ನವದೆಹಲಿ: ಎನ್‌ಸಿಪಿಯ ಶರದ್ ಪವಾರ್ ಬಣಕ್ಕೆ ಚುನಾವಣಾ ಆಯೋಗವು ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ– ಶರದ್‌ಚಂದ್ರ ಪವಾರ್’ ಎಂಬ ಹೆಸರನ್ನು ಬುಧವಾರ ಹಂಚಿಕೆ ಮಾಡಿದೆ.

ಮುಂಬರುವ ರಾಜ್ಯಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೂರು ಹೊಸ ಹೆಸರುಗಳನ್ನು ಸೂಚಿಸುವಂತೆ ಆಯೋಗವು ಸಲಹೆ ನೀಡಿತ್ತು. ಅದರಂತೆ ಶರದ್ ಬಣವು, ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ–ಶರದ್‌ಚಂದ್ರ ಪವಾರ್’, ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ–ಶರದ್ ರಾವ್ ಪವಾರ್’ ಮತ್ತು ‘ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ–ಶರದ್ ಪವಾರ್’ ಹೆಸರುಗಳನ್ನು ಸೂಚಿಸಿತ್ತು.

'ಆಲದ ಮರ’ ಚಿಹ್ನೆಯನ್ನು ತಮ್ಮ ಬಣಕ್ಕೆ ನೀಡಬೇಕು ಎಂದೂ ಪವಾರ್ ಬಣವು ಆಯೋಗವನ್ನು ಕೋರಿತ್ತು.

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ನೇತೃತ್ವದ ಎನ್‌ಸಿಪಿ ಬಣವನ್ನೇ ನೈಜ ಎನ್‌ಸಿಪಿ ಎಂದು ಮಂಗಳವಾರ ಪ್ರಕಟಿಸಿದ್ದ ಚುನಾವಣಾ ಆಯೋಗವು, ಪಕ್ಷದ ‘ಗೋಡೆ ಗಡಿಯಾರ’ ಚಿಹ್ನೆಯನ್ನೂ ಅದೇ ಬಣಕ್ಕೆ ಹಂಚಿಕೆ ಮಾಡಿತ್ತು.
.NCP ರಾಜಕೀಯ ಬಿಕ್ಕಟ್ಟು: ಸುಪ್ರೀಂ ಕೋರ್ಟ್ನಲ್ಲಿ ಕೇವಿಯಟ್ ಸಲ್ಲಿಸಿದ ಅಜಿತ್ ಬಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.