ಅಂಗವಿಕಲರಿಗೆ ಅನುಕಂಪ ಬೇಡ, ಅವಕಾಶ ಬೇಕು- ಈ ಘೋಷವಾಕ್ಯಗಳನ್ನು ಆಗಾಗ ಕೇಳುತ್ತಿರುತ್ತೇವೆ. ಈ ಮಾತನ್ನು ನಿಜ ಮಾಡುವಂಥ ಪ್ರಸಂಗವೊಂದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಡೆಸಿಕೊಡುವ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ನಡೆದಿದೆ.

ತನ್ನೆರಡೂ ಕಾಲುಗಳಲ್ಲಿ ಶಕ್ತಿ ಕಳೆದುಕೊಂಡಿರುವ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಬೆಳಗೂರಿನ ರಂಗನಾಥ್ ಈ ಕಾರ್ಯಕ್ರಮದಲ್ಲಿ ಸಾಕಷ್ಟು ಹಣ ಗೆದ್ದರು. ಮಾತ್ರವಲ್ಲದೆ ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರ ಮನಸೂರೆಗೊಂಡರು.

ಸಂಕಷ್ಟದ ಮಧ್ಯೆಯೂ ಅತ್ಯಂತ ಆತ್ಮವಿಶ್ವಾಸ ತೋರುವ ರಂಗನಾಥ್ ತಮ್ಮ ಜ್ಞಾನದಿಂದಲೇ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಯಶಸ್ಸು ಸಾಧಿಸಿದ್ದಾರೆ.

ರಂಗನಾಥ್ ತಮ್ಮ ಐದನೇ ವಯಸ್ಸಿಗೇ ಕಾಲಿನ ಶಕ್ತಿಯನ್ನು ಕಳೆದುಕೊಂಡರು. ಅದೂ ವೈದ್ಯರ ನಿರ್ಲಕ್ಷ್ಯದಿಂದಾಗಿ. ತೆವಳಿಕೊಂಡೇ ಶಾಲೆಗೆ ಹೋಗಲು ಶುರು ಮಾಡಿದ ರಂಗನಾಥ್, ತಮ್ಮ ಕುಟುಂಬದಲ್ಲೇ ಹತ್ತನೇ ತರಗತಿ ಪಾಸ್ ಮಾಡಿದವರಲ್ಲಿ ಮೊದಲಿಗರು. ನಂತರ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಬೆಳಗೂರಿಗೇ ಮೊದಲಿಗರಾದರು. ಟಿಸಿಎಚ್ ತರಬೇತಿ ಪಡೆದು ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳಲು ಶುರು ಮಾಡಿದರು. ಬೆಳಗೂರಿನಲ್ಲಿ ‘ಟ್ಯೂಷನ್ ರಂಗನಾಥ್’ ಎಂದೇ ಚಿರಪರಿಚಿತರು.

‘ನಿಮ್ಮ ಸಾಧನೆ ಎಲ್ಲ ಅಂಗವಿಕಲರಿಗೆ ಮಾದರಿ ಮತ್ತು ಸ್ಪೂರ್ತಿ’ ಎಂದರು ಪುನೀತ್. ರಂಗನಾಥ್ ಅವರಿಗೆ ಕಾಲಿನ ಸಮಸ್ಯೆಯಿಂದಾಗಿ ಓಡಾಡುವುದು ದೊಡ್ಡ ಸಮಸ್ಯೆ. ಪವರ್ ವ್ಹೀಲ್‌ಚೇರ್ ಖರೀದಿಸಬೇಕು ಎಂಬುದು ಅವರ ಕನಸು. ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಗೆಲ್ಲುವ ಹಣದಿಂದ ಅದನ್ನು ಖರೀದಿಸುವುದು ಅವರ ಉದ್ದೇಶ. ರಂಗನಾಥ್ ಅವರ ಕನಸಿಗೆ ಬಲ ನೀಡಬಲ್ಲ ಪವರ್ ವ್ಹೀಲ್‌ಚೇರ್ ಖರೀದಿಸಲು ಅವರಿಗೆ ಸಾಧ್ಯವಾಯಿತೇ ಎಂಬುದನ್ನು ಇದೇ ಶನಿವಾರ ಪ್ರಸಾರವಾಗುವ ‘ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ನೋಡಬಹುದು.

‘ರಂಗನಾಥ್ ಅವರಂಥ ಸಾಮಾನ್ಯ ಮನುಷ್ಯರ ಜೊತೆಗೆ ನಿಲ್ಲಲು ಕಲರ್ಸ್ ಕನ್ನಡಕ್ಕೆ ಹೆಮ್ಮೆಯಾಗುತ್ತಿದೆ’ ಎನ್ನುತ್ತಾರೆ ವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರ್‌ನ ಬ್ಯುಸಿನೆಸ್ ಹೆಡ್ ಮತ್ತು ‘ಕನ್ನಡದ ಕೋಟ್ಯಧಿಪತಿ’ ನಿರ್ದೇಶಕ ಪರಮೇಶ್ವರ ಗುಂಡ್ಕಲ್. ರಂಗನಾಥ್ ಅವರ ಸೂಪರ್ ಎಪಿಸೋಡ್ ಕಲರ್ಸ್ ಕನ್ನಡದಲ್ಲಿ ಜುಲೈ 27ರಂದು ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.