ದಗ್ಗುಬಾಟಿ ವೆಂಕಟೇಶ್ ಅಥವಾ ವಿಕ್ಟರಿ ವೆಂಕಟೇಶ್ ತೆಲುಗಿನ ಸ್ಟಾರ್ ನಟರಲ್ಲಿ ಒಬ್ಬರು. ವೆಂಕಿ ಮಾಮಾ ಎಂದೇ ಹೆಂಗಳೆಯರಿಂದ ಕರೆಸಿಕೊಳ್ಳುವ ಈ ಸುಂದರ ನಟ ತನ್ನ 58ನೇ ವಯಸ್ಸಿನಲ್ಲೂ 20ರ ಯುವಕನಂತೆ ಮಿಂಚುತ್ತಿರುವುದು ಸುಳ್ಳಲ್ಲ. ಫ್ಯಾಮಿಲಿ ಸೆಂಟಿಮೆಂಟಿ ಚಿತ್ರಗಳ ಮೂಲಕ ತೆಲುಗಿನ ಮಹಿಳಾ ಸಿನಿ ಪ್ರೇಕ್ಷಕರ ಮನ ಗೆದಿದ್ದ ವೆಂಕಿ ‘ಪ್ರೇಮ್ ನಗರ್’ ಸಿನಿಮಾದ ಮೂಲಕ ಬಾಲನಟನಾಗಿ ಸಿನಿರಂಗಕ್ಕೆ ಪ್ರವೇಶ ಪಡೆದವರು.
ಕಲಿಯುಗ ಪಾಂಡವುಲು ಸಿನಿಮಾದಲ್ಲಿ ನಟಿಸುವ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಭಡ್ತಿ ಪಡೆದರು. ಅದರೊಂದಿಗೆ ಚೊಚ್ಚಲ ಸಿನಿಮಾಕ್ಕೆ ನಂದಿ ಅವಾರ್ಡ್ ಕೂಡ ಪಡೆದುಕೊಂಡರು.

ತ್ರಿಮೂರ್ತುಲು, ಶ್ರೀನಿವಾಸ ಕಲ್ಯಾಣಂ, ಬ್ರಹ್ಮ ಪುತ್ರುಡು, ಪ್ರೇಮ, ಕೂಲಿ ನಂ.1, ಸುಂದರಕಾಂಡ, ಪವಿತ್ರಬಂಧಂ, ದ್ರಶ್ಯಂ, ಗುರು, ಎಫ್2 ಇನ್ನೂ ಅನೇಕ ಸಿನಿಮಾಗಳಲ್ಲಿ ನಟಿಸಿರುವ ವೆಂಕಟೇಶ್ ವಿಭಿನ್ನ ಪಾತ್ರಗಳ ಮೂಲಕ ಮನ ಮೆಚ್ಚುಗೆ ಗಳಿಸಿದವರು.

ಸದ್ಯಕ್ಕೆ ವಿಕ್ಟರಿ ವೆಂಕಟೇಶ್ ತಮ್ಮ ಮುಂದಿನ ಚಿತ್ರ ‘ವೆಂಕಿ ಮಾಮಾ’ ಮೇಲೆ ಸಂಪೂರ್ಣ ಗಮನ ಹರಿಸಿದ್ದಾರೆ. ಈ ಚಿತ್ರವು ಡಿಸೆಂಬರ್ ಅಥವಾ ಜನವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಆ ಸಿನಿಮಾದ ನಂತರ ಧನುಷ್ ಅಭಿಯನದ ‘ಅಸುರನ್’ ಸಿನಿಮಾದ ತೆಲುಗು ರಿಮೇಕ್ನಲ್ಲೂ ವೆಂಕಿ ನಟಿಸಲಿದ್ದಾರೆ. ಈ ಸಿನಿಮಾವು ವೆಂಕಟೇಶ್ ಅವರ 74ನೇ ಸಿನಿಮಾವಾಗಲಿದೆ.

ಈ ಎಲ್ಲದರ ನಡುವೆ ವಿಕ್ಟರಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವುದು ಅವರ 75ನೇ ಚಿತ್ರವನ್ನು ಯಾರು ನಿರ್ದೇಶನ ಮಾಡಲಿದ್ದಾರೆ ಎಂಬುದನ್ನು.

ಸಾಮಾನ್ಯವಾಗಿ ವೆಂಕಟೇಶ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವುದಿಲ್ಲ. ಒಂದು ಸಿನಿಮಾದ ನಂತರ ಸಾಕಷ್ಟು ಅಂತರ ಇರಿಸಿಕೊಂಡು ಇನ್ನೊಂದು ಸಿನಿಮಾ ಮಾಡುತ್ತಾರೆ. ಆದರೆ ಇತ್ತೀಚೆಗೆ ಅವರು ಶೀಘ್ರವಾಗಿ ಒಂದರ ಹಿಂದೆ ಒಂದು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇದರೊಂದಿಗೆ ತರುಣ್ ಭಾಸ್ಕರ್ ವಿಕ್ಟರಿ ವೆಂಕಟೇಶ್ಗಾಗಿ ಸ್ಕ್ರಿಪ್ಟ್ ಒಂದನ್ನು ರಚಿಸಿದ್ದು ಅದು ಅಂತಿಮ ಹಂತದಲ್ಲಿದೆ. ಈ ಚಿತ್ರವು ಕುದುರೆ ರೇಸ್ ಹಿನ್ನೆಲೆಯುಳ್ಳ ಕತೆಯನ್ನು ಹೊಂದಿದೆ. ಇದು ವೆಂಕಿ ಅವರ 75ನೇ ಚಿತ್ರವಾಗಲಿದೆ ಎಂಬ ಸುದ್ದಿ ಹರಡಿತ್ತು. ಆದರೆ ಮೂಲಗಳ ಪ್ರಕಾರ ವೆಂಕಟೇಶ್ ಸಹೋದರ ಸುರೇಶ್ ಬಾಬು ವಿಕ್ಟರಿ ಅವರ 75ನೇ ಚಿತ್ರಕ್ಕೆ ಬೇರೊಂದು ಯೋಜನೆಯನ್ನು ರೂಪಿಸುತ್ತಿದ್ದಾರೆ ಎಂಬುದು ಸದ್ಯದ ಸುದ್ದಿ.

ವೆಂಕಟೇಶ್ ಹಾಗೂ ತ್ರಿವಿಕ್ರಮ ಅವರ ಕಾಂಬಿನೇಷನ್ನಲ್ಲಿ ಚಿತ್ರವೊಂದು ಬರಲಿದೆ ಎಂಬುದು ಬಹಳ ಹಿಂದೆಯೇ ಘೋಷಿಸಲಾಗಿತ್ತು. ಅದೇ ಚಿತ್ರಕ್ಕೆ ಮತ್ತೆ ಜೀವ ನೀಡಲು ಸುರೇಶ್ ಬಾಬು ಪ್ರಯತ್ನಿಸುತ್ತಿದ್ದಾರೆ. ‘ಅಲಾ ವೈಕುಂಟಪುರಮುಲೊ‘ ಸಿನಿಮಾ ಜನವರಿಯಲ್ಲಿ ಬಿಡುಗಡೆಯಾಗುತ್ತಿದ್ದು ಆ ಬಳಿಕ ತ್ರಿವಿಕ್ರಮ್ ಬಿಡುವಾಗಲಿದ್ದಾರೆ. ಹಾಗಾಗಿ ಈ ಸ್ಟಾರ್ ನಟ, ನಿರ್ದೇಶಕರ ಸಂಯೋಜನೆಯ ಸಿನಿಮಾ ಸೆಟ್ಟೆರುವ ಸಾಧ್ಯತೆ ಇದೆ. ‘ನುವ್ವು ನಾಕು ನಚ್ಚಾವು’, ‘ಮಲ್ಲಿಸ್ವರಿ’ಯಂತಹ ಹಿಟ್ ಸಿನಿಮಾಗಳನ್ನು ನೀಡಿದ್ದ ಈ ಇಬ್ಬರ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಹಾಗಾಗಿ ವೆಂಕಿಯ ಮುಂದಿನ ಚಿತ್ರ ಯಾರ ಜೊತೆ ಎಂಬುದು ಸದ್ಯಕ್ಕೆ ಕುತೂಹಲಕ್ಕೆ ಕಾರಣವಾಗಿದೆ. ಯಂಗ್ ಟ್ಯಾಲೆಂಟೆಡ್ ತರುಣ್ ಭಾಸ್ಕರ್ ಅಥವಾ ಅನುಭವಿ ನಿರ್ದೇಶಕ ತಿವಿಕ್ರಮ ಈ ಇಬ್ಬರಲ್ಲಿ ಯಾರು ವೆಂಕಿ ಮಾಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ತೆಲುಗಿನ ಅಸುರನಾಗಿ ವಿಕ್ಟರಿ ವೆಂಕಟೇಶ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.