ನವದೆಹಲಿ: ಕೋವಿಡ್–19 ಸೋಂಕು ನಿಯಂತ್ರಣಕ್ಕೆ ನೀಡಲಾಗುವ ಲಸಿಕೆಯನ್ನು 217 ಬಾರಿ ಪಡೆದಿರುವುದಾಗಿ ಹೇಳಿದ ಜರ್ಮನಿಯ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಿದ ಸಂಶೋಧಕರು, ‘ಇದು ಆತನ ರೋಗ ನಿರೋಧಕ ಶಕ್ತಿ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಬದಲಿಗೆ ಎಲ್ಲವೂ ಅತ್ಯುತ್ತಮವಾಗಿದೆ’ ಎಂದಿದ್ದಾರೆ.

ನಿಗದಿಗಿಂತ ಹೆಚ್ಚು ಬಾರಿ ಲಸಿಕೆ ಪಡೆದ ನಂತರ ರೋಗನಿರೋಧಕ ಶಕ್ತಿ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಈವರೆಗೂ ಸ್ಪಷ್ಟವಾಗಿರಲಿಲ್ಲ. ಪ್ರತಿಕಾಯಗಳು ದೇಹದಲ್ಲಿರುವ ರೋಗನಿರೋಧಕ ಶಕ್ತಿಯುಳ್ಳ ಜೀವಕೋಶಗಳ ಸಾಮರ್ಥ್ಯವನ್ನು ಕುಗ್ಗಿಸುತ್ತವೆ ಎಂದು ಕೆಲ ವಿಜ್ಞಾನಿಗಳು ನಂಬಿದ್ದರು.

ದಿ ಲ್ಯಾನ್ಸೆಟ್ ಇನ್ಫೆಕ್ಷಿಯಸ್ ಡಿಸೀಸ್ ಜರ್ನಲ್ನಲ್ಲಿ ಈ ಕುರಿತು ಲೇಖನ ಪ್ರಕಟಗೊಂಡಿದ್ದು, ಹೆಚ್ಚು ಬಾರಿ ಲಸಿಕೆ ಪಡೆದ ವ್ಯಕ್ತಿಯ ರೋಗನಿರೋಧಕ ಶಕ್ತಿಯು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದೆನ್ನಲಾಗಿದೆ.

ಸಾರ್ಸ್ ಕೊವಿ–2 ವಿರುದ್ಧ ಜರ್ಮನಿಯಲ್ಲಿ 6 ಕೋಟಿಗೂ ಅಧಿಕ ಜನರಿಗೆ ಹಲವು ಬಾರಿ ಲಸಿಕೆ ನೀಡಲಾಗಿತ್ತು. ಫ್ರೆಡ್ರಿಕ್ ಅಲೆಕ್ಸಾಂಡರ್ ವಿಶ್ವವಿದ್ಯಾಲಯದ ಎರ್ಲಾಂಗೆನ್–ನರ್ನ್ಬರ್ಗ್ನ ಸಂಶೋಧಕರ ತಂಡವು 217 ಬಾರಿ ಲಸಿಕೆ ಪಡೆದಿದ್ದೇನೆ ಎಂದ ವ್ಯಕ್ತಿಯ ಪರೀಕ್ಷೆ ನಡೆಸಿದ್ದಾರೆ. ಅಧಿಕೃತವಾಗಿ ಈತ 134 ಬಾರಿ ಲಸಿಕೆ ಪಡೆದಿರುವುದು ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.

‘ಸುದ್ದಿಪತ್ರಿಕೆಯಲ್ಲಿ ಬಂದ ವರದಿ ಆಧರಿಸಿ ಈ ಅಧ್ಯಯನ ಕೈಗೊಳ್ಳಲಾಗಿತ್ತು. ಹೆಚ್ಚು ಬಾರಿ ಲಸಿಕೆ ಪಡೆದ ವ್ಯಕ್ತಿಯನ್ನು ಸಂಪರ್ಕಿಸಿ ಅವರನ್ನು ಹಲವು ಪರೀಕ್ಷೆಗಳಿಗೆ ಒಳಪಡಿಸಲು ಆಹ್ವಾನಿಸಲಾಯಿತು. ಅವರ ದೇಹದ ರೋಗನಿರೋಧಕ ಶಕ್ತಿಯು ಮುಂದೆ ಎದುರಾದ ಸೋಂಕಿನ ಸಮಸ್ಯೆಯ ಸಂದರ್ಭದಲ್ಲಿ ನೈಜ ರೋಗಕಾರಕವನ್ನು ಪತ್ತೆ ಮಾಡಿ, ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಿದ್ದನ್ನು ಪತ್ತೆ ಮಾಡಲಾಯಿತು’ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ಸಂಶೋಧನೆಯಲ್ಲಿ ಅತಿಯಾದ ಪ್ರತಿಕಾಯವನ್ನು ದೇಹಕ್ಕೆ ಸೇರಿಸಿದರೆ ಅದು ದೇಹದ ರೋಗ ನಿರೋಧಕ ಶಕ್ತಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ವಿಶ್ಲೇಷಿಸಿದರು. ಎಚ್ಐವಿ ಹಾಗೂ ಹೆಪಟೈಟಿಸ್ ಬಿ ಯಂಥ ದೀರ್ಘಕಾಲಿಕ ಸೋಂಕಿನಲ್ಲೂ ಇಂಥ ಪರಿಸ್ಥಿತಿ ನಿರ್ಮಾಣ ಸಾಧ್ಯ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಟಿ–ಸೆಲ್ ಎಂದು ಕರೆಯಲಾಗುವ ಕೆಲವೊಂದು ರೋಗನಿರೋಧಕ ಶಕ್ತಿಯುಳ್ಳ ಜೀವಕೋಶಗಳು ನಂತರ ಬಳಲುತ್ತವೆ. ನಂತರ ಜ್ವರದಂಥ ಉರಿಯೂತದ ಸಂದೇಶಗಳನ್ನು ಬಿಡುಗಡೆ ಮಾಡಲಾರಂಭಿಸುತ್ತವೆ. ಈ ಸಂದರ್ಭದಲ್ಲಿ ಪ್ರತಿಕಾಯಗಳು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ. ಮುಂದೆ ಎಂದೂ ಇದು ಸೋಂಕಿನ ವಿರುದ್ಧ ಹೋರಾಡುವ ಶಕ್ತಿಯನ್ನು ಕಳೆದುಕೊಳ್ಳಲಿದೆ’ ಎಂದಿದ್ದಾರೆ.

‘ಅಧ್ಯಯನ ಸಂದರ್ಭದಲ್ಲೂ ಇದೇ ವ್ಯಕ್ತಿ ಸ್ವಇಚ್ಛೆಯಂತೆಯೇ ಮತ್ತೊಂದು ಬಾರಿ ಲಸಿಕೆ ಪಡೆದರು. ನಂತರ ಅವರ ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆಯು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅರಿಯಲು ನೆರವಾಯಿತು’ ಎಂದು ಸಂಶೋಧಕರು ಹೇಳಿದ್ದಾರೆ.

‘ಈ ಅಧ್ಯಯನದ ಆರಂಭದಿಂದಲೂ ಗಮನಿಸಿದ ಒಂದು ಅಂಶವೆಂದರೆ, ಲಸಿಕೆ ಪಡೆಯುವುದರಿಂದ ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳುವ ಯಾವುದೇ ಲಕ್ಷಣ ಪತ್ತೆಯಾಗಿಲ್ಲ’ ಎಂದು ಸಂಶೋಧಕಿ ಕ್ಯಾಥೆರಿನ್ ಕೊಚರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.