ಎದುರಾಳಿಯಾದವರು ಎಂಥವರೇ ಆಗಿರಲಿ, ಎಷ್ಟೇ ದೊಡ್ಡ ಆಟಗಾರನಾಗಿರಲಿ ಪ್ರಜ್ಞಾನಂದ ಧೃತಿಗೆಡುವುದಿಲ್ಲ. ಆಟದಲ್ಲಿ ಎಂಥದ್ದೇ ಕಷ್ಟದ ಸಂದರ್ಭ ಎದುರಾದರೂ ತನ್ನ ಬುದ್ಧಿಶಕ್ತಿಯಿಂದ ಅದನ್ನು ಎದುರಿಸುತ್ತಾನೆ. ಇದು ಆತನ ಬಹುದೊಡ್ಡ ಶಕ್ತಿ...

– ಹೀಗೆಂದು ಮುಕ್ತಕಂಠದಲ್ಲಿ ಹೊಗಳಿದವರು, ಅಜರ್ಬೈಜಾನ್ನ ಬಾಕುವಿನಲ್ಲಿ ನಡೆದ ಫಿಡೆ ವಿಶ್ವಕಪ್ ಚೆಸ್ ಟೂರ್ನಿಯ ಭಾರತೀಯ ತಂಡದೊಂದಿಗೆ ಹೋಗಿದ್ದ ಕೋಚ್, ಗ್ರ್ಯಾಂಡ್ಮಾಸ್ಟರ್ ಎಂ. ಶ್ಯಾಮ್ಸುಂದರ್.

ಪ್ರಜ್ಞಾನಂದನಿಗೆ ಈಗ 18 ವರ್ಷ. ಟೂರ್ನಿ ನಡೆಯುತ್ತಿರುವಾಗಲೇ ಅಂದರೆ ಆಗಸ್ಟ್ 10ಕ್ಕೆ ಪ್ರಗ್ಗು (ಆತನ ಮುದ್ದಿನ ಹೆಸರು) 18ಕ್ಕೆ ಕಾಲಿಟ್ಟಿದ್ದ. ಪ್ರಗ್ಗುವಿನದು ಚೆನ್ನೈನ ಮಧ್ಯಮವರ್ಗದ ಕುಟುಂಬ. ತಂದೆ ರಮೇಶ್ ಬಾಬು, ತಾಯಿ ನಾಗಲಕ್ಷ್ಮಿ. ಆತನಿಗೆ ವೈಶಾಲಿ ಎಂಬ ಅಕ್ಕ ಕೂಡ ಇದ್ದಾರೆ.

ಅಕ್ಕನಿಗೆ ಟಿ.ವಿ ನೋಡುವ ಹುಚ್ಚು ಹತ್ತಿಕೊಂಡಿತ್ತು. ವೈಶಾಲಿಯ ಈ ಚಟವನ್ನು ಬಿಡಿಸಲು ಮನೆಯ ಹತ್ತಿರದ ಚೆಸ್ ಅಕಾಡೆಮಿಗೆ ಆಕೆಯನ್ನು ಕಳುಹಿಸುವ ಉಪಾಯವನ್ನು ರಮೇಶ್ ಮಾಡಿದರು. ಕೆಲವೇ ವರ್ಷಗಳಲ್ಲಿ ವೈಶಾಲಿ ದೊಡ್ಡ ಸಾಧನೆ ಮಾಡಿ ಗೆದ್ದರು. 12 ಹಾಗೂ 14 ವರ್ಷದ ಒಳಗಿನ ವಿಶ್ವ ಚಾಂಪಿಯನ್ಶಿಪ್ ಅನ್ನು ಹಾಗೂ ನ್ಯಾಷನಲ್ ಚಾಲೆಂಜರ್ಸ್ ಅನ್ನು ಗೆದ್ದುಕೊಂಡರು. ಅಕ್ಕ ವೈಶಾಲಿಯ ಆಟವನ್ನು ನೋಡುತ್ತಲೇ ಪ್ರಗ್ಗು ಕೂಡ ಚೆಸ್ ಆಟಕ್ಕೆ ಆಕರ್ಷಿತನಾಗಿದ್ದ. ಅಕ್ಕನ ಆಟದ ಪ್ರಭಾವಕ್ಕೆ ಒಳಗಾಗಿದ್ದ. ಇದೇ ಕಾರಣಕ್ಕೆ, ಪ್ರಗ್ಗುವಿಗೆ ಸುಮಾರು ನಾಲ್ಕೂವರೆ ವರ್ಷ ಇರಬಹುದು ಆಗ ಅವನನ್ನೂ ಅಕಾಡೆಮಿಗೆ ಸೇರಿಸದೆ ಬೇರೆ ದಾರಿ ಇಲ್ಲದಾಯಿತು.

