ಸಿನಿಮಾ: ಕೆಂಪೇಗೌಡ 2
ನಿರ್ಮಾಪಕ:ಎ. ವಿನೋದ್
ನಿರ್ದೇಶನ:ಶಂಕರ್ ಗೌಡ
ತಾರಾಗಣ: ಕೋಮಲ್, ರಕ್ಷಿಕಾ ಶರ್ಮ, ಯೋಗಿ,ಆಲಿ, ನಾಗಬಾಬು, ಸುಚೇಂದ್ರ ಪ್ರಸಾದ್, ದತ್ತಣ್ಣ, ಹುಲಿವಾನ್ ಗಂಗಾಧರಯ್ಯ

ಪ್ರಸಕ್ತ ರಾಜಕೀಯ ವ್ಯವಸ್ಥೆಗೆ ಕನ್ನಡಿ ಹಿಡಿಯುವಂತೆ, ಪ್ರಜಾಪ್ರಭುತ್ವದ ದೌರ್ಬಲ್ಯಗಳನ್ನೂಅಣಕಿಸುವಂತೆ, ಒತ್ತಡಗಳ ನಡುವೆಯೂ ಪೊಲೀಸರು ಕರ್ತವ್ಯ ನಿಷ್ಠೆ ಮೆರೆದರೆ ಸಮಾಜದಲ್ಲಿ ಬದಲಾವಣೆ ತರಬಹುದೆಂಬ ಸಂದೇಶ ಸಾರುತ್ತದೆ‘ಕೆಂಪೇಗೌಡ 2’ ಸಿನಿಮಾ.

ಉದ್ಯೋಗ ಅರಸಿ ವಿದೇಶಕ್ಕೆ ಹೋದ ಎಂಜಿನಿಯರಿಂಗ್ ಪದವೀಧರ ದೀಕ್ಷಿತ್ ವಿದೇಶದಲ್ಲಿನಿಗೂಢವಾಗಿ ಕೊಲೆಯಾಗುತ್ತಾನೆ. ಆತನ ಅಜ್ಜ, ಅಜ್ಜಿ ಇಲ್ಲಿ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಅಲೆದು, ಜೀವ ಬಿಡುತ್ತಾರೆ. ‘ಮಣ್ಣಿನೊಳಗೆ ಹೂತು ಹೋದ ರಹಸ್ಯವನ್ನು ಅಗೆದು ಹೊರತೆಗೆಯುತ್ತೇನೆ’ ಎಂದು ಹೊರಡುವತನಿಖಾಧಿಕಾರಿ ಇನ್‌ಸ್ಪೆಕ್ಟರ್ ಕೆಂಪೇಗೌಡನ ಸುತ್ತ ಹೆಣೆದ ಕಥೆಯನ್ನು ನಿರ್ದೇಶಕ ಶಂಕರ್ ಗೌಡ ನಾಜೂಕಾಗಿ, ಪ್ರೇಕ್ಷಕರಿಗೆಎಲ್ಲೂ ಬೋರೆನಿಸದ ರೀತಿಯಲ್ಲಿ ಹೇಳಲುಪ್ರಯತ್ನಿಸಿದ್ದಾರೆ. ನಟ ಕೋಮಲ್ ಇದ್ದರೆ ಆ ಸಿನಿಮಾದಲ್ಲಿ ಹಾಸ್ಯ ಸನ್ನಿವೇಶಗಳಿಗೇನುಕೊರತೆ ಇಲ್ಲವೆಂದುಕೊಳ್ಳುವ ಪ್ರೇಕ್ಷಕರಿಗೆ ನಿರಾಸೆಯಾಗುವುದು ಮಾತ್ರ ಖರೆ.

ಆದರೆ, ಮೂರು ವರ್ಷಗಳಿಂದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದ ಕೋಮಲ್, ಕಾಮಿಡಿ ಪೊರೆಯನ್ನುಸಂಪೂರ್ಣ ಕಳಚಿಕೊಂಡು ಹೊರಬಂದಿದ್ದಾರೆ. ರಿಮೇಕ್ ಚಿತ್ರ ‘ಕೆಂಪೇಗೌಡ’ ಚಿತ್ರದಲ್ಲಿ ನಟ ಸುದೀಪ್ ಮಿಂಚು ಹರಿಸಿದ ರೀತಿಯಲ್ಲೇ, ಸ್ವಮೇಕ್ ಚಿತ್ರ‘ಕೆಂಪೇಗೌಡ 2’ರಲ್ಲಿ ಕೆಂಪೇಗೌಡನ ಪಾತ್ರದಲ್ಲಿ ಅವರು ಮಿಂಚಿದ್ದಾರೆ. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ದಕ್ಷ ಪೊಲೀಸ್ ಅಧಿಕಾರಿಯಾಗಿ, ಹದಗೆಟ್ಟು ಹೋದ ವ್ಯವಸ್ಥೆ ಸರಿಪಡಿಸುವ ಸುಧಾರಕನಾಗಿ ಅವರ ನಟನೆ ಗಮನ ಸೆಳೆಯುತ್ತದೆ.

ಇದು ಅಪ್ಪಟಆ್ಯಕ್ಷನ್ ಪ್ರಧಾನ ಚಿತ್ರ. ಹೊಡಿ, ಬಡಿ ದೃಶ್ಯಗಳಿಗೆ ಮಿತಿ ಇಲ್ಲ. ಮಚ್ಚು, ಲಾಂಗು, ಗುಂಡಿನ ಮೊರೆತಕ್ಕೂಕೊರತೆ ಇಲ್ಲ.ಸೆಂಟಿಮೆಂಟ್‌ಗೆ ಜಾಗವಿಲ್ಲವೆಂದುಕೊಳ್ಳುವುದೂ ಬೇಡ. ತಾಯಿ– ಮಗನ ಪ್ರೀತಿ ಉಂಟು. ಆದರೆ, ಲವ್‌ಮತ್ತು ಕಾಮಿಡಿಗೆ ಮಾತ್ರ ಸ್ವಲ್ಪವು ಜಾಗವೇ ಇಲ್ಲ. ಈ ನಿರಾಸೆಯನ್ನು ಖಡಕ್ ಸಂಭಾಷಣೆಗಳು ಮತ್ತು ದೃಶ್ಯ ವೈಭವಗಳು ಸರಿದೂಗಿಸುವ ಪ್ರಯತ್ನ ಮಾಡಿವೆ. ಸಮುದ್ರದ ಮರಳ ದಂಡೆಯಲ್ಲಿ ನಡೆಯುವಆಲ್‌ಟೆರೇನ್ ವೆಹಿಕಲ್‌ಗಳ ಚೇಸಿಂಗ್ ದೃಶ್ಯವೂ ಕಣ್ಣು ಮಿಟುಕಿಸದೆ ನೋಡಿಸಿಕೊಳ್ಳುತ್ತದೆ.

ಖಳನಾಯಕದೇಶ್‌ಮುಖ್ ಪಾತ್ರದಲ್ಲಿ ಇಡೀ ಚಿತ್ರ ಆವರಿಸುವಂತೆ ಮಾಜಿ ಕ್ರಿಕೆಟಿಗ ಶ್ರೀಶಾಂತ್‌ನಟಿಸಿದ್ದಾರೆ. ಅವರೇಕೆ ಖಳನಾಯಕನಾಗುತ್ತಾನೆ ಎನ್ನುವುದು ಕುತೂಹಲಕಾರಿ.

ನಟ ಯೋಗಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದರೂ, ಇವಿಎಂಗಳನ್ನು ಹ್ಯಾಕ್ ಮಾಡಿ, ಚುನಾವಣಾ ಅಕ್ರಮ ಎಸಗುವ‘ಹ್ಯಾಕರ್ ಡೇವಿಡ್’ ಪಾತ್ರಕ್ಕೆಚಿತ್ರದಲ್ಲಿ ಮಹತ್ವವಿದೆ. ಕೆಂಪೇಗೌಡನ ಖಡಕ್‌ತನ ನೋಡಿಯೇ ಪ್ರೀತಿಯ ಬಲೆಯಲ್ಲಿ ಬೀಳುತ್ತಾಳೆ ಚಿತ್ರದನಾಯಕಿ ರಕ್ಷಿಕಾ ಶರ್ಮಾ. ಅವರ ಪಾತ್ರ ಕೆಲವು ದೃಶ್ಯಗಳಿಗಷ್ಟೇ ಸೀಮಿತ. ಕಾಮಿಡಿ ಪಾತ್ರದಲ್ಲಿ ಥ್ರಿಲ್ಲರ್ ಮಂಜು ನಟನೆ ತೀರಾ ಸಪ್ಪೆಯಾಗಿದೆ. ಹಾಸ್ಯ ನಟ ಆಲಿಯಾದರೂ ಕಾಮಿಡಿ ಡೈಲಾಗ್‌ಗಳಿಂದ ಪ್ರೇಕ್ಷಕರನ್ನು ನಗಿಸಬಹುದೆಂದರೆ ಅದೂ ಹುಸಿಯಾಗುತ್ತದೆ. ಹಾಸ್ಯ ದೃಶ್ಯದ ಮೂಲಕನಗಿಸಲುನಿರ್ದೇಶಕರು ಹರಸಾಹಸ ಮಾಡಿದಂತೆ ಕಾಣಿಸುತ್ತದೆ.

ಛಾಯಾಗ್ರಹಣವು ಕೆಲವು ದಶ್ಯಗಳಲ್ಲಿ ತೀರಾ ಸೊರಗಿದಂತೆಯೂ ಕಾಣಿಸುತ್ತದೆ. ಅಬ್ಬರದ ಹಿನ್ನೆಲೆ ಸಂಗೀತ ಅಲ್ಲಲ್ಲಿಸಂಭಾಷಣೆಗಳನ್ನು ಅಸ್ಪಷ್ಟಗೊಳಿಸಿದೆ. ಒಂದು ಐಟಂ ಸಾಂಗ್ ನೋಡುವಂತಿದ್ದರೆ, ಮತ್ತೊಂದು ಹಾಡು ಕೇಳಲು ಇಂಪಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.