ಶುಕ್ರವಾರ, 27 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

CBIಗಿದ್ದ ಅನುಮತಿ ವಾಪಸ್: ವೃತ್ತಿಪರ ಕಳ್ಳ ಹಾಗೂ ಲೂಟಿಕೋರರ ನಿರ್ಧಾರ ಎಂದ ಬಿಜೆಪಿ

Published : 27 ಸೆಪ್ಟೆಂಬರ್ 2024, 10:08 IST
Last Updated : 27 ಸೆಪ್ಟೆಂಬರ್ 2024, 10:08 IST
ಫಾಲೋ ಮಾಡಿ
Comments

ನವದೆಹಲಿ: ಕರ್ನಾಟಕದಲ್ಲಿ ಸಿ.ಬಿ.ಐ.ಗೆ ನೀಡಲಾಗಿದ್ದ ಮುಕ್ತ ಅನುಮತಿಯನ್ನು ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಜೆಪಿ ಟೀಕಿಸಿದೆ. ಇದು ವೃತ್ತಿ‍ಪರ ಕಳ್ಳರ ಹಾಗೂ ಲೂಟಿಕೋರರ ನಿರ್ಧಾರ ಎಂದು ಎಂದು ಜರಿದಿದೆ.

‘ಕಾನೂನಿನ ಕೈಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಾಜ್ಯದಲ್ಲಿ ಸಿ.ಬಿ.ಐ.ಗೆ ಇದ್ದ ಅನುಮತಿಯನ್ನು ನಿರಾಕರಿಸಲಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ ಹೇಳಿದ್ದಾರೆ. ಅಲ್ಲದೆ ಈ ನಿರ್ಧಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಪ್ಪಿತಸ್ಥ ಮನಸ್ಸನ್ನು ತೋರ್ಪಡಿಸುತ್ತದೆ’ ಎಂದಿದ್ದಾರೆ.

‘ಮುಡಾದಲ್ಲಿ ಸಾವಿರಾರು ಕೋಟಿ ರೂಪಾಯಿಯ ಅಕ್ರಮ ನಡೆದಿದೆ. ಇದರ ಬಳಿಕ ಕಾಂಗ್ರೆಸ್‌ ಯಾವುದೇ ಪ್ರಮಾಣಿಕೃತ ಕಳ್ಳ ಹಾಗೂ ಲೂಟಿಕೋರನಿಂದ ನಿರೀಕ್ಷಿಸಿದಂತೆ ನಡೆದುಕೊಂಡಿದೆ. ಕಾಂಗ್ರೆಸ್ ವೃತ್ತಿ‍ಪರ ಕಳ್ಳ ಹಾಗೂ ಭ್ರಷ್ಟ ಪಕ್ಷದಂತೆ ನಡೆದುಕೊಳ್ಳುತ್ತಿದೆ. ಸಿದ್ದರಾಮಯ್ಯ ಕೂಡ ಇದೇ ನಡೆಯನ್ನು ಅನುಸರಿಸುತ್ತಿದ್ದಾರೆ’ ಎಂದು ಪೂನಾವಾಲ ಹೇಳಿದ್ದಾರೆ.

ಮುಡಾದಲ್ಲಿ ಸುಮಾರು ₹ 5 ಸಾವಿರ ಕೋಟಿ ಹಗರಣ ನಡೆದಿದ್ದು, ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT