ತೆಲುಗು ನಿರ್ದೇಶಕ ಹಾಗೂ ನಟರ ವಿರುದ್ಧ ಕಾಸ್ಟಿಂಗ್ ಕೌಚ್ ಆರೋಪ ಮಾಡಿ ಅಲ್ಲಿನ ಫಿಲ್ಮ್ ಚೇಂಬರ್ ಮುಂದೆ ಆರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದ ನಟಿ ಶ್ರೀರೆಡ್ಡಿಗೆ ಸದ್ಯ ಸುಗ್ಗಿಕಾಲವಂತೆ.

ಹೌದು, ರಾಘವ ಲಾರೆನ್ಸ್ ನಿರ್ದೇಶನದ ಇನ್ನೂ ಹೆಸರಿಡದ ತಮಿಳು ಚಿತ್ರವೊಂದರ ಪ್ರಮುಖ ಪಾತ್ರಕ್ಕೆ ಶ್ರೀರೆಡ್ಡಿ ಆಯ್ಕೆಯಾಗಿದ್ದಾರೆ. ಹೀಗೆಂದು ಸ್ವತಃ ಶ್ರೀರೆಡ್ಡಿಯೇ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ಈಚೆಗೆ ನಾನು ಲಾರೆನ್ಸ್ ಮನೆಗೆ ಹೋಗಿದ್ದೆ. ಅವರು ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅವರ ನಿರ್ದೇಶನದ ಹೊಸ ಚಿತ್ರವೊಂದಕ್ಕೆ ಆಡಿಷನ್ ಕೊಟ್ಟಿದ್ದೇನೆ. ಆ ಚಿತ್ರಕ್ಕೆ ನನ್ನನ್ನು ಆಯ್ಕೆ ಮಾಡುವುದಾಗಿ ಪ್ರಾಮಿಸ್ ಸಹ ಮಾಡಿದ್ದಾರೆ. ಅದಕ್ಕಾಗಿ ಮುಂಗಡವಾಗಿ ಹಣವೂ ನೀಡಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.

ಮುಂಗಡವಾಗಿ ಪಡೆದ ಹಣವನ್ನು ಶ್ರೀರೆಡ್ಡಿ ಅವರು ಸೈಕ್ಲೋನ್ನಿಂದ ಬಳಲುತ್ತಿರುವ ಶ್ರೀಕಾಕುಳಂನ ಜನರಿಗೆ ದಾನವಾಗಿ ನೀಡಲಿದ್ದಾರಂತೆ. ಈ ಬಗ್ಗೆಯೂ ಅವರು ಬರೆದುಕೊಂಡಿದ್ದಾರೆ. ತೆಲುಗಿನ ನಿರ್ದೇಶಕ ಹಾಗೂ ನಟರ ವಿರುದ್ಧ ಆರೋಪಿಸಿದ್ದ ಬಳಿಕ ಶ್ರೀರೆಡ್ಡಿ ಅವರಿಗೆ ಅವಕಾಶಗಳು ಸಿಕ್ಕಿರಲಿಲ್ಲ. ಆರೋಪದ ಬಳಿಕ ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕೆ ಅವಕಾಶ ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.