ಮಹಿಳಾ ದಿನಾಚರಣೆ ಪ್ರಯುಕ್ತಸ್ಟಾರ್ ಸುವರ್ಣ ವಾಹಿನಿಯಲ್ಲಿಒಂದು ವಾರ ಮಹಿಳಾ ಸಾಧಕಿಯರ ‘ಕಿಚನ್ ದರ್ಬಾರ್’ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದೆ.

ಅಡುಗೆಮನೆಯಿಂದ ಬಾಹ್ಯಾಕಾಶ ನಿಲ್ದಾಣದವರೆಗೂಮಹಿಳೆಯರ ಸಾಧನೆ ಆಕಾಶದೆತ್ತರಕ್ಕೆ ಹಬ್ಬಿನಿಂತಿದೆ. ಇಂತಹ ಮಹಿಳಾ ಸಾಧಕಿಯರು ಈ ಬಾರಿ ಅಡುಗೆ ಮನೆಯಲ್ಲಿ ತಮ್ಮ ಕೈರುಚಿ ತೋರಿಸಲಿದ್ದಾರೆ. ಮಾರ್ಚ್ 2ರಿಂದ -9ರವರೆಗೆ ಸ್ಟಾರ್ ಸುವರ್ಣವಾಹಿನಿಯ ಕಿಚನ್ ದರ್ಬಾರ್ ಕಾರ್ಯಕ್ರಮದಲ್ಲಿ ಸಾಧಕಿಯರ ದರ್ಬಾರ್ ನಡೆಯಲಿದೆ.ಮಧ್ಯಾಹ್ನ 12ಗಂಟೆಗೆ ಕಿಚನ್ ದರ್ಬಾರ್‌ನಲ್ಲಿ ಸಾಧಕಿಯರ ಕೈ ಅಡುಗೆಯ ಸವಿರುಚಿ ಉಣಬಡಿಸಲಿದ್ದಾರೆ.

ಮಾರ್ಚ್ 2 ಸೋಮವಾರದಂದು ನಟಿ ವನಿತಾ ವಾಸು, ಮಂಗಳವಾರ ಡಿಸಿಪಿ ಇಶಾ ಪಂತ್, ಬುಧವಾರ ರಾಯಚೂರಿನ ರೈತ ಮಹಿಳೆ ಕವಿತಾ ಉಮಾಶಂಕರ್, ಮಾರ್ಚ್ 5 ಗುರುವಾರ ಪಿಡಿಯಾಟ್ರಿಕ್ ಕಾರ್ಡಿಯೋಜಿಸ್ಟ್ ಡಾ.ವಿಜಯ್ ಲಕ್ಷ್ಮಿ ಬಾಳೇಕುಂದ್ರಿ, ಶುಕ್ರವಾರ ಲೇಖಕಿ ಬಿ.ಟಿ.ಲಲಿತಾ ನಾಯಕ್, ಶನಿವಾರ ಬಿಎಂಟಿಸಿಯ ಮೊದಲ ಬಸ್ ಚಾಲಕಿ ಪ್ರೇಮಾ, ಭಾನುವಾರ ಮತ್ತು ಸೋಮವಾರ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿಯವರು ಪಾಲ್ಗೊಳ್ಳಲ್ಲಿದ್ದಾರೆ.ವೃತ್ತಿ ಬದುಕಿನಲ್ಲಿ ಮಹತ್ತರ ಸಾಧನೆಗೈದಿರುವ ಈ ಮಹಿಳೆಯರು, ಅಡುಗೆಮನೆಯಲ್ಲೂ ತಮ್ಮ ಕೈಚಳಕ ತೋರಿಸಲಿದ್ದಾರೆ. ಈ ಕಾರ್ಯಕ್ರಮವನ್ನು ನಟಿ, ನಿರೂಪಕಿ ಸುಜಾತಾ ನಡೆಸಿಕೊಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.