‘ಪ್ರಗ್ಗುವನ್ನು ಚೆಸ್ ಆಡಲು ಕಳುಹಿಸಲು ಇಷ್ಟವಿರಲಿಲ್ಲ. ನನಗೆ ಪೋಲಿಯೊ ಆಗಿತ್ತು. ತಮಿಳುನಾಡು ರಾಜ್ಯ ಸಹಕಾರಿ ಬ್ಯಾಂಕ್ನಲ್ಲಿ ಮ್ಯಾನೇಜರ್ ಕೆಲಸ ಮಾಡುತ್ತೇನೆ. ಚೆಸ್ ಬಡವರ ಆಟವಲ್ಲ. ಇದಕ್ಕೆ ಬಹಳ ಖರ್ಚಾಗುತ್ತದೆ. ಅದನ್ನು ಭರಿಸುವ ಶಕ್ತಿ ಇರಲಿಲ್ಲ. ವೈಶಾಲಿಯನ್ನು ಹೇಗೊ ಮುಂದೆ ತಂದೆವು. ಆದರೆ, ಪ್ರಗ್ಗುವನ್ನೂ ಇದೇ ಆಟದಲ್ಲಿ ಮುಂದೆ ತರುವುದು ಕಷ್ಟ ಎನಿಸಿತ್ತು. ಆದರೆ, ಚೆಸ್ ಆಡುವ ಪ್ರಜ್ಞಾನಂದನ ಆಸೆಯು ನನ್ನ ಹಿಂಜರಿಕೆಯನ್ನು ಹಿಮ್ಮೆಟಿಸಿತು’ ಎನ್ನುತ್ತಾರೆ ತಂದೆ ರಮೇಶ್ ಬಾಬು.

ಹಲವು ಮೊದಲುಗಳನ್ನು ಗಳಿಸಿದ ಪ್ರಗ್ಗು: ನಾಲ್ಕೂವರೆ ವರ್ಷಕ್ಕೆ ಚೆಸ್ ಆಡಲು ಆರಂಭಿಸಿದ ಪ್ರಜ್ಞಾನಂದ, ಕೆಲವೇ ವರ್ಷಗಳಲ್ಲಿ ಹಲವು ಮೈಲಿಗಲ್ಲುಗಳನ್ನು ಸಾಧಿಸಿದ್ದ. 7 ವರ್ಷದ ಒಳಗಿನವರ ಟೂರ್ನಿಯಲ್ಲಿ ಚಾಂಪಿಯನ್ ಆದ. ನಂತರ ತನ್ನ 10ನೇ ವರ್ಷದಲ್ಲಿ ‘ಇಟರ್ನ್ಯಾಷನಲ್ ಮಾಸ್ಟರ್’ ಆಗಿ ಹೊರಹೊಮ್ಮಿದ್ದ. ಇದಾದ ಎರಡೇ ವರ್ಷಕ್ಕೆ ಗ್ರ್ಯಾಂಡ್ಮಾಸ್ಟರ್ ಕೂಡ ಆಗಿದ್ದ! ಇವೆಲ್ಲ ಆಗಿದ್ದು ಕೆಲವೇ ವರ್ಷಗಳಲ್ಲಿ. ಅತಿ ಕಿರಿಯ ವಯಸ್ಸಿನಲ್ಲಿ ಗ್ರ್ಯಾಂಡ್ಮಾಸ್ಟರ್ ಆದ ಎರಡನೇ ಆಟಗಾರ ಪ್ರಗ್ಗು.

2019ರಲ್ಲಿ ಅಂದರೆ, ತನ್ನ 14 ವರ್ಷ 3 ತಿಂಗಳ ವಯಸ್ಸಿನಲ್ಲಿಯೇ 2600 ಎಲೊ ರೇಟಿಂಗ್ ಪಡೆದುಕೊಂಡಿದ್ದ. 2020ರ ನಂತರ ಕೋವಿಡ್ ಆತನ ಶ್ರೇಯಸ್ಸಿನ ವೇಗವನ್ನು ಸ್ಪಲ್ಪ ಮಟ್ಟಿಗೆ ತಗ್ಗಿಸಿತು. ಅಂತಾದರೂ ಆನ್ಲೈನ್ ಟೂರ್ನಿಗಳಲ್ಲಿ ಆತ ತನ್ನ ಗೆಲುವಿನ ಹಾದಿಯನ್ನು ಕ್ರಮಿಸಿದ. ಚೆಸ್ನಲ್ಲಿ ಅಗ್ರಗಣ್ಯರು ಎಂದೇ ಕರೆಯುವ ಸರ್ಗಿ ಕಜಾಕಿನ್, ಟೀಮೊರ್ ರಾಜ್ಬೋವ್, ಜ್ಯಾನ್ ಕ್ರಿಸ್ಟೋಫ್ ಡೂಡಾ ಅವರನ್ನು ಈ ಪುಟ್ಟ ಬಾಲಕ ಸೋಲಿಸಿದ.

ಆತನ ಸಾಧನೆಗೆ ಗರಿ ಎಂಬಂತೆ 2022ರಲ್ಲಿ ಆತ ವಿಶ್ವದ ನಂಬರ್ ಒನ್ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿದ. ಮಾಸ್ಟರ್ ವಿಶ್ವನಾಥನ್ ಆನಂದ್ ಹಾಗೂ ಪಿ. ಹರಿಕೃಷ್ಣನ್ ನಂತರದಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿದ ಮೂರನೇ ಆಟಗಾರ ಎನಿಸಿದ!

‘ವಿಶ್ವ ಟೂರ್ನಿಯಲ್ಲಿನ ಆತನ ಆಟಗಳನ್ನು ಗಮನಿದರೆ ಆತನ ಆಟದ ಗುಣಮಟ್ಟ ತಿಳಿಯುತ್ತದೆ. ಬಹಳ ನಾಚಿಕೆ ಸ್ವಭಾವದ ಶಾಂತ ಚಿತ್ತದ ಹುಡುಗ, ಆಟಕ್ಕೆಂದು ಟೇಬಲ್ ಮುಂದೆ ಕುಳಿತರೆ ಆತ ಆಕ್ರಮಣಕಾರಿ ಆಟಗಾರ’ ಎನ್ನುತ್ತಾರೆ ಆತನ ಆಟವನ್ನು ಹತ್ತಿರದಿಂದ ನೋಡಿದವರು. ಇದಕ್ಕೆ ಸಾಕ್ಷಿ ಎಂಬಂತೆ ಆತನ ಸಾಧನೆಗಳು ನಮ್ಮ ಕಣ್ಣಮುಂದಿವೆ. ಇಷ್ಟು ಸಣ್ಣ ವಯಸ್ಸಿಗೆ ತನಗಿಂತ ಹಿರಿಯರ ಜೊತೆ ಬಹಳ ಆತ್ಮವಿಶ್ವಾಸದಿಂದ ಆಡುವುದನ್ನು ಕಂಡಿದ್ದ ಹಲವರು ಆತನ ಶಕ್ತಿಯನ್ನು ಬಹಳ ಹಿಂದೆಯೇ ಊಹಿಸಿದ್ದರು.

ವಿಶ್ವನಾಥನ್ ಆನಂದ್, ದೇಶದಲ್ಲಿ ಹೆಸರು ಮಾಡಿರುವ ಕೋಚ್ ಆರ್.ಬಿ. ರಮೇಶ್ ಅವರಂಥವರ ತೆಕ್ಕೆಯಲ್ಲಿ ಬೆಳೆಯುತ್ತಿರುವ ಪ್ರಜ್ಞಾನಂದ, ಚೆಸ್ ಜಗತ್ತಿನ ದೊಡ್ಡ ತಾರೆಯಾಗುವುರಲ್ಲಿ ಅನುಮಾನವಿಲ್ಲ. ‘ದೈಹಿಕವಾಗಿ ಸಣಕಲು ವ್ಯಕ್ತಿಯಾಗಿದ್ದರೂ, ಪ್ರತಿಭೆಯಲ್ಲಿ ಬಲಾಢ್ಯ’ ಎಂದು ರಮೇಶ್ ಅವರು ಪ್ರಜ್ಞಾನಂದನ ಕುರಿತು ಬಹಳ ಹೆಮ್ಮೆಯಿಂದಲೇ ಹೇಳುತ್ತಾರೆ.

ತಾಯಿಯೇ ಬೆನ್ನೆಲುಬು

ವಿಶ್ವ ಚೆಸ್ ಟೂರ್ನಿಯ ಪಂದ್ಯವೊಂದರಲ್ಲಿ ಗೆದ್ದು ಹೊರಗೆ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಪ್ರಜ್ಞಾನಂದನನ್ನು ಅಲ್ಲೇ ತುಸು ದೂರದಲ್ಲಿ ಮರೆಯಲ್ಲಿ ನಿಂತು ನಗುಮೊಗದಿಂದ, ಕಣ್ಣುಗಳ ತುಂಬ ಹೆಮ್ಮೆಯನ್ನೇ ತುಂಬಿಕೊಂಡು ನೋಡುತ್ತಿದ್ದ ತಾಯಿ ನಾಗಲಕ್ಷ್ಮಿ ಅವರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿತ್ತು. ಮಗನೊಂದಿಗೆ ಇದೇ ನಗುಮೊಗದೊಂದಿಗೆ ಪ್ರತಿ ಪಂದ್ಯದಲ್ಲೂ ಜೊತೆ ಇರುತ್ತಾರೆ ತಾಯಿ ನಾಗಲಕ್ಷ್ಮಿ.

‘ನನ್ನವರು ನನ್ನ ಜೊತೆ ಇರುವುದು ನನಗೆ ಹಿತ ಎನಿಸುತ್ತದೆ. ನನ್ನ ತಾಯಿ ಸದಾ ನನ್ನ ಬೆನ್ನೆಲುಬು. ನಾನು ಪಂದ್ಯದಲ್ಲಿ ಸೋತರೂ ಅವಳು ನನ್ನನ್ನು ಸಂಭಾಳಿಸುತ್ತಾಳೆ. ನನಗೆ ಮಾತ್ರವಲ್ಲ ನನ್ನ ಅಕ್ಕನಿಗೂ ನನ್ನ ತಾಯಿತೇ ಬೆನ್ನೆಲುಬು’ ಎನ್ನುತ್ತಾನೆ ಪ್ರಜ್ಞಾನಂದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.