ಗಾಂಧಿನಗರ: ಕಳೆದ ಎರಡು ವರ್ಷಗಳಲ್ಲಿ ಗುಜರಾತ್‌ನಲ್ಲಿ ಕನಿಷ್ಠ 240 ಸಿಂಹಗಳು ಮೃತಪಟ್ಟಿವೆ. ಈ ಪೈಕಿ 123 ಮರಿಗಳು ಎಂದು ರಾಜ್ಯ ಅರಣ್ಯ ಸಚಿವ ಮುಲುಭಾಯ್ ಬೇರಾ ಮಂಗಳವಾರ ವಿಧಾನಸಭೆಗೆ ತಿಳಿಸಿದರು.

26 ಸಿಂಹಗಳು ಅಸಹಜ ಕಾರಣಗಳಿಂದ ಸಾವಿಗೀಡಾಗಿವೆ ಎಂದೂ ಸಚಿವರು ಹೇಳಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಅರ್ಜುನ್ ಮೊದ್ವಾಡಿಯಾ ಅವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೇರಾ, ‘ರಾಜ್ಯದಲ್ಲಿ 2021 ಮತ್ತು 2022, ಎರಡು ವರ್ಷಗಳಲ್ಲಿ 100 ಮರಿಗಳು ಸೇರಿದಂತೆ 370 ಚಿರತೆಗಳು ಸಾವಿಗೀಡಾಗಿವೆ’ ಎಂದು ಹೇಳಿದರು.

2021 ರಲ್ಲಿ 124 ಸಿಂಹಗಳು ಮೃತಪಟ್ಟಿದ್ದರೆ, 2022 ರಲ್ಲಿ 116 ಸಾವುಗಳು ವರದಿಯಾಗಿದೆ. ಇನ್ನು 2021 ರಲ್ಲಿ 179 ಚಿರತೆಗಳು ಸಾವಿಗೀಡಾಗಿದ್ದರೆ, ಕಳೆದ ವರ್ಷ 191 ಮೃತಪಟ್ಟಿವೆ ಎಂದು ಸಚಿವರು ತಿಳಿಸಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಅವರು ಈ ಉತ್ತರ ದಾಖಲಿಸಿದ್ದಾರೆ.

ಜೂನ್ 2020ರಲ್ಲಿ ನಡೆಸಿದ ಕೊನೆಯ ಗಣತಿ ಪ್ರಕಾರ, 674 ಏಷ್ಯಾಟಿಕ್ ಸಿಂಹಗಳಿಗೆ ಗುಜರಾತ್ ನೆಲೆಯಾಗಿದೆ. ಏಷ್ಯಾಟಿಕ್ ಸಿಂಹಗಳು ಕಾಣಸಿಗುವ ವಿಶ್ವದ ಏಕೈಕ ರಾಜ್ಯ ಸದ್ಯ ಗುಜರಾತ್ ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.