ಚೆನ್ನೈ: ಸಾಲ ಮರುಪಾವತಿಗೆ ವಿಫಲವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲಿವುಡ್ನ ತಾರಾ ದಂಪತಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಒಂದು ವರ್ಷದ ಜೈಲು ಶಿಕ್ಷೆ ಮತ್ತು ₹ 5 ಕೋಟಿ ದಂಡ ವಿಧಿಸಿದೆ.

ಶರತ್ಕುಮಾರ್ ಮತ್ತು ಅವರ ಪತ್ನಿ ರಾಧಿಕಾ ಶರತ್ ಕುಮಾರ್ ಶಿಕ್ಷೆಗೆ ಒಳಗಾದವರು.

ಪ್ರಕರಣದ ವಿವರ: 2015ರಲ್ಲಿ ಈ ದಂಪತಿ ಇಲ್ಲಿನ ರೇಡಿಯನ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನಿಂದ ಸಾಲ ಪಡೆದಿದ್ದರು. ಆ ಹಣದಿಂದ ತಮ್ಮದೇ ನಿರ್ಮಾಣ ಸಂಸ್ಥೆಯ (ಮ್ಯಾಜಿಕ್ ಫ್ರೇಮ್ಸ್ ) ಮೂಲಕ ‘ಇದು ಎನ್ನ ಮಾಯಂ’ ಹೆಸರಿನ ಸಿನಿಮಾ ನಿರ್ಮಿಸಿದ್ದರು. ಶರತ್ ಅವರು ಇದೇ ಸಂಸ್ಥೆಯಿಂದ ₹ 50 ಲಕ್ಷ ಕೈಸಾಲವನ್ನೂ ಪಡೆದಿದ್ದರು. ಸಾಲ ಮರುಪಾವತಿ ಸಂಬಂಧಿಸಿದಂತೆ ನೀಡಲಾದ ಚೆಕ್ ಬೌನ್ಸ್ ಆಗಿತ್ತು. ಪ್ರಕರಣ ಸಂಬಂಧಿಸಿ ರೇಡಿಯನ್ಸ್ ಗ್ರೂಪ್ ಕೋರ್ಟ್ ಮೆಟ್ಟಿಲೇರಿತ್ತು. ಶರತ್ ವಿರುದ್ಧ 7 ಮತ್ತು ರಾಧಿಕಾ ವಿರುದ್ಧ 2 ಪ್ರಕರಣಗಳು ದಾಖಲಾಗಿದ್ದವು. ಶಾಸಕ ಮತ್ತು ಸಂಸದರಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಶರತ್ ಕುಮಾರ್, ರಾಧಿಕಾ ಮತ್ತು ಲಿಸ್ಟಿನ್ ಸ್ಟೀಫನ್ ಅವರು ಮ್ಯಾಜಿಕ್ ಫ್ರೇಮ್ಸ್ನ ಪಾಲುದಾರರಾಗಿದ್ದಾರೆ.

ಈ ಪ್ರಕರಣವು ಸೈದಾಪೇಟ್ನ ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಗಾಗಿತ್ತು. ಈ ವೇಳೆ ತಾರಾದಂಪತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಮಧ್ಯೆ ಪ್ರಕರಣವುಶಾಸಕ ಮತ್ತು ಸಂಸದರಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲ್ಪಟ್ಟಿತ್ತು.

ಬುಧವಾರ ಈ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಎನ್.ಅಲಿಸಿಯಾ ಅವರು ಈ ದಂಪತಿಗಳಿಗೆ ಶಿಕ್ಷೆ ಪ್ರಕಟಿಸಿದರು. ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸಿಕೊಳ್ಳುತ್ತೇವೆ. ಅಲ್ಲಿಯವರೆಗೆ ಶಿಕ್ಷೆಯನ್ನು ತಡೆಹಿಡಿಯಬೇಕು ಎಂದು ಶರತ್ ಅವರು ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ಮಾನ್ಯ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.