ನವದೆಹಲಿ: ಮೂರು ದಶಕಗಳ ಹಿಂದೆ ರಮನಾಂದ ಸಾಗರ್ ಅವರ ನಿರ್ದೇಶನದಲ್ಲಿ ಮೂಡಿಬಂದ ಪೌರಾಣಿಕ ಧಾರಾವಾಹಿ ‘ರಾಮಾಯಣ’ವನ್ನು ಡಿಡಿ ನ್ಯಾಷನಲ್ ವಾಹಿನಿ ಫೆಬ್ರುವರಿ 5ರಿಂದ ಮತ್ತೆ ಪ್ರಸಾರ ಮಾಡುತ್ತಿದೆ.

ಪ್ರತಿದಿನ ಸಂಜೆ 6 ಗಂಟೆಗೆ ಹಾಗೂ ಮರುದಿನ ಮಧ್ಯಾಹ್ನ 12 ಗಂಟೆಗೆ ಪ್ರಸಾರ ಮಾಡುವುದಾಗಿ ಹೇಳಿದೆ.

ಧರ್ಮ, ಪ್ರೀತಿ ಮತ್ತು ಸಮರ್ಪಣಾ ಭಾವದ ಅನನ್ಯ ಸಾಹಸಗಾಥೆ... ಮತ್ತೊಮ್ಮೆ ಇಡೀ ಭಾರತದ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ರಾಮಾಯಣ' ಬರಲಿದೆ ಎಂದು ಡಿಡಿ ನ್ಯಾಷನಲ್ ಎಕ್ಸ್‌ನಲ್ಲಿ ತಿಳಿಸಿದೆ.

80 ಮತ್ತು 90 ರ ದಶಕದಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿಯಲ್ಲಿ, ಶ್ರೀರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಖಾಲಿಯಾ ಮತ್ತು ಸಹೋದರ ಲಕ್ಷ್ಮಣನಾಗಿ ಸುನಿಲ್ ಲಹ್ರಿ ಕಾಣಿಸಿಕೊಂಡಿದ್ದಾರೆ. ದೇಶದಾದ್ಯಂತ ಜನಮನ್ನಣೆಯನ್ನೂ ಈ ಧಾರಾವಾಹಿ ಗಳಿಸಿತ್ತು.

ಕೊರೊನಾ ಲಾಕ್‌ಡೌನ್ ವೇಳೆಯೂ ರಾಮಾಯಣ ಧಾರಾವಾಹಿಯನ್ನು ಪ್ರಸಾರ ಮಾಡಲಾಗಿತ್ತು. ಆಗಲೂ ಲಕ್ಷಾಂತರ ಜನರು ವೀಕ್ಷಿಸಿ ಜನಪ್ರಿಯತೆ ಪಡೆದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.