‘ಸಪ್ತ ಸಾಗರದಾಚೆ ಎಲ್ಲೋ’, ‘ಕೋಟಿ’ ಸಿನಿಮಾಗಳಲ್ಲಿ ಮಿಂಚಿದ್ದ ನಟ ರಮೇಶ್ ಇಂದಿರಾ ಇದೀಗ ‘ಕರಾವಳಿ’ ಪ್ರವೇಶಿಸಿದ್ದು, ಮತ್ತೊಂದು ರಗಡ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಗುರುದತ್ ಗಾಣಿಗ ನಿರ್ದೇಶಿಸುತ್ತಿರುವ ‘ಕರಾವಳಿ’ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸುತ್ತಿದ್ದು, ಸಂಪದ ಇವರಿಗೆ ಜೋಡಿಯಾಗಿದ್ದಾರೆ. ಹಾಸ್ಯನಟನಾಗಿ ಗಮನಸೆಳೆದಿರುವ ನಟ ಮಿತ್ರ ಅವರು ಈ ಸಿನಿಮಾದಲ್ಲಿ ಭಿನ್ನವಾದ ಪಾತ್ರವೊಂದಕ್ಕೆ ಬಣ್ಣಹಚ್ಚಿದ್ದು, ಇದೀಗ ರಮೇಶ್ ಇಂದಿರಾ ಅವರ ಪಾತ್ರವನ್ನು ಚಿತ್ರತಂಡ ಪರಿಚಯಿಸಿದೆ.

‘ಇಡೀ ಕರಾವಳಿಯೇ ಇವರನ್ನು ದೊಡ್ಡವರು ಎಂದು ಗುರುತಿಸುತ್ತದೆ. ಇಡೀ ಕಂಬಳ ಪ್ರಪಂಚ ಇವರನ್ನು ಗೌರವಿಸುತ್ತದೆ ಹಾಗೂ ಇಡೀ ಕರಾವಳಿಯೇ ಇವರೆಂದರೆ ಭಯ ಮತ್ತು ಭಕ್ತಿ ಹೊಂದಿದೆ’ ಎಂದು ಚಿತ್ರತಂಡ ಪಾತ್ರವನ್ನು ವಿವರಿಸಿದೆ. ಈಗಾಗಲೇ ಚಿತ್ರದ ಶೇಕಡ 60ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಕರಾವಳಿ ಭಾಗದಲ್ಲೇ ಶೂಟಿಂಗ್ ನಡೆದಿದೆ. ವಿ.ಕೆ. ಫಿಲ್ಮಂ ಸಹಯೋಗದಲ್ಲಿ ಗುರುದತ್ ಗಾಣಿಗ ತಮ್ಮದೇ ಗಾಣಿಗ ಫಿಲ್ಮ್ಸ್ನಡಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.