ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಸಿನಿಮಾ ಭರ್ಜರಿ ಯಶಸ್ಸಿನತ್ತ ಮುನ್ನುಗ್ಗುತ್ತಿದೆ.ದೇಶ ವಿದೇಶದಲ್ಲೂ ಈ ಸಿನಿಮಾ ಸದ್ದು ಮಾಡುತ್ತಿದೆ.

ಈ ಚಿತ್ರದಲ್ಲಿ ನಟಿಸಿರುವ ಹಾಲಿವುಡ್ ನಟ ಎಡ್ವರ್ಡ್ ಸೊನೆನ್‌ಬ್ಲಿಕ್ ಅವರು ‘ ಇಂಡಿಯಾ ಟುಡೆ‘ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ದಕ್ಷಿಣ ಭಾರತದಲ್ಲಿ ನಟರಾದ ರಾಮ್ ಚರಣ್, ಜ್ಯೂ. ಎನ್‌ಟಿಆರ್ ಅವರನ್ನು ಅಭಿಮಾನಿಗಳು ದೇವರಂತೆ ಕಾಣುತ್ತಿದ್ದಾರೆ ಹೇಳಿದ್ದಾರೆ.

ರಾಮ್ ಚರಣ್, ಜ್ಯೂ. ಎನ್‌ಟಿಆರ್ ಅದ್ಬುತ ಕಲಾವಿದರು, ಬುದ್ದಿವಂತರು ಕೂಡ. ಅವರ ಜೊತೆ ಕೆಲಸ ಮಾಡಿದ್ದಕ್ಕೆ ನನಗೆ ಖುಷಿ ಇದೆ. ಹಾಗೇ ನಟನೆಯಲ್ಲಿ ಅವರಿಂದ ಸಾಕಷ್ಟು ಕಲಿತಿದ್ದೇನೆ ಎಂದು ಎಡ್ವರ್ಡ್ ಹೇಳಿದ್ದಾರೆ.

ಚಿತ್ರದ ಮೇಕಿಂಗ್ ಅದ್ಧೂರಿಯಾಗಿದ್ದು, ಈಗಾಗಲೇ ಚಿತ್ರ ಗಳಿಕೆಯಲ್ಲಿ ₹500 ಕೋಟಿ ಕ್ಲಬ್ ಸೇರಿದೆ. ಈ ಚಿತ್ರ ಹಿಂದಿ ಭಾಗದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಗಳಿಕೆಯಲ್ಲಿ ಆಂಧ್ರ ಹಾಗೂ ತೆಲಂಗಾಣ ಭಾಗಕ್ಕಿಂದ ಮುಂದಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.