ತೆಲುಗು ನಟ ನಾನಿ ನಾಯಕನಾಗಿ ನಟಿಸುತ್ತಿರುವ, ಎಸ್‌ಎಲ್‌ವಿ ಬ್ಯಾನರ್‌ನಡಿ ಸುಧಾಕರ್ ಚೆರುಕುರಿ ನಿರ್ಮಾಣದ ಪ್ಯಾನ್ ಇಂಡಿಯಾ ಸಿನಿಮಾ ‘ದಸರಾ’ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ, ಚಿತ್ರದ ಶೀರ್ಷಿಕೆ ಕುರಿತು ನಟಿ ಶರ್ಮಿಳಾ ಮಾಂಡ್ರೆ ಆಕ್ಷೇಪವೆತ್ತಿದ್ದಾರೆ.

ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಶರ್ಮಿಳಾ ಅವರು ಪತ್ರ ಬರೆದಿದ್ದಾರೆ. ‘ಶರ್ಮಿಳಾ ಮಾಂಡ್ರೆ ಪ್ರೊಡಕ್ಷನ್ಸ್‌ನಡಿ ನಿರ್ಮಾಣಗೊಳ್ಳುತ್ತಿರುವ, ಸತೀಶ್ ನೀನಾಸಂ ನಾಯಕರಾಗಿ ನಟಿಸುತ್ತಿರುವ ನನ್ನ ಮೊದಲ ಸಿನಿಮಾದ ಶೀರ್ಷಿಕೆಯನ್ನು(ದಸರಾ) 2020ರ ಸೆ.30ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದೆ. ನಮ್ಮ ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಎಸ್‌ಎಲ್‌ವಿ ಬ್ಯಾನರ್‌ನಡಿ ತೆಲುಗು ನಿರ್ಮಾಪಕರಾದ ಸುಧಾಕರ್ ಚೆರುಕುರಿ ಅವರು ‘ದಸರಾ’ ಎಂಬ ಶೀರ್ಷಿಕೆಯಲ್ಲೇ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಸಿನಿಮಾದ ಟೀಸರ್ ಹಾಗೂ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಇದರಿಂದ ನಮಗೆ ಸಮಸ್ಯೆಯಾಗಿದೆ. ಈಗಾಗಲೇ ನಾವು ಹಲವು ವೇದಿಕೆಗಳಲ್ಲಿ ನಮ್ಮ ಸಿನಿಮಾ ಶೀರ್ಷಿಕೆಯನ್ನು ಹಂಚಿಕೊಂಡಿದ್ದು, ತೆಲುಗು ನಿರ್ಮಾಪಕರ ಈ ನಡೆಯಿಂದ ನಮಗೆ ತೊಂದರೆಯಾಗಿದೆ. ಇದರಿಂದ ನಮ್ಮ ಚಿತ್ರದ ಗಳಿಕೆಗೂ ಸಮಸ್ಯೆಯಾಗಲಿದ್ದು, ಕನಿಷ್ಠ ಕನ್ನಡ ಅವತರಣಿಕೆಯಲ್ಲಿ ‘ದಸರಾ’ ಶೀರ್ಷಿಕೆ ಬಳಸದಂತೆ ತಡೆಯಬೇಕು’ ಎಂದು ಶರ್ಮಿಳಾ ಮಾಂಡ್ರೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

2019ರಲ್ಲಿ ‘ದಸರಾ’ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು, ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಚಿತ್ರೀಕರಣ ಕಳೆದ ವರ್ಷಾಂತ್ಯಕ್ಕೆ ಪೂರ್ಣಗೊಂಡಿತ್ತು. ಅರವಿಂದ್ ಶಾಸ್ತ್ರಿ ನಿರ್ದೇಶನದ ಈ ಸಿನಿಮಾದಲ್ಲಿಸತೀಶ್ ಅವರು ಪತ್ತೆದಾರನ ಪಾತ್ರ ನಿಭಾಯಿಸುತ್ತಿದ್ದಾರೆ. ಶರ್ಮಿಳಾ ಅವರು ಪತ್ತೆದಾರಿ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.