ಮಾರ್ಚ್ 25ರಂದು ಬಿಡುಗಡೆಗೆ ಸಿದ್ಧವಾಗಿರುವ 'ಆರ್ಆರ್ಆರ್' ಸಿನಿಮಾದ ಚಿತ್ರೀಕರಣವು ರಷ್ಯಾ ದೇಶ ಮಾಡಿರುವ ಉಕ್ರೇನ್ನಲ್ಲಿ ನಡೆದಿದೆ.

ರಾಜಮೌಳಿ ನಿರ್ದೇಶನದ ’ಆರ್ಆರ್ಆರ್’ ಚಿತ್ರದಕೆಲವು ಸನ್ನಿವೇಶಗಳು ಹಾಗೂ ಹಾಡೊಂದನ್ನುಉಕ್ರೇನ್ನಲ್ಲಿ ಚಿತ್ರೀಕರಿಸಲಾಗಿದೆ ಎಂದು ಚಿತ್ರತಂಡ ಹೇಳಿದೆ.ಕೋವಿಡ್ ಸಂದರ್ಭದಲ್ಲಿಯೂ ಉಕ್ರೇನ್ ದೇಶ ಪ್ರವಾಸೋದ್ಯಮಕ್ಕೆ ಅವಕಾಶ ನೀಡಿತ್ತು. ಈ ಸಂದರ್ಭದಲ್ಲಿ ಭಾರತೀಯ ಹಲವು ಸಿನಿಮಾಗಳು ಇಲ್ಲಿ ಚಿತ್ರೀಕರಣಗೊಂಡಿದ್ದವು.

2021ರ ಆಗಸ್ಟ್ನಲ್ಲಿ ’ಆರ್ಆರ್ಆರ್’ ಚಿತ್ರದ’ನಾಟಿ...ನಾಟಿ’ ಹಾಡನ್ನು ಇಲ್ಲಿ ಶೂಟಿಂಗ್ ಮಾಡಲಾಗಿದೆ. ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ಖ್ಯಾತ ನಟರಾದ ಜ್ಯೂ.ಎನ್ಟಿಆರ್, ರಾಮ್ಚರಣ್, ಅಜಯ್ ದೇವಗನ್ ಆಲಿಯಾ ಭಟ್, ಶ್ರೇಯಾ ಶರಣ್ ಕೂಡ ಉಕ್ರೇನ್ಗೆ ಹೋಗಿದ್ದರು.

ಉಕ್ರೇನ್ನ ಕೈವ್ನಲ್ಲಿ ರಾಮ್ ಚರಣ್ ಎರಡು ವಾರ ಉಳಿದುಕೊಂಡಿದ್ದರು. ಇನ್ನು ‘ಆರ್ಆರ್ಆರ್’ ಚಿತ್ರತಂಡ ಉಕ್ರೇನ್ ಪ್ರವಾಸದ ಹಲವು ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿತ್ತು.

ಆರ್ಆರ್ಆರ್ ಸಿನಿಮಾ ಮಾತ್ರವಲ್ಲದೇ ಈ ಹಿಂದೆ ಹಲವು ಭಾರತೀಯ ಸಿನಿಮಾಗಳು ಕೂಡ ಉಕ್ರೇನ್ನಲ್ಲಿ ಚಿತ್ರೀಕರಣಗೊಂಡಿವೆ. ಎ.ಆರ್ ರೆಹಮಾನ್ ಸಂಗೀತ ನಿರ್ದೇಶನದ 99 ಸಾಂಗ್ಸ್, ರಜಿನಿಕಾಂತ್, ಅಕ್ಷಯ್ ಕುಮಾರ್ ನಟನೆಯ ‘2.0’, ಕಾರ್ತಿ ಅಭಿನಯದ ’ದೇವ್’ ತಮಿಳು ಸಿನಿಮಾಗಳನ್ನುಇಲ್ಲಿ ಚಿತ್ರೀಕರಿಸಲಾಗಿತ್ತು. ತೆಲುಗಿನ ವಿನ್ನರ್ ಸಿನಿಮಾವನ್ನು ಸಹ ಇಲ್ಲಿ ಶೂಟಿಂಗ್ಮಾಡಲಾಗಿತ್ತು.

ವಿಶ್ವಸಂಸ್ಥೆ, ಅಮೆರಿಕ, ಇಂಗ್ಲೆಂಡ್, ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಉಕ್ರೇನ್ ಮೇಲಿನ ದಾಳಿ ನಿಲ್ಲಿಸಿ ಎಂದು ರಷ್ಯಾಗೆ ಮನವಿ ಮಾಡಿವೆ. ಆದಾಗ್ಯೂ ರಷ್ಯಾ ದಾಳಿ ಮುಂದುವರೆಸಿದೆ. ದಾಳಿಯಲ್ಲಿ ಉಕ್ರೇನ್ನ 8ಜನರು ಮೃತಪಟ್ಟಿದ್ದಾರೆ. ಉಭಯ ದೇಶಗಳ ನಡುವೆ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.