ನಿರ್ದೇಶಕಿ ಕವಿತಾ ಲಂಕೇಶ್ ಅವರು ಮಕ್ಕಳಿಗಾಗಿ ಸಿದ್ಧಪಡಿಸಿರುವ ಸಿನಿಮಾ ‘ಸಮ್ಮರ್ ಹಾಲಿಡೇಸ್’ ಆಗಸ್ಟ್ 3ರಂದು ತೆರೆಗೆ ಬರಲಿದೆ. ಅಂದು ತೆರೆ ಕಾಣುತ್ತಿರುವುದು ಈ ಸಿನಿಮಾದ ಇಂಗ್ಲಿಷ್ ಅವತಾರ ಮಾತ್ರ. ಇಂಗ್ಲಿಷ್ ಭಾಷೆಯಲ್ಲಿನ ಸಿನಿಮಾವನ್ನು ‘ಪಿವಿಆರ್ ಸಿನಿಮಾಸ್’ ಕಂಪನಿ ಮೂಲಕ ತೆರೆಗೆ ತರಲಾಗುತ್ತಿದೆ.

ಈ ಕುರಿತು ಮಾಹಿತಿ ನೀಡಲು ಕವಿತಾ ಅವರು ಸುದ್ದಿಗಾರರನ್ನು ಆಹ್ವಾನಿಸಿದ್ದರು. ಹಾಗೆಯೇ, ಚಿತ್ರದ ಹಾಡುಗಳ ಸಿ.ಡಿ. ಕೂಡ ಬಿಡುಗಡೆ ಮಾಡಿದರು. ಅವರ ಜೊತೆ ಇದ್ದ ಚಿತ್ರತಂಡದ ಇತರ ಸದಸ್ಯರು, ‘ಕವಿತಾ ಅವರಲ್ಲಿನ ವೃತ್ತಿಪರತೆ ಬಹಳ ಮೇಲ್ಮಟ್ಟದ್ದು. ಚಿತ್ರತಂಡದ ಸದಸ್ಯರಿಗೆ ಸೃಜನಶೀಲ ಸ್ವಾತಂತ್ರ್ಯ ಕೊಡುತ್ತಾರೆ’ ಎಂದು ಖುಷಿಯಿಂದ ಹೇಳಿಕೊಂಡರು.

ಇಂಗ್ಲಿಷ್ ಚಿತ್ರದ ಬಿಡುಗಡೆ ದೇಶದ ಎಲ್ಲೆಡೆ ಆಗಲಿದೆ. ಈ ಮಳೆಗಾಲದಲ್ಲಿ ಸಿನಿಮಾ ಮಂದಿರಕ್ಕೆ ಬಂದು, ಬೆಚ್ಚಗೆ ಕುಳಿತು ಒಂದು ಒಳ್ಳೆಯ ಸಿನಿಮಾ ನೋಡಬಹುದು ಎಂದರು ಕವಿತಾ.

‘ಕನ್ನಡದಲ್ಲಿ ಮಾತ್ರ ಮಕ್ಕಳ ಚಿತ್ರ ಮಾಡಿದರೆ, ಅದು ಕರ್ನಾಟಕಕ್ಕೆ ಮಾತ್ರ ಸೀಮಿತ ಆಗಿಬಿಡುತ್ತದೆ. ಆದರೆ, ನಮ್ಮ ಚಿತ್ರ ದೊಡ್ಡ ವೀಕ್ಷಕ ಸಮೂಹವನ್ನು ತಲುಪಬೇಕು. ನಮ್ಮಲ್ಲಿ ಕೂಡ ಇಂದಿನ ಮಕ್ಕಳು ಇಂಗ್ಲಿಷ್ ಸಿನಿಮಾ ನೋಡಿ, ಆನಂದಿಸಬಲ್ಲರು. ಹಾಗೆಯೇ, ಅವರು ಹಾಲಿವುಡ್ನ ಮಕ್ಕಳ ಸಿನಿಮಾ ಮಾತ್ರ ನೋಡುವಂತೆ ಆಗಬಾರದು. ನಮ್ಮದೇ ನೇಟಿವಿಟಿ ಇರುವ ಸಿನಿಮಾವನ್ನು ಇಂಗ್ಲಿಷ್ನಲ್ಲಿ ನೋಡುವ ಅವಕಾಶ ಅವರಿಗೆ ಸಿಗಬೇಕು’ ಎಂದೂ ಅವರು ಹೇಳಿಕೊಂಡರು.

ಕನ್ನಡದಲ್ಲಿ ಸಿದ್ಧಪಡಿಸಿರುವ ‘ಸಮ್ಮರ್ ಹಾಲಿಡೇಸ್’ ಚಿತ್ರ ಕೂಡ ಮುಂದಿನ ದಿನಗಳಲ್ಲಿ ತೆರೆಗೆ ಬರುತ್ತದೆ. ಈ ವಿಚಾರವಾಗಿ ಚಿತ್ರಮಂದಿರಗಳ ಜೊತೆ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.