ಅನ್ನದ ತಿನಿಸುಗಳಲ್ಲಿ ಪಲಾವ್ ಎಂದರೆ ಅನೇಕರಿಗೆ ಅಚ್ಚುಮೆಚ್ಚು. ಚಿತ್ರಾನ್ನ ಎಂದರೆ ಮುಖ ಸಿಂಡರಿಸುವ ಮಂದಿ ತರಕಾರಿ ಸೇರಿಸಿದ ಪಲಾವ್ ಅನ್ನು ಇಷ್ಟಪಟ್ಟು ತಿನ್ನುತ್ತಾರೆ. ರುಚಿಯಾದ ಪಲಾವ್ ಅನ್ನು ತರಕಾರಿಯಿಂದ ಮಾತ್ರವಲ್ಲದೇ ಹಸಿರು ಬಟಾಣಿ, ತೊಂಡೆಕಾಯಿ, ಪುದಿನ ಸೊಪ್ಪಿನಿಂದಲೂ ತಯಾರಿಸಬಹುದು. ಆರೋಗ್ಯಕರವಾದ ವಿವಿಧ ಬಗೆಯ ಬಿಸಿಬಿಸಿ ಪಲಾವ್ ವೈವಿಧ್ಯದ ರುಚಿಯನ್ನು ತಿಳಿಸಿದ್ದಾರೆ ಅರ್ಚನಾ ಬೊಮ್ನಳ್ಳಿ.

ತೊಂಡೆಕಾಯಿ ಅವಲಕ್ಕಿ

ಬೇಕಾಗುವ ಸಾಮಗ್ರಿಗಳು: ದಪ್ಪ ಅವಲಕ್ಕಿ– 1 ಕಪ್, ಈರುಳ್ಳಿ– ಅರ್ಧ ಕಪ್ (ಉದ್ದುದ್ದ ಹೋಳು ಮಾಡಿಕೊಂಡಿದ್ದು), ತೊಂಡೆಕಾಯಿ – ಒಂದು ಕಪ್ (ಉದ್ದ ಹೋಳು ಮಾಡಿಕೊಂಡಿದ್ದು), ಒಗ್ಗರಣೆಗೆ ಎಣ್ಣೆ – 3 ಚಮಚ, ಜೀರಿಗೆ – 1/4 ಚಮಚ, ಉದ್ದಿನಬೇಳೆ – 1 ಚಮಚ, ಅರಿಸಿನ ಪುಡಿ – ಅರ್ಧ ಚಮಚ, ಸಾಸಿವೆ– ಅರ್ಧ ಚಮಚ, ಹಸಿಮೆಣಸಿನ ಕಾಯಿ– 1, ಬೆಲ್ಲ – 2 ಚಮಚ, ಉಪ್ಪು, ಹುಳಿ ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ದಪ್ಪ ಅವಲಕ್ಕಿಯನ್ನು ತೊಳೆದುಕೊಂಡು ಇದಕ್ಕೆ ಉಪ್ಪು, ಹುಳಿ, ಬೆಲ್ಲ ಸೇರಿಸಿ ಮಿಶ್ರಣ ಮಾಡಿಕೊಂಡಿರಿ. ನಂತರ ಒಂದು ಪಾತ್ರೆಗೆ ಒಗ್ಗರಣೆಯ ಎಣ್ಣೆ ಹಾಕಿ ಕಾದ ಮೇಲೆ ಉದ್ದಿನಬೇಳೆ, ಜೀರಿಗೆ, ಸಾಸಿವೆ, ಹಸಿಮೆಣಸು, ಅರಿಸಿನ ಪುಡಿ ಹಾಕಿ ಬೆಂದ ಮೇಲೆ ಈರುಳ್ಳಿ, ತೊಂಡೆಕಾಯಿಯನ್ನು ಹಾಕಿ ಹುರಿದುಕೊಳ್ಳಿ. ಬೆಂದ ಮೇಲೆ ಕಲಸಿಕೊಂಡ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಮಗುಚಿ. ಇದಕ್ಕೆ ಬೇಕೆನಿಸಿದರೆ ಕಾಯಿತುರಿ, ಕೊತ್ತಂಬರಿ ಸೊಪ್ಪು ಸೇರಿಸಬಹುದು. ಬಿಸಿ ಇರುವಾಗಲೆ ತಿನ್ನಿ.

ಹಸಿರು ಬಟಾಣಿ ಆಲೂ ಪಲಾವ್

ಬೇಕಾಗುವ ಸಾಮಗ್ರಿಗಳು: ಅಕ್ಕಿ – 1ಕಪ್, ಆಲೂಗೆಡ್ಡೆ – 1, ಹಸಿರು ಬಟಾಣಿಕಾಳು – 1/2 ಕಪ್, ಈರುಳ್ಳಿ – 1, ಟೊಮೆಟೊ – 1, ಕೊತ್ತಂಬರಿ ಸೊಪ್ಪು ಹಾಗೂ ಪುದಿನ ಸೊಪ್ಪು – ತಲಾ ಕಾಲು ಕಪ್, ಬೆಳ್ಳುಳ್ಳಿ – 6 ಎಸಳು, ಚಕ್ಕೆ ಸ್ವಲ್ಪ, ಜೀರಿಗೆ – 1/2 ಚಮಚ, ಲವಂಗ – 2, ಶುಂಠಿ – ಸ್ವಲ್ಪ, ಏಲಕ್ಕಿ – 2, ಕರಿಮೆಣಸಿನ ಕಾಳು – 4, ಕೆಂಪುಮೆಣಸಿನ ಪುಡಿ – 1 ಚಮಚ, ಅರಿಸಿನ ಪುಡಿ – 1/2 ಚಮಚ, ಹುಳಿ, ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆಗೆ ಎಣ್ಣೆ.

ತಯಾರಿಸುವ ವಿಧಾನ: ಹಸಿರು ಬಟಾಣಿಕಾಳನ್ನು ಹಿಂದಿನ ರಾತ್ರಿಯೆ ನೆನೆಸಿಟ್ಟುಕೊಳ್ಳಿ. ಆಲೂಗೆಡ್ಡೆಯನ್ನು ಸಿಪ್ಪೆ ತೆಗೆದು ಹೋಳುಗಳನ್ನಾಗಿ ಮಾಡಿಕೊಳ್ಳಿ. ನಂತರ ಒಂದು ಪಾತ್ರೆಗೆ ಚಮಚ ಎಣ್ಣೆ ಬಿಟ್ಟು ಈರುಳ್ಳಿ, ಟೊಮೆಟೊ, ಬೆಳ್ಳುಳ್ಳಿ, ಸೊಪ್ಪು ಎಲ್ಲವನ್ನೂ ಕಮ್ಮಗೆ ಹುರಿಯಿರಿ. ಉಳಿದ ಪದಾರ್ಥಗಳನ್ನೂ ಕಮ್ಮಗೆ ಹುರಿದು ನುಣ್ಣಗೆ ರುಬ್ಬಿಕೊಳ್ಳಿ. ಆಮೇಲೆ ಕುಕ್ಕರಿಗೆ ಒಗ್ಗರಣೆಯ ಎಣ್ಣೆ ಹಾಕಿ ನೆನೆಸಿಕೊಂಡ ಬಟಾಣಿಕಾಳು, ಅರಿಸಿನ ಪುಡಿ, ಆಲೂಗೆಡ್ಡೆ ಹಾಕಿ ಒಂದೆರಡು ಸುತ್ತು ಹುರಿಯಿರಿ, ಅಕ್ಕಿ ತೊಳೆದು ಹಾಕಿ, ಮತ್ತೆರಡು ಸುತ್ತು ಹುರಿದುಕೊಂಡು ಉಪ್ಪು, ಹುಳಿ ಸೇರಿಸಿ ಬೇಕಾದಷ್ಟು ನೀರು ಹಾಕಿ, ಮೂರು ವಿಶಲ್ ಹಾಕಿಸಿ.

ಪಾಲಕ್ ಪಲಾವ್

ಬೇಕಾಗುವ ಸಾಮಗ್ರಿಗಳು: ಪಲಾವ್ ಅಕ್ಕಿ – 1 ಕಪ್, ಪಾಲಕ್ ಎಲೆ – 10 ರಿಂದ 15, ಹಸಿರು ಬಟಾಣಿಕಾಳು ಅಥವಾ ಕಾಬೂಲು ಕಡಲೆ – 1/4 ಕಪ್, ಆಲೂಗೆಡ್ಡೆ – 1, ತೆಂಗಿನಕಾಯಿತುರಿ – 1/4 ಕಪ್, ಕೊತ್ತಂಬರಿ ಸೊಪ್ಪು – ಸ್ವಲ್ಪ, ಕೊತ್ತಂಬರಿ ಬೀಜ – 1 ಚಮಚ, ಜೀರಿಗೆ – 1/2 ಚಮಚ, ಲವಂಗ – 2, ಶುಂಠಿ – ಒಂದಿಂಚು, ಹಸಿಮೆಣಸು – ಖಾರಕ್ಕೆ ತಕ್ಕಷ್ಟು, ಪತ್ರೆ, ಚಕ್ಕೆ, ಸ್ವಲ್ಪ, ಬೆಳ್ಳುಳ್ಳಿ – 6 ಎಸಳು, ಈರುಳ್ಳಿ – 1, ಉಪ್ಪು – ರುಚಿಗೆ, ಲಿಂಬೆ ಹೋಳು – 1, ಒಗ್ಗರಣೆಗೆ ಎಣ್ಣೆ ಐದು ಚಮಚ, ಸಾಸಿವೆ – 1/2 ಚಮಚ.

ತಯಾರಿಸುವ ವಿಧಾನ: ಬಟಾಣಿಕಾಳು ಅಥವಾ ಕಾಬೂಲು ಕಡಲೆಯನ್ನು ರಾತ್ರಿಯೇ ನೆನೆಸಿಕೊಳ್ಳಿ. ಆಲೂಗೆಡ್ಡೆಯನ್ನು ಹೋಳು ಮಾಡಿಕೊಳ್ಳಿ. ಅಕ್ಕಿಯನ್ನು ತೊಳೆದು ನೀರು ತೆಗೆದಿಟ್ಟುಕೊಳ್ಳಿ. ನಂತರ ಒಂದು ಪಾತ್ರೆಗೆ ಚಮಚ ಎಣ್ಣೆ ಬಿಟ್ಟು ಕೊತ್ತಂಬರಿ ಬೀಜ, ಜೀರಿಗೆ, ಲವಂಗ, ಚಕ್ಕೆ, ಪತ್ರೆ, ಮೆಣಸಿನ ಕಾಯಿ ಸೇರಿಸಿ ಕಮ್ಮಗೆ ಹುರಿದುಕೊಂಡು ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ತೆಂಗಿನತುರಿ, ಪಾಲಕ್ ಸೊಪ್ಪು, ಕೊತ್ತಂಬರಿ ಸೊಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಕುಕ್ಕರ್‌ಗೆ ಒಗ್ಗರಣೆಯ ಎಣ್ಣೆ ಹಾಕಿ, ಸಾಸಿವೆ ಸಿಡಿಸಿ, ನೆನೆಸಿಕೊಂಡ ಬಟಾಣಿಕಾಳು/ ಕಾಬೂಲು ಕಡಲೆ, ಹೋಳು ಮಾಡಿದ ಆಲೂಗೆಡ್ಡೆ, ತೊಳೆದ ಅಕ್ಕಿ ಹಾಕಿ ಒಂದೆರಡು ಸುತ್ತು ಹುರಿದ ಮೇಲೆ ರುಬ್ಬಿಕೊಂಡ ಪದಾರ್ಥ ಸೇರಿಸಿ. ಬೇಕಾದಷ್ಟು ನೀರು ಬೆರೆಸಿ, ಉಪ್ಪು, ಹುಳಿ ಹಾಕಿ ಕುಕ್ಕರಿನ ಮುಚ್ಚಳ ಮುಚ್ಚಿ, ಮೂರು ಕೂಗು ಕೂಗಿಸಿ, ಕೆಳಗಿಳಿಸಿಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.