ಬೆಂಗಳೂರು: ಬಾಲಿವುಡ್ ನಟಿ ಕಂಗನಾ ನಟಿಸಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಕುರಿತಾದ ತಲೈವಿ ಸಿನಿಮಾ ನೆಟ್ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿದೆ.

ಈ ಕುರಿತು ಕೊ ಮಾಡಿರುವ ನಟಿ ಕಂಗನಾ , ಇಂದಿನಿಂದ ನೆಟ್ಫ್ಲಿಕ್ಸ್ ನಲ್ಲಿ ಹಿಂದಿ ಭಾಷೆಯ 'ತಲೈವಿ' ಸಿನಿಮಾ ಪ್ರಸಾರವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಸೆ.10ರಂದು ‘ತಲೈವಿ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತ್ತು. ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಈ ಸಿನಿಮಾ ತೆರೆಕಂಡಿತ್ತು.

ಈ ಸಿನಿಮಾವನ್ನು ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಒಟಿಟಿ ವೇದಿಕೆಗಳು ಖರೀದಿ ಮಾಡಿವೆ. ಹಿಂದಿ ಭಾಷೆ ಸಿನಿಮಾವನ್ನು ನೆಟ್ಫ್ಲಿಕ್ಸ್, ತಮಿಳು ಭಾಷೆ ಸಿನಿಮಾವನ್ನು ಅಮೆಜಾನ್ ಖರೀದಿಸಿದೆ. ತಮಿಳು ಮತ್ತು ತೆಲುಗು ಭಾಷೆಯ ತಲೈವಿ ಸಿನಿಮಾ ಅಕ್ಟೋಬರ್ 8ರಂದು ಪ್ರಸಾರವಾಗಲಿದೆ.

ಅರವಿಂದ್ ಸ್ವಾಮಿ, ನಾಸಿರ್, ಭಾಗ್ಯಶ್ರೀ, ಸಮುದ್ರಖಣಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ವಿಜಯೇಂದ್ರ ಪ್ರಸಾದ್ ಚಿತ್ರಕಥೆ ಬರೆದಿದ್ದು,ನಿರ್ದೇಶಕ ಎ.ಎಲ್. ವಿಜಯ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.