ತುಂಟುಗಣ್ಣ ಹುಡುಗಿ ಪರಿಣೀತಿ ಚೋಪ್ರಾ ಕನಸೊಂದು ನನಸಾದ ಖುಷಿಯಲ್ಲಿದ್ದಾರೆ.
ಮುಂಬೈನ ಬಾಂದ್ರಾದಲ್ಲಿ ಸಮುದ್ರ ದಡದಲ್ಲಿ ಅಪಾರ್ಟ್‌ಮೆಂಟ್ ಖರೀದಿಸುವುದರೊಂದಿಗೆ ತಮ್ಮ ಕನಸಿನ ಮನೆಯನ್ನು ಹೊಂದಿದ ಸಂತೋಷ ಅವರದಾಗಿದೆ.

‘ಕೊನೆಗೂ ನನ್ನಿಷ್ಟದ ಮನೆ ಹುಡುಕಿ ಖರೀದಿಸಿದ್ದೇನೆ. ಮುಂಬೈನಲ್ಲಿ ಒಂದು ಮನೆ ಮಾಡಬೇಕು ಎಂಬುದು ನನ್ನ ಅತ್ಯಂತ ಉತ್ಕಟ ಆಸೆಗಳಲ್ಲಿ ಒಂದಾಗಿತ್ತು. ದೇವರ ಆಶೀರ್ವಾದದಿಂದ ನನ್ನ ಆಸೆ ಈಡೇರಿದೆ’ ಎಂದು ಅವರು ಹೇಳಿದ್ದಾರೆ.

ಮುಂಬೈನಲ್ಲಿ ಐಎಎನ್‌ಎಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ತಮ್ಮ ಮನೆಯಿಂದ ಕಾಣುವ ಸಾಗರನೋಟದ ಸೌಂದರ್ಯದ ಬಗ್ಗೆ ತುಂಬಾ ಖುಷಿಯನ್ನು ಹಂಚಿಕೊಂಡಿದ್ದಾರೆ.

‘ಈ ಮನೆಯಿಂದ ಸಮುದ್ರ ಅದ್ಭುತವಾಗಿ ಕಾಣುತ್ತದೆ. ಅದರಲ್ಲಿ ಉಳಿದುಕೊಳ್ಳಲು ಸಂತೋಷವಾಗುತ್ತದೆ’ ಎಂದಿದ್ದಾರೆ. ಇನ್ನೋರ್ವ ನಟಿ ಪ್ರೀತಿ ಜಿಂಟಾ ಮನೆ ಕೂಡ ಇದೇ ವಸತಿ ಸಂಕೀರ್ಣದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.