ಇನ್ನೇನು ಕೆಲ ದಿನಗಳಲ್ಲಿ ಬಾಲಿವುಡ್ ನಟರಣವೀರ್ ಸಿಂಗ್ ಜೊತೆ ಸಪ್ತಪದಿ ತುಳಿಯಲಿರುವ ನಟಿ ದೀಪಿಕಾ ಪಡುಕೋಣೆಯ ಸಾಹಸಮಯ ಕ್ಷಣಗಳ ಬಗ್ಗೆ ಅವರ ತಂದೆ ಪ್ರಕಾಶ್ ಪಡುಕೋಣೆ ನೆನೆದಿದ್ದಾರೆ.

‘ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಡಬೇಕೆಂಬ ಹೆಬ್ಬಯಕೆಯಿಂದ ದೀಪಿಕಾ ತನ್ನ 17ನೇ ವರ್ಷದಲ್ಲಿ ಮುಂಬೈಗೆ ಹೋದಳು. ಆಕೆ ಹೋದ ಮೇಲೆ ನಿದ್ರೆಯಿಲ್ಲದ ಎಷ್ಟೋ ರಾತ್ರಿಗಳನ್ನು ಕಳೆದಿದ್ದೆವು.ಪೋಷಕರಾಗಿ ಆ ಸಮಯ ನಮಗೆ ತುಂಬಾ ಕಷ್ಟಕರವಾಗಿತ್ತು’ ಎಂದು ಪ್ರಕಾಶ್ ಪುಡುಕೋಣೆ ಹೇಳಿದ್ದಾರೆ.

‘ಚಿಕ್ಕ ವಯಸ್ಸಿನ ಮಗಳನ್ನು ಹೊರಗೆ ಕಳುಹಿಸಲು ನಮಗೆ ಭಯವಾಗಿತ್ತು. ಆದರೆ, ಈಗ ಆಕೆ ನಡೆದು ಬಂದ ಹಾದಿಯನ್ನೊಮ್ಮೆ ತಿರುಗಿ ನೋಡಿದರೆ ಹೆಮ್ಮೆಯಾಗುತ್ತದೆ. ಆಕೆ ಅಂದು ತೆಗೆದುಕೊಂಡ ನಿರ್ಧಾರ ಸರಿಯಾದದ್ದು ಎನಿಸುತ್ತದೆ’ ಎಂದು ಹೇಳಿದ್ದಾರೆ.

ಅಪ್ಪನೊಂದಿಗೆಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿರುವ ದೀಪಿಕಾ ಪಡುಕೋಣೆ, ‘ಮುಂಬೈಗೆ ಸ್ಥಳಾಂತರಗೊಳ್ಳುವ ನಿರ್ಧಾರ ದೊಡ್ಡದು ಹಾಗೂ ಸವಾಲಿನದ್ದು ಎಂದು ನನಗೆ ಆಗ ಗೊತ್ತಿರಲಿಲ್ಲ. ಆ ಬಗ್ಗೆ ಉತ್ಸುಹಕಳಾಗಿದ್ದ ನನಗೆ ಅದು ಸುಲಭವೂ ಆಗಿತ್ತು. ಆ ನಿರ್ಧಾರವನ್ನು ಈಗ ನೆನದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ’ ಎಂದಿದ್ದಾರೆ.

‘ತಂದೆ–ತಾಯಿಯ ಕಾಳಜಿ ಬಗ್ಗೆ ನನಗೆ ಅರಿವಿತ್ತು. ಅದರೊಟ್ಟಿಗೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಂಬಲವೂ ಇತ್ತು. ಹೀಗಾಗಿ, ಮುಂಬೈಗೆ ಬಂದೆ. ಆ ಸಮಯದಲ್ಲಿ ನನ್ನ ತಂದೆ–ತಾಯಿ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆದಿದ್ದಾರೆ ಎಂಬುದು ಗೊತ್ತು.ನಾನು ಎಲ್ಲಿರಬೇಕು ಅಂತಾ ನನಗೆ ತಿಳಿದಿತ್ತು. ಭವಿಷ್ಯದ ಬಗ್ಗೆ ಹಾಗೂ ನಾನು ಕಂಡ ಸಾಧನೆ ಬಗ್ಗೆ ಅಚಲ ನಿರ್ಧಾರ ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ’ ಎಂದು ಹೇಳಿದ್ದಾರೆ.

ಮಾಡೆಲಿಂಗ್ ಕ್ಷೇತ್ರದಲ್ಲಿ ದೀಪಿಕಾ ಪಡುಕೋಣೆಯನ್ನು ಫರ್ಹಾ ಖಾನ್ ಬಾಲಿವುಡ್‌ಗೆ ಪರಿಚಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.