ಬೆಂಗಳೂರು: ಹಾಸ್ಯನಟ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಮೇಲೆ ತೃತೀಯಲಿಂಗಿಗಳು ಮಂಗಳವಾರ ರಾತ್ರಿ ದಾಳಿ ನಡೆಸಿದ್ದಾರೆ. ಇದರಿಂದ ರಕ್ಷಕ್ ಅವರ ಕೈ ಹಾಗೂ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರ ಬೈಕ್ಗೂ ಹಾನಿಯಾಗಿದೆ.

‘ಜಿಮ್ನಲ್ಲಿ ತರಬೇತಿ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದೆ. ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನ ದಟ್ಟಣೆ ಇದ್ದುದರಿಂದ ಸೇತುವೆಯ ಕೆಳಭಾಗದ ಸಿಗ್ನಲ್ನಲ್ಲಿ ಗಾಡಿ ನಿಲ್ಲಿಸಿ ಬಳಿಕ ಎಡಕ್ಕೆ ತಿರುವು ಪಡೆದು 50 ಕಿ.ಮೀ.ವೇಗದಲ್ಲಿ ಹೊರಟಿದ್ದೆ. ಸ್ವಲ್ಪ ದೂರ ಹೋದ ಕೂಡಲೇ ತೃತೀಯಲಿಂಗಿಗಳು ಅಡ್ಡಗಟ್ಟಿದರು. ಹೀಗಾಗಿ ವೇಗ ತಗ್ಗಿಸಿದೆ. ನನ್ನ ಬಳಿ ಬಂದ ಅವರನ್ನು ಏನು ಎಂದು ವಿಚಾರಿಸಿದೆ. ಅಷ್ಟಕ್ಕೆ ಬೆನ್ನ ಹಿಂದೆ ಹಾಕಿದ್ದ ಜಿಮ್ ಬ್ಯಾಗ್ ಎಳೆದರು. ಅವರ ವರ್ತನೆ ಕಂಡು ಗಾಬರಿಯಾಯಿತು. ತಪ್ಪಿಸಿಕೊಳ್ಳಲು ಮುಂದಾದಾಗ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ಗೆ ಗುದ್ದಿದೆ’ ಎಂದು ರಕ್ಷಕ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.