಿದ್ದ ನಿತಿನ್ ಅವರು ಇತ್ತೀಚೆಗೆ ಎರಡ್ಮೂರು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಅವರಿಗೆ ಕಿರುತೆರೆ ಇಂಡಸ್ಟ್ರಿಯಲ್ಲಿ ಇತ್ತೀಚೆಗೆ ಸರಿಯಾದ ಕೆಲಸ, ಸಂಭಾವನೆ ಸಿಗುತ್ತಿರಲಿಲ್ಲ ಎಂದು ಅವರ ಕುಟುಂಬದವರ ಹೇಳಿಕೆಗಳನ್ನು ಹಾಗೂ ಪೊಲೀಸ್ ಹೇಳಿಕೆಗಳನ್ನು ಉಲ್ಲೇಖಿಸಿ ಖಾಸಗಿ ವಾಹಿನಿಗಳು ವರದಿ ಮಾಡಿವೆ.

ಅಲ್ಲದೇ ನಿತಿನ್ ಅವರು ಮಾನಸಿಕ ಖಿನ್ನತೆಗಾಗಿ ಇತ್ತೀಚೆಗೆ ಚಿಕಿತ್ಸೆ ಪಡೆಯುತ್ತಿದ್ದರು. ವೃತ್ತಿ ಹಾಗೂ ವೈಯಕ್ತಿಕ ಬದುಕನ್ನು ಸಮತೋಲಗೊಳಿಸುವಲ್ಲಿ ಹೆಣಗುತ್ತಿದ್ದರು ಎಂದೂ ಹೇಳಿದ್ದಾರೆ. ಅದಾಗ್ಯೂ ಪೊಲೀಸರು ಈ ಪ್ರಕರಣವನ್ನು ಕೌಟುಂಬಿಕ, ಹಣಕಾಸಿನ ವ್ಯವಹಾರದ ದೃಷ್ಟಿಕೋನದಿಂದ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ನಿತಿನ್ ಅವರಿಗೆ ಕೇವಲ 35 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಹಿಂದಿ ಕಿರುತೆರೆ ಲೋಕದ ಅನೇಕರು ಕಂಬನಿ ಮಿಡಿದಿದ್ದಾರೆ.

ಗುರುವಾರ ರಾತ್ರಿ ಮುಂಬೈನ ಅಪಾರ್ಟ್ಮೆಂಟ್ ಒಂದರಲ್ಲಿ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ನಿತಿನ್ ಅವರ ಮೃತದೇಹ ಪತ್ತೆಯಾಗಿತ್ತು. ನಿತಿನ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.

ಉತ್ತರ ಪ್ರದೇಶ ಆಲಿಘಡ ಮೂಲದ ನಿತಿನ್, ಹಿಂದಿಯ ದಾದಾಗಿರಿ–2 ರಿಯಾಲಿಟಿ ಶೋ ವಿಜೇತರಾಗಿದ್ದರು. ಇದಲ್ಲದೇ ಅನೇಕ ರಿಯಾಲಿಟಿ ಶೋ, ಹಿಂದಿ ಧಾರಾವಾಹಿಗಳ ಮೂಲಕ ಅವರು ಕಿರುತೆರೆಯಲ್ಲಿ ಮಿಂಚಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